ಸಿರುಗುಪ್ಪ ಬಗ್ಗಾರು ಬಳಿ ಗುಜರಿ ಸಮಾನು ಲಾರಿಗೆ ಬೆಂಕಿ
ಸಿರುಗುಪ್ಪ14: ತಾಲೂಕಿನ ಬಗ್ಗಾರು ಹತ್ತಿರ ಗುಜರಿ ಸಮಾನು ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕ ಶಾಟ್ರ್ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡು ಲಾರಿಯ ಕ್ಯಾಬಿನ್ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಮಂಗಳವಾರ ನಡೆದಿದೆ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಸಿರುಗುಪ್ಪ ನಗರದಿಂದ ಆಂಧ್ರಪ್ರದೇಶದ ಆಧೊನಿಗೆ ಗುಜರಿ ಸಾಮಾನುಗಳನ್ನು ಹೊತ್ತು ಸಾಗಿಸುತ್ತಿದ್ದ ಲಾರಿ ಚಾಲನೆ ಸ್ಥಿತಿಯಲ್ಲಿ ಇರುವಾಗಲೇ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಉಪಕರಣಗಳಿಗೆ ಶಾಟರ್್ ಸಕರ್ಿಟ್ ಸಂಭವಿಸಿದೆ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸಿದರು ಪೊಲೀಸರು ಇದ್ದರು.
ಸಿರುಗುಪ್ಪ ಇ-ಆಡಳಿತ ಸಮಗ್ರ ನಾಗರಿಕ ಕೇಂದ್ರದ ಚಾಲನೆ ಪ್ರೇಮ್ ಚಾಲ್ಸ್ಸಸಿರುಗುಪ್ಪ-ಕೇಂದ್ರ ಮತ್ತು ರಾಜ್ಯದ ವಿವಿಧ ಇಲಾಖೆಗಳ 675 ಸೇವೆಗಳ ಉಪಯೋಗವನ್ನು ಕರ್ನಾಟಕ ವನ್ ಸಮಗ್ರ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ನಗರಸಭಾ ಪೌರಯುಕ್ತ ಪ್ರೇಮ್ ಚಾಲ್ರ್ಸ ಅವರು ಹೇಳಿದರು ನಗರದ ಪಾರ್ವತಿ ನಗರದಲ್ಲಿ ಕರ್ನಾಟಕ ಸರ್ಕಾರ ಆಡಳಿತ ಇಲಾಖೆಯ ಕರ್ನಾಟಕ ಒನ್ ಸಮಗ್ರ ನಾಗರಿಕ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಸರ್ಕಾರದ ಯೋಜನೆಗಳ ಸದುಪಯೋಗಿಸಿ ಕೊಳ್ಳಬೇಕು ಎಂದು ಕರೆ ನೀಡಿದರು. ಮುಖಂಡರಾದ ಮಹೇಶ ಗೌಡ,ಮಹಾದೇವ,ಕೆ ವಸುಧೆದರ ರಾವ್,ಸುಭಾಷ್,ಲೋಕೇಶ್ ರೆಡ್ಡಿ ಮೊಹಮ್ಮದ್ ನೌಶಾದ ಅಲಿ,ಮಹಮ್ಮದ್ ಖಲೀಲ್, ಇತರರು ಇದ್ದರು.