ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ ಬೃಹತ್ ಉದ್ಯೋಗ ಮೇಳ

ರಾಣೆಬೆನ್ನೂರಲ್ಲಿ  ಬೃಹತ್ ಉದ್ಯೋಗ ಮೇಳ

ರಾಣೆಬೆನ್ನೂರು 02:  ಇಲ್ಲಿನ ಬಿ.ಕೆ.ಗುಪ್ತ ಕಾಲೇಜು ಆವರಣದಲ್ಲಿ, ಮಾಜಿ ಸಭಾಧ್ಯಕ್ಷ ಕೆ. ಬಿ.ಕೋಳಿವಾಡರ 79ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರವು ಅಪಾರ ಸಂಖ್ಯೆಯ ಅಭಿಮಾನಿಗಳ ಮಧ್ಯೆ ಅದ್ದೂರಿಯಾಗಿ, ನೆರವೇರಿಸಲಾಯಿತು. ಜನ್ಮದಿನೋತ್ಸವದ ನಿಮಿತ್ತ, ಪಿಕೆಕೆ ಇನಿಷಿಯೇಟಿವ್ ಸಂಸ್ಥೆ ನಾಡಿನ 79 ಕಂಪನಿಗಳಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಐದು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶವಿರುವ ವಿವಿಧ ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು. 

ಉದ್ಯೋಗ ಅರಸಿ  ಬಂದ, 3000ಕ್ಕೂ ಹೆಚ್ಚು ಯುವಕ ಯುವತಿಯರು, ತಮ್ಮ ಪ್ರಬುದ್ಧತೆಯ ಸಂದರ್ಶನವನ್ನು ನೀಡುವುದರ ಮೂಲಕ, ಸಾವಿರಾರು ಯುವಕ ಯುವತಿಯರು ಮತ್ತು ವಿಶೇಷವಾಗಿ ವಿಕಲಚೇತನರು ಸ್ಥಳದಲ್ಲಿಯೇ ನೇಮಕಾತಿ ಆದೇಶ ಪತ್ರವನ್ನು ಪಡೆಯುವುದರ ಮೂಲಕ, ಧನ್ಯತೆಯ ಭಾವ ಹೊಂದಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ್ ಕೋಳಿವಾಡ, ಎಸ್ಎಫ್ಎನ್ ಗಾಜಿಗೌಡ್ರ, ಅಜ್ಜಂಪೀರ್ ಖಾದ್ರಿ, ರುದ್ರಪ್ಪ ಲಮಾಣಿ, ಎಂ. ವಿ.ಹಿರೇಮಠ, ಕೊಟ್ರೇಶಪ್ಪ ಬಶೇಗಣ್ಣಿ, ಬಿ.ಎಸ್. ಮರದ, ಏಕನಾಥ ಭಾನುವಳ್ಳಿ, ಕೃಷ್ಣಪ್ಪ ಕಂಬಳಿ, ಬಸವರಾಜ ಸವಣೂರು, ಇರ್ಪಾನ್ ದಿಡಗೂರು, ಪಿ. ಜೆ.ಮರಿಯಮ್ಮನವರ, ಗಂಗಾಧರ ಬಣಕಾರ್, ಶ್ರೀನಿವಾಸ್ ಸಾಹುಕಾರ್, ಸುಭಾಸ್ ಸಾಹುಕಾರ್, ಪೂರ್ಣಿಮಾ ಕೋಳಿವಾಡ, ಸೇರಿದಂತೆ ಪಿಕೆಕೆ ಪದಾಧಿಕಾರಿಗಳು, ಸಾವಿರಾರು ಉದ್ಯೋಗಾಕಾಂಕ್ಷಿಗಳು, ನಾಡಿನ ವಿವಿಧ ಕಂಪನಿಗಳ ಮುಖ್ಯಸ್ಥರು, ಅಧಿಕಾರಿಗಳು ಪಾಲ್ಗೊಂಡಿದ್ದರು. 

ಸುದ್ದಿ ಓದಿ