ಶಿಗ್ಗಾವ್

ಹೋಸಕಟ್ಟಿ ಕರಿಯಮ್ಮದೇವಿಗೆ ಉಡಿ ತುಂಬಿಸುವ ಕಾರ್ಯಕ್ರಮ

ಹೋಸಕಟ್ಟಿ ಕರಿಯಮ್ಮದೇವಿಗೆ ಉಡಿ ತುಂಬಿಸುವ ಕಾರ್ಯಕ್ರಮ

ಶಿಗ್ಗಾವಿ 30:  ತಾಲೂಕಿನ ಕುನ್ನೂರ ಗ್ರಾಮದ ಹೋಸಕಟ್ಟಿ ಕರಿಯಮ್ಮದೇವಿಗೆ ಉಡಿ ತುಂಬಿಸುವ ಕಾರ್ಯಕ್ರಮದ ಅಂಗವಾಗಿ ಆವರಣದಲ್ಲಿ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಎಪ್ರೀಲ್ 1 ರಂದು ರಾತ್ರಿ 9 ಗಂಟೆಗೆ ಭಾರಿ ಸವಾಲ್ ಜವಾಬ ಭಜನಾ ಸ್ಪರ್ಧೆಯನ್ನು ಏರಿ​‍್ಡಸಲಾಗಿದೆ. 

ಕುಂದಗೋಳ ತಾಲೂಕಿನ ರೇಣುಕಾಚಾರ್ಯ ಭಜನಾ ಸಂಘದಿಂದ ಹಾ.ಮಾಸ್ತರ ರಮೇಶ ಪ ತಂಬೂರ ಹಾಗೂ ಸವಣೂರ ತಾಲೂಕಿನ ಬಡ್ನಿ ಗ್ರಾಮದ ಮಾರುತಿ ಭಜನಾ ಸಂಘದ ಹಾ.ಮಾಸ್ತರ ಮಹ್ಮದಗೌಸ್ ಆ ಮೊಮಿನ ಸಂಘಡಿಗರಿಂದ ಜರುಗಲಿದೆ.  

ಪ್ರಥಮ ಬಹುಮಾನವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕೋಡಮಾಡಿದ 31000(ಮೂವತ್ತೋಂದು ಸಾವೀರ ರುಪಾಯಿಗಳು) ಅರ್ಧ ತೋಲಿ ಬಂಗಾರ ನೀಡಲಾಗುವದು. ಎರಡನೇ ಬಹುಮಾನ ಕುನ್ನೂರನ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಜಯದೇವ ಅಗಡಿ ಕೊಡಮಾಡಿದ 21000 (ಇಪ್ಪತ್ತೊಂದು ಸಾವೀರ ರುಪಾಯಿಗಳು) ನೀಡಲಾಗುವದು. 

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇರವೆರಿಸುವರು, ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವೇ.ಮೂ.ಸೋಮಯ್ಯನವರ ಉ.ಹಿರೇಮಠ ವಹಿಸುವರು. ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಮಹೇಶ ಚಿಕ್ಕವೀರಮಠ ವಹಿಸುವರು. 

ಕಾರ್ಯಕ್ರಮದ ಜ್ಯೋತಿಯನ್ನು ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ನೇರವೆರಿಸುವರು. ಕುನ್ನೂರನ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಜಯದೇವ ಅಗಡಿ, ಮಾಜಿ ಶಾಸಕ ಸಯ್ಯದ ಅಜ್ಜೀಂಫೀರ ಖಾದ್ರಿ, ದಲಿತ ಸಂಘದ ಮುಖಂಡರಾದ ಡಿ.ಎಸ್‌.ಮಾಳಗಿ, ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಹುಬ್ಬಳ್ಳಿಯ ಲ್ಯಾಂಡ್ ಲಾರ್ಡ ವರೂಣಗೌಡ್ರ ಎಂ.ಪಾಟೀಲ, ಶಿಗ್ಗಾವಿ ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್‌ಐ ಸಂಗನೌಡ ಪಾಟೀಲ, ಜಿಪಂ ಸದಸ್ಯರಾದ ಎನ್,ಸಿ.ಪಾಟೀಲ, ಡಾ,ಮಲ್ಲೇಶಪ್ಪ ಹರಿಜನ, ತಾ.ಪಂ ಸದಸ್ಯ ಮಲ್ಲೇಶಪ್ಪ ದೊಡ್ಡಮನಿ, ಶ್ಯಾಡಂಬಿ ಮ್ಯಾಟ್ ಕಾಟ್ ವಿಲ್ಲಾನ ಹುಬ್ಬಳ್ಳಿಯ ಕೀರಣ ಅಂಟೋನಿ, ಹೇಮಂತ ನಾ ಮೋದಿ, ಎಪಿಎಂಸಿ ಸದಸ್ಯ ತಿಪ್ಪಣ್ಣಾ ಸಾತಣ್ಣವರ, ಎಲ್‌.ಆರ್‌.ಪಾಟೀಲ ಪತ್ರಕರ್ತರಾದ ಬಿ.ಎಸ್‌.ಹಿರೇಮಠ, ಶಿವಾನಂದ ದೋಡ್ಡಮನಿ, ಸೇರಿದಂತೆ ಗ್ರಾ.ಪಂ ಸದಸ್ಯರುಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. 


ಸುದ್ದಿ ಓದಿ