ಸರ್ಕಾರ ಅಂಚೆ ಇಲಾಖೆ ವಿಚಕ್ಷಣಾ ಜಾಗೃತಿ ಸಪ್ತಾಹ
ಸಿರುಗುಪ್ಪ 01: ಅಂಚೆ ಇಲಾಖೆಯೊಂದಿಗೆ ಅಕ್ಷರ ಬರೆಯುವುದನ್ನು ಕಲಿತಾಗಿನಿಂದಲೂ ನಾನು ಪೋಸ್ಟ್ ಆಫೀಸ್ ನ ಜತೆ ಸಂಪರ್ಕ ಇಟ್ಟು ಕೊಂಡಿ ರುವೆ ನಾನೊಬ್ಬ ಪೋಸ್ಟ್ ಆಫೀಸ್ ನ ಜಗ್ರಾಹಕ ಎಂದು ಗೌಮರ್ೆಂಟ್ ಆಫ್ ಇಂಡಿಯಾ ಪೋಸ್ಟ್ ಡಿಪಾಟ್ರ್ಮಂಟ್ ಇನ್ಫರ್ಮೇಷನ್ ಮತ್ತು ಕಮ್ಯುನಿಕೇಷನ್ ಟೆಕ್ನಾಲಜಿ ಎಂಡಿಜಿಎಸ್ ಜಿಪಿ ಪೋಸ್ಟ್ ಫೊರಂ ಮೆಂಬರ್ ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ 75ನೇ ಆಜಾದಿ ಕಾ ಅಮ್ರಿತ್ ಮಹೋತ್ಸವ ಪೋಸ್ಟ್ ಫೊರಂ ಸದಸ್ಯರ ಸಭೆ ಹಾಗೂ ಅ. 31ರಿಂದ ನ. 6ರ ವರೆಗೆ ವಿಚಕ್ಷಣಾ ಜಾಗೃತಿ ಸಪ್ತಾಹದಲ್ಲಿ ಅವರು ಮಾತನಾಡುತ್ತಾ ಪೋಸ್ಟ್ ಹಾಫೀಸಿಗೆ ಆಗಾಗ ಹೋಗಿಬರುತ್ತೇನೆ ಅಂಚೆ ಇಲಾಖೆಗೂ ನನಗೂ ಬಿಡಿಸಲಾಗದ ನಂಟಿದೆ ಪೋಸ್ಟ್ ಆಫೀಸ್ ಇಲಾಖೆಯೊಂದಿಗೆ ಇಂದಿಗೂ ಹೆಚ್ಚು ಒಡನಾಟ ಇಟ್ಟುಕೊಂಡಿದ್ದೇನೆ ಪೋಸ್ಟ್ ಮಾಸ್ಟರ್ ಹಾಗೂ ಸಿಬ್ಬಂದಿ ಯವರೊಂದಿಗೆ ಅಂತರರಾಷ್ಟ್ರೀಯ ಪ್ರಪಂಚದಲ್ಲಿ ಜಾಗತೀಕರಣ ಎಷ್ಟೇ ದೊಡ್ಡ ಮಟ್ಟದಲ್ಲಿ ಬೆಳೆದರು ಭಾರತೀಯ ಅಂಚೆ ಇಲಾಖೆ ಸೇವೆಯನ್ನು ಎಂದೂ ಮರೆಯಲಾಗದು ಅಂಚೆ ಇಲಾಖೆ ಸಿಬ್ಬಂದಿ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಅತ್ಯಂತ ಮಹತ್ತರವಾದುದು ಅಂಚೆ ಇಲಾಖೆ ತಂದಿರುವ ವಿನೂತನ ಸೇವೆ ವಿವಿಧ ಸೌಲಭ್ಯ ನೀಡುತ್ತಿರುವುದು ಸಂತಸ ತಂದಿದೆ ನಾಗರಿಕರು ಪೋಸ್ಟ್ ಆಫೀಸಿನ ಸದುಪಯೋಗ ಪಡೆದುಕೊಳ್ಳಬೇಕೆಂದು ಅಬ್ದುಲ್ ನಬಿ ಹೇಳಿದರು.
ಶುಕ್ರವಾರ ಸಂಜೆ ಪೋಸ್ಟ್ ಮಾಸ್ಟರ್ ಎಂ ಮಂಜುನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು ಪೋಸ್ಟ್ ಫೋರಂ ಸದಸ್ಯ ಎ ಅಬ್ದುಲ್ ನಬಿ ಹಾಗೂ ಜೈಸಿಂಗ್ ಅವರು ಮಾತನಾಡುತ್ತಾ ಅಂಚೆ ಕಚೇರಿಯ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ಅತ್ಯಂತ ಸ್ತುತ್ಯಾರ್ಹ ಎಂದು ಶ್ಲಾಘಿಸಿ ಅಂಚೆ ಕಚೇರಿಯ ಸೇವಾ ಸಿಬ್ಬಂದಿ ಆಧಾರ್ ರೈಲ್ವೆ ಕೌಂಟರ್ ವೃದ್ಯಾಪ ವೇತನ ವಿಧವಾ ವೇತನ ಅಂಗವಿಕಲರ ವೇತನ ವಿವಿಧ ಪಿಂಚಣಿ ವೇತನಗಳ ಸಪ್ರೇಟ್ ಕೌಂಟರ್ ತೆರೆಯಬೇಕು ಎಂದು ಸಲಹೆ ಸೂಚನೆ ನೀಡಿದರು ಎಂಡಿಜಿ ಎಸಿಪಿ ಪಿಎಕೆ ರಾಘವರೆಡ್ಡಿ,ರವೀಂದ್ರ ಜ್ಯೋತಿ, ಹನುಮಂತರೆಡ್ಡಿ,ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ,ಎಚ್ ಪಾಂಡುರಂಗ, ಬಸವರಾಜ,ಎಂ ರಾಜಶೇಖರ್ ಮತ್ತಿತರ ಸಿಬ್ಬಂದಿ ವರ್ಗದವರಿದ್ದರು