ಶ್ರದ್ಧೆಯಿಂದ ನಡೆದ ಗೋಮರ್ಸಿಯವರ ಉರುಸು
ಶ್ರದ್ಧೆಯಿಂದ ನಡೆದ ಗೋಮರ್ಸಿಯವರ ಉರುಸು
ಕಂಪ್ಲಿ 26: ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿಯ ಮುದ್ದಾಪುರ ಅಗಸಿ ಹತ್ತಿರದ ಹಜರತ್ ಸೈಯ್ಯದ್ ಷಾಹ್ ನೂರೂಲ್ಲಾ ಖಾದ್ರಿ ಲೋಬಾಲಿ ಗೊಮರ್ಸಿಯವರ ಉರುಸು ಕಾರ್ಯಕ್ರಮ ಶುಕ್ರವಾರ ಶ್ರದ್ಧೆಭಕ್ತಿಗಳಿಂದ ಜರುಗಿತು. ಮುದ್ದಾಪುರ ಅಗಸಿ ಜಾಮೀಯಾ ಮಸೀದಿ ಸಮಿತಿಯಿಂದ ಅನ್ನಸಂತರೆ್ಣ ಏರಿ್ಡಸಲಾಗಿತ್ತು.
ಹಜರತ್ ಗೊಮರ್ಸಿ ಬಡೇಸಾಹೇಬ್ ಖಾದ್ರಿಯವರ ದೇವಡಿಯಿಂದ ಗಂಧದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಮುದ್ದಾಪುರ ಅಗಸಿ ಜಾಮೀಯಾ ಮಸೀದಿ ಬಳಿಯ ದರ್ಗಾದಲ್ಲಿ ಗುರುವಾರ ಸಮಾರೋಪಗೊಂಡು, ಗಂಧ ಕಾರ್ಯಕ್ರಮ ಶ್ರದ್ಧೆಭಕ್ತಿಯಿಂದ ನಡೆಯಿತು.
ಉರುಸು ಮತ್ತು ಗಂಧ ಕಾರ್ಯಕ್ರಮದ ಸಾನ್ನಿಧ್ಯವನ್ನು ಧರ್ಮಗುರು ಸೈಯ್ಯದ್ ಷಾಹ್ ಖಾಜಾ ಮೊಹಿದ್ದೀನ್ ಖಾದ್ರಿ ಸಜ್ಜಾದೆ ನಶೀನ್ ವಹಿಸಿದ್ದರು. ಧರ್ಮಗುರುಗಳಾದ ಸೈಯ್ಯದ್ ಷಾಹ್ ಇಕ್ಬಾಲ್ ಖಾದ್ರಿ, ಸೈಯ್ಯದ್ ಷಾಹ್ ನೈಮತ್ ಉಲ್ಲಾ ಖಾದ್ರಿ, ಸೈಯ್ಯದ್ ಷಾಹ್ ಕರಿಮುಲ್ಲಾ ಖಾದ್ರಿ, ಸೈಯ್ಯದ್ ಷಾಹ್ ಡಾ.ನೂರ್ ಅಹಮದ್ ಖಾದ್ರಿ, ಗಂಗಾವತಿಯ ಸೈಯ್ಯದ್ ಷಾಹ್ ತೌಶೀಫ್ ಖಾದ್ರಿ, ಸೈಯ್ಯದ್ ಷಾಹ್ ಸಜ್ಜಾದ್ ಖಾದ್ರಿ, ಸೈಯ್ಯದ್ ಷಾಹ್ ಇರ್ಫಾನ್ ಖಾದ್ರಿ, ಸೈಯ್ಯದ್ ಷಾಹ್ ಮುದಸೀರ್ ಖಾದ್ರಿ, ಮುತುವಲ್ಲಿ ಎಸ್.ಆರ್.ರಸೂಲ್ಸಾಬ್, ಪ್ರಮುಖರಾದ ಶರ್ಮಾಸ್, ಜೋಕೂರ್ ನೂರ್, ಬಾವಿಕಟ್ಟೆ ಬಾಬು, ಬಜಾಜ್ ಇಸ್ಮಾಯಿಲ್ಸಾಬ್, ಎಸ್.ಆರ್.ಬಾಷಾ, ಎಸ್.ಆರ್.ವಲಿ, ಎಂ.ಮಹೆಮೂದ್ಸಾಬ್, ಅಬ್ದುಲ್ ವಾಹೀದ್ ಸೇರಿ ಸದ್ಭಕ್ತರಿದ್ದರು.