ಸೌಂದತ್ತಿ

ಗುರುಸ್ಮರಣೆ ಶ್ರೇಷ್ಠ ಕಾರ್ಯ: ಉಮೇಶ ನರಗುಂದ

ಗುರುಸ್ಮರಣೆ ಶ್ರೇಷ್ಠ ಕಾರ್ಯ: ಉಮೇಶ ನರಗುಂದ

ಲೋಕದರ್ಶನ ವರದಿ

ಸವದತ್ತಿ 27: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾಡುವಂತ ಶ್ರೇಷ್ಠ ಕಾರ್ಯಗಳಲ್ಲಿ ಗುರುಸ್ಮರಣೆಯು ಒಂದಾಗಿದೆ ಎಂದು ಜಿ.ಜಿ.ಚೋಪ್ರಾ ಸರಕಾರಿ ಪ್ರೌಢಶಾಲೆ ಉಪಪ್ರಾಚಾರ್ಯ ಉಮೇಶ ನರಗುಂದ ಹೇಳಿದರು.

ಪಟ್ಟಣದ ಸರಕಾರಿ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಜಿ.ಜಿ.ಚೋಪ್ರಾ ಸರಕಾರಿ ಪ್ರೌಢಶಾಲೆ ಸವದತ್ತಿಯ 2000-01 ಸಾಲಿನ ಎಸ್.ಎಸ್.ಎಲ್.ಸಿ.   ವಿದ್ಯಾಥರ್ಿಗಳಿಂದ ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗುರುವಂದನಾ ಕಾರ್ಯಕ್ರಮವು ಗುರು ಶಿಷ್ಯರ ಗತ ಭಾಂದವ್ಯದ ವಿಶಿಷ್ಟ ಸಂಗಮವಾಗಿದ್ದು, ಕಲಿತ ಶಾಲೆಯನ್ನು ಹಾಗೂ ವಿದ್ಯೆ ಕಲಿಸಿದ ಗುರುವನ್ನು ಮರೆತರೆ ಹೆತ್ತ ತಂದೆ ತಾಯಿಯನ್ನು ಮರೆತಂತೆ ಎಂದರು. ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ತಾವು ಕಲಿತಂತ ಶಾಲೆಯ ಶ್ರೇಯೋಭಿವೃದ್ಧಿಗೆ ಸಹಕರಿಸಿದಾಗ ತಮ್ಮ ಜೀವನ ಸಾರ್ಥಕತೆಯತ್ತ ಸಾಗಲು ಸಾಧ್ಯ ಎಂದರು.

ಶಿಕ್ಷಕರಾದ ಬಿ.ಎನ್.ಸರದಾರ, ಎಸ್.ಜಿ.ಸೊಪ್ಪಡ್ಲ, ಎಸ್.ಬಿ.ಜಗಾಪೂರ, ಜೆ.ಬಿ.ಕಾರಲಕಟ್ಟಿ,   ವಾಯ್.ವಾಯ್.ಮುತ್ತತ್ತಿ,   ಜೆ.ಜಿ.ಹಿರೇಮಠ,   ಆರ್.ಟಿ.ಚವ್ಹಾಣ,   ವಿ.ಜಿ.ಬೆನಕಟ್ಟಿ ಅವರನ್ನು ಹಳೆಯ ವಿದ್ಯಾರ್ಥಿಗಳು ಸ್ಮರಣಿಕೆ ಹಾಗೂ ಗುರು ಕಾಣಿಕೆಯನ್ನು ನೀಡಿ ಸನ್ಮಾನಿಸಿ ಆಶೀರ್ವಾದ ಪಡೆದರು.

ವಿದ್ಯಾರ್ಥಿಗಳಾದ ಪದ್ಮಾ ಉಳ್ಳಿಗೇರಿ, ಮೌನೇಶ ಅರ್ಕಸಾಲಿ, ಸುಪ್ರಿಯಾ ಕುಲಕರ್ಣಿ, ಕುಮಾರ ಸವದತ್ತಿ, ಶ್ರೀದೇವಿ ಬಿರಾಜನವರ, ಮಾರುತಿ ಟಕ್ಕೇಕರ, ಮಂಜುಳಾ ಅಂಗಡಿ, ಮಹಾಲಕ್ಷ್ಮೀ ಕಕ್ಕನವರ, ವಿಜಯಲಕ್ಷ್ಮೀ ಚಾಪಿ ಹಾಗೂ ಇನ್ನಿತರರು ಅನಿಸಿಕೆಗಳನ್ನು ಹಂಚಿಕೊಂಡರು. ನಾರಾಯಣ ನವಲೆ, ಬಸವರಾಜ ಪೂಜೇರ, ಚಿದಂಬರ  ಉಪ್ಪಾರ, ಸಂಜು ಕರಲಿಂಗನವರ, ಯಲ್ಲಪ್ಪ ಕಲ್ಲಡಕಿ, ನಾಗವೇಣಿ ಪಟಗುಂದಿ ಅವರು ಉಪಸ್ಥಿತರಿದ್ದರು. 

ವಿನಯ ಯಲಿಗಾರ ಸ್ವಾಗತಿಸಿದರು. ಬಸನಗೌಡ ಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನಂತ ಜವಳಿ ನಿರೂಪಿಸಿದರು. ಪಾರ್ವತಿ ಮೀಶಿ ವಂದಿಸಿದರು. 

ಸುದ್ದಿ ಓದಿ