ಹೂಲಿ ಗ್ರಾಮದಲ್ಲಿ ಹೊಯ್ಸಳರ ಕಾಲದ ತಾಮ್ರದ ಲಾಂಛನ ಪತ್ತೆ
ಉಗರಗೋಳ: 'ಶಿಲ್ಪಕಲೆಯ ತೊಟ್ಟಿಲು' ಎಂದೇ ಖ್ಯಾತಿ ಗಳಿಸಿದ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ಇರುವ ಸ್ಮಾರಕಗಳಿಗೆ ಲೆಕ್ಕವಿಲ್ಲ. ಈ ಐತಿಹಾಸಿಕ ಗ್ರಾಮದ ಕೃಷಿಭೂಮಿಯಲ್ಲಿ ಹೊಯ್ಸಳರ ಕಾಲದ ತಾಮ್ರದ ರಾಜಲಾಂಛನ ಪತ್ತೆಯಾಗಿದೆ.
'ಶಿಲ್ಪ ವೈಭವದ ಶ್ರೀಮಂತಿಕೆ' ಕಾರಣದಿಂದ ಮಿನಿ ಹಂಪಿ ಎಂದೇ ಕರೆಯಲ್ಪಡುವ ಈ ಗ್ರಾಮದಲ್ಲಿ ಪುರಾತನ ಕಾಲದ 101 ದೇವಸ್ಥಾನಗಳಿವೆ. ಕಲ್ಯಾಣದ ಚಾಲುಕ್ಯರು ನಿಮರ್ಿಸಿದ ಐತಿಹಾಸಿಕ ಪಳೆಯುಳಿಕೆಗಳು ಇವಾಗಿವೆ. ಆದರೆ, ಇದೇ ಪ್ರಥಮ ಬಾರಿ ಹೊಯ್ಸಳರ ಕಾಲದ ಪರೂಪದ ರಾಜ ಲಾಂಛನವೊಂದು ಪತ್ತೆಯಾಗಿರುವುದು ಇತಿಹಾಸ ಪ್ರೀಯರ ಕುತೂಹಲ ಹೆಚ್ಚಿಸಿದೆ.
ಇಷ್ಟು ದಿನಗಳವರೆಗೆ ರಾಜ್ಯದ ವಿವಿಧೆಡೆ ಕಲ್ಲಿನಲ್ಲಿ ಹೊಯ್ಸಳರ ಕಾಲದ ಲಾಂಛನ ದೊರೆತಿದ್ದವು. ಆದರೆ, ಈಗ ತಾಮ್ರದಲ್ಲಿ ಲಾಂಛನವೊಂದು ಸಿಕ್ಕಿದೆ. ಇದು 14 ಶತಮಾನದ್ದು ಎಂದು ಅಂದಾಜಿಸಲಾಗಿದ್ದು, ಈ ಭಾಗದಲ್ಲಿ ಹೊಯ್ಸಳರು ಆಳ್ವಿಕೆ ನಡೆಸುತ್ತಿದ್ದರು ಎಂಬುದಕ್ಕೆ ಮಹತ್ವದ ಸಾಕ್ಷ್ಯ ಸಿಕ್ಕಂತಾಗಿದೆ.
ಇಲ್ಲಿನ ರೈತ ರಂಗಪ್ಪ ಹೊಳಗ್ಯಾರ ಅವರು ಉಳುಮೆ ಮಾಡುವಾಗ, ಅಪರೂಪದ ಲಾಂಛನ ಸಿಕ್ಕಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಪುರಾತತ್ವ ಸವರ್ೇಕ್ಷಣಾ ಇಲಾಖೆ ಧಾರವಾಡ ವಲಯದ ಇಲಾಖೆ ಅಧಿಕಾರಿಗಳು ಭಾನುವಾರ ಹೂಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಾತತ್ವ ಸವರ್ೇಕ್ಷಣಾ ಇಲಾಖೆ ಧಾರವಾಡ ವಲಯದ ಸಹಾಯಕ ಅಧೀಕ್ಷಕ ವೀಧರು ಡಾ.ಎಚ್.ಆರ್.ದೇಸಾಯಿ, ಡಾ ಎಸ್. ಎಂ. ದೇವರಾಜ, ಬೆಳಗಾವಿ ಇನ್ ಚಾಜರ್್ ಅಜಯ ಜನಾರ್ದನ್ ಅವರು ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದರು.
ಸಂಶೋಧನೆಗೆ ಒತ್ತಾಯ: ನಮ್ಮೂರಿನಲ್ಲಿ ಕಲ್ಯಾಣ ಚಾಲುಕ್ಯರು ನಿಮರ್ಿಸಿದ ಹಲವಾರು ದೇವಸ್ಥಾನಗಳಿವೆ. ಇದೇ ಮೋದಲು ಸಲ ಹೊಯ್ಸಳರ ಕಾಲದ ಲಾಂಛನ ಸಿಕ್ಕಿದ್ದು, ಈ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಮಂಜುನಾಥ ನಾಯ್ಕರ ಒತ್ತಾಯಿಸಿದರು.
ಹೂಲಿ ಗ್ರಾಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ, ಇಲ್ಲಿ ಮೂಲಸೌಕರ್ಯ ಇಲ್ಲದಿರುವುದು ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದೆ. ಭವ್ಯ ಸಂಪತ್ತು ತನ್ನ ಒಡಲಲ್ಲಿದ್ದರೂ ಪ್ರವಾಸೋದ್ಯಮ ಅಭಿವೃದ್ದಿಯಾಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಸವರ್ೇಕ್ಷಣಾ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಬೇಕಾಗಿದೆ. ಪುರಾತನ ಸ್ಮಾರಕಗಳನ್ನು ಸಂರಕ್ಷಿಸಿ ಇದನ್ನು ಪ್ರವಾಸಿ ತಾಣವಾಗಿ ಅಭಿವದ್ದಿ ಪಡಿಸಿಬೇಕೆಂದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ತರು ಆಗ್ರಹಿಸಿದರು.
ಲಾಂಛನ ಪತ್ತೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ