ಮಹಿಳೆಯರಿಬ್ಬರನ್ನು ಬಂಧಿಸಿ ಕಿರುಕುಳ: ಪಿಎಸ್ಐ ವಿರುದ್ಧ ಕ್ರಮಕ್ಕೆ ಮನವಿ
ಬಳ್ಳಾರಿ : ಸಮಾಜದ ಮಹಿಳೆಯರಿಬ್ಬರನ್ನು ಬಂಧಿಸಿ ಕಿರುಕುಳ ಚಿತ್ರಹಿಂಸೆ ನೀಡಿದ್ದಾರೆಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಮಹಿಳಾ ಪಿ.ಎಸ್.ಐ. ವಿರುದ್ಧ ಬುಡುಗ ಜಂಗಮ ಸಮಾಜದ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ವಿಜಯನಗರಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.
ಮನವಿಯಲ್ಲಿ ಶ್ರಾವಣ ಮಾಸದಲ್ಲಿ ಹೋಗುವ ಸಂಪ್ರದಾಯದಂತೆ ಭಿಕ್ಷಾಟನೆಗಾಗಿ ಹೋದ ಸುನಿತ ಜಮ್ಮನ್ನ ಮೀರಾಲಿ ಹಾಗೂ ಕಮಲಮೋತಿ ಎಂಬ ಮಹಿಳೆಯರಿಬ್ಬರನ್ನು ದಿ.11ರಂದು ಕಳ್ಳತನದ ಸುಳ್ಳು ಆರೋಪ ಹೊರಿಸಿ ಬಂಧಿಸಿ ಕಿರುಕುಳ ಚಿತ್ರಹಿಂಸೆ ನೀಡಿದ್ದಾರೆ. ಮಹಿಳೆಯರ ಮೇಲೆ ಪುರುಷ ಪೊಲೀಸ್ ಅಧಿಕಾರಿಗಳು ಸಹ ಹಲ್ಲೆ ಮಾಡಿದ್ದಾರೆ. ಹೊಟೆ-ಬಟ್ಟೆ ಕಟ್ಟಿ ಖರೀದಿಸಿ ಮನೆಯಲ್ಲಿಟ್ಟಿದ್ದ್ 14 ತೊಲೆ ಬಂಗಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಸಮುದಾಯದ ಮುಖಂಡರನ್ನು ಹೀಯಾಳಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುನಿತ ಜಮ್ಮನ್ನ ಮೀರಾಲಿ ಇವರನ್ನು ವಿಚಾರಣೆ ನಡೆಸಿ ಯಾವುದೇ ತಪ್ಪಿಲ್ಲವೆಂದು ದಿ. 13ರಂದುಬಡುಗಡೆ ಮಾಡಿದ್ದಾರೆ.ಕಮಲ ಮೋತಿ ಇವರನ್ನು ದಿ. 13ರ ರಾತ್ರಿ 8ಗಂಟೆಗೆ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ ಎಂದು ಮರಿಯಮ್ಮನಹಳ್ಳಿ ಪಿ.ಎಸ್.ಐ., ಅವರು ತಿಳಿಸಿದ್ದಾರೆ. ಆದರೆ ಅವರನ್ನು ಬಂಧಿಸಿದಾಗಿನಿಂದ ನ್ಯಾಯಾಲಯದ ವಶಕ್ಕೆ ನೀಡುವವರೆಗೂ ಸಹ ಅವರ ಸಂಬಂಧಿಕರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಮುಖಂಡರಗಳು ದಿ. 14ರಂದು ಬಂಧಿಕಾನೆ, ಹೊಸಪೇಟೆಗೆ ಹೋಗಿ ಮಹಿಳೆಯನ್ನು ನೋಡಲಾಗಿ ಮಹಿಳೆಯು ಸ್ವಂತ ಶಕ್ತಿಯಿಂದ ಎದ್ದು ನಿಲ್ಲಲು ಸಹ ಸಾಧ್ಯವಾಗದೇ ಹಾಗೂ ಕಾಲು, ಕೈಗಳು ಬಾಹು ಸಹ ಬಂದಿರುತ್ತದೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿದ್ದು, ಈ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮ್ಮ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಮನವಿ ಅರ್ಪಿಸುವಾಗ ಅಧ್ಯಕ್ಷ ಸಣ್ಣಮಾರೆಪ್ಪ, ಉಪಾಧ್ಯಕ್ಷ ವಿ.ಸಣ್ಣಜ್ಜಯ್ಯ, ವೀರೇಶ್ ವಕೀಲರು ದಾವಣಗೇರಿ, ಬಸವರಾಜ್ ವಕೀಲರು ಹೊಸಪೇಟೆ, ಕುಮಾರಸ್ವಾಮಿ ವಕೀಲರು ದಾವಣಗೇರಿ, ಮಲ್ಲೇಶಪ್ಪ, ಮೋತಿ ಕೃಷ್ಣಪ್ಪ, ಬಾದಿಗಿ ಹನುಮಂತಪ್ಪ, ಕೆ.ನಾಗರಾಜ, ಲಕ್ಷ್ಮಣ, ಅಂಜಿನಿ, ಗಂಗಾಧರ ಮತ್ತು ಇನ್ನಿತರರು ಇದ್ದರು