ಸೌಂದತ್ತಿ

ಕುಡಿಯುವ ನೀರಿನ ಟ್ಯಾಂಕ್, ಪೈಪ್ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ

ಕುಡಿಯುವ ನೀರಿನ ಟ್ಯಾಂಕ್, ಪೈಪ್ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ

ಲೋಕದರ್ಶನ ವರದಿ

ಉಗರಗೋಳ 04: ಪ್ರತಿಯೊಂದು ಹಳ್ಳಿಗಳಲಿ,್ಲ ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಲು ಮತ್ತು ಉತ್ತಮ ಪರಿಸರ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ  ನೀರಿನ ಪಾತ್ರ ಪ್ರಮುಖವಾಗಿದೆ ಎಂದು  ಉಗರಗೋಳ ಗ್ರಾಮ ಪಂಚಯತ ಅಧ್ಯಕ್ಷ ಮಂಜುನಾಥ ಕಾಳಪ್ಪನವರ ಎಂದು ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳ ಗಾಂಧಿ ನಗರದ ಬಡಾವಣೆಯಲ್ಲಿ ಸೋಮವಾರದಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ. ಜೆ ಜೆ ಎಮ್ ಯೋಜನೆ ಅಡಿಯಲಿ ಸುಮಾರು 26 ಲಕ್ಷ ರೂ ವೆಚ್ಚದಲ್ಲಿ 25 ಸಾವಿರ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಪೈಪ್ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಗಾಂಧಿನಗರದ ಪ್ರತಿಯೊಂದು ಮನೆಗಳಲ್ಲಿ ನೀರಿನ ಕೊರತೆ ತಪ್ಪಿಸಲು ಈ ಯೋಜನೆ ತಂದಿದ್ದು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ದೊರಕಲಿದೆ ಎಂದ ಅವರು ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಿಸಿ ಎಂದು ಕರೆ ನೀಡಿದರು.

ಸಿದ್ದನಗೌಡ ಗೂಡ್ರಾಶಿ, ನಿಂಗನಗೌಡ ಹರಳಕಟ್ಟಿ, ಸಂಜು ಚನ್ನಪ್ಪಗೌಡ್ರ, ಮಹೇಶ ಹನಶಿ, ಘಟಿಗೇಪ್ಪ ಶಿದ್ದಕ್ಕನವರ, ಮಾರುತಿ ಶಿಂಧೆ, ರಾಜು ಬಾರಿಗಿಡದ, ಮಹೇಶ ಗೋರವನಕೋಳ್ಳ, ಅಭಿಷಕಗೌಡ ತಿಪರಾಶಿ, ಅಪ್ಪು ಕಾಳಪ್ಪನವರ, ಮಡಿವಾಳಿ ತಳವಾರ, ಶರೀಫ್ ಬಾರಿಗಿಡದ,  ಶಿವನಗೌಡ ಗಡಾದಗೌಡ್ರ, ಪಿಡಿಓ ಮಹೇಶ ತೆಲಗಾರ, ಅಕ್ಷಯ ವಡವಡಗಿ, ಮಂಜು ಬಂಟನವರ, ಮಹೇಶ ಕಾಳಪ್ಪನವರ, ಪರಮಾನಂದ ಕೋಟೂರ, ಬಸವರಾಜ ಜಲಗಾರ, ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಇತರರು ಇದ್ದರು 

ಸುದ್ದಿ ಓದಿ