ಶಿಗ್ಗಾವ್

ರೈತ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ

ರೈತ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ27 : ಪಟ್ಟಣದ ಅಂಬೇಡ್ಕರ ಓಣಿಯ ನಿವಾಸಿ ಪಕ್ಕೀರಪ್ಪ ನಾಗಪ್ಪ ಬನ್ನಿಮಟ್ಟಿ ಇವರು 40 ವರ್ಷದಿಂದ ಸ್ವಂತ ಜಮೀನು ಇಲ್ಲದಿದ್ದರೂ ಮತ್ತೋಬ್ಬರ ಜಮೀನಿನಲ್ಲಿ ಲಾವಣಿ ಮಾಡಿ  ರೈತವರ್ಗಕ್ಕೂ ಮತ್ತು ಇತರರಿಗೇ ಮಾದರಿಯಾಗಿದ್ದಾರೆ.ಇವರ ಕಾರ್ಯಚಟುವಟಿಕೆಗಳನ್ನು ಗಮನಿಸಿ ಇಂದು ರೈತ ದಿನಾಚರಣೆಯ ಅಂಗವಾಗಿ ರೈತ ದಂಪತಿಗಳಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.  

ಈ ಸನ್ಮಾನ ಕಾರ್ಯವನ್ನು  ಗುತ್ತಿಗೆದಾರರ ಕೇಂದ್ರ ಸಮಿತಿಯ ಸದಸ್ಯ ಹಾಗೂ ಸಮಾಜ ಸೇವಕ ಮಂಜುನಾಥ ಮಣ್ಣಣ್ಣವರ,ಬಸವರಾಜ ನರಗುಂದ, ಸಲೀಂ ದುಖಾನದಾರ, ಗದಿಗೆಪ್ಪ ಕೊಡ್ಲಿವಾಡ ಉಪಸ್ಥಿತರಿದ್ದು ನೇರವೇರಿಸಿದರು.  


ಸುದ್ದಿ ಓದಿ