ನಾರಾ ಭರತ್ ರೆಡ್ಡಿ ಗೆಲುವಿಗೆ ಆಂಜಿನೇಯಸ್ವಾಮಿಗೆ ನೂರಾ ಒಂದು ತೆಂಗಿನಕಾಯಿ ಒಡೆದ ಗಂಗಿರೆಡ್ಡಿ
ಬಳ್ಳಾರಿ14: ನಗರದಲ್ಲಿ ವಿಧಾನಸಭಾ ಕ್ಷೇತ್ರದಿಂದ ನಾರಾ ಭರತ್ ರೆಡ್ಡಿಯ ವಿಜಯಶಾಲಿಯಾದ ಪರಿಣಾಮ ನಗರದ ತಾಳೂರು ರಸ್ತೆಯಲ್ಲಿನ ಶ್ರೀನಗರ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಶ್ರೀ ಆಂಜಿನೇಯಸ್ವಾಮಿ ದೇವಸ್ಥಾನದಲ್ಲಿ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಜನಗಣ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರು ಮಾಜಿ ನಗರಸಭಾ ಸದಸ್ಯರಾದ ಗಂಗಿರೆಡ್ಡಿ ನೂರ ಒಂದು ತೆಂಗಿನಕಾಯಿಗಳನ್ನು ಹೊಡೆದರು.ನಂತರ ಮಾತನಾಡಿ, ಇಂದು ಬಳ್ಳಾರಿ ಜಿಲ್ಲೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡ ನನ್ನ ಮೊಮ್ಮಗನ ಸಮಾನನಾದ 33 ವರ್ಷದ ಯುವಕ ನಾರಾ ಭರತ್ ರೆಡ್ಡಿ ಅಖಂಡ ಜಯಗಳಿಸಿರುತ್ತಾರೆ. ಯುವಕನಾದ ಭರತ್ ರೆಡ್ಡಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಅವನಿಗೆ ಆರೋಗ್ಯ ಐಶ್ವರ್ಯ ಕೆಲಸ ಕಾರ್ಯದಲ್ಲಿ ಶಕ್ತಿಯನ್ನು ಕೊಟ್ಟು ಈ ಆಂಜಿನೇಯಸ್ವಾಮಿ ಎಲ್ಲಾ ರೀತಿಯ ಶಕ್ತಿಯನ್ನು ನೀಡಲಿ ಎಂದು ಪೂಜೆಯನ್ನು ನಡೆಸಿ ನೂರ ಒಂದು ತೆಂಗಿನಕಾಯಿಗಳನ್ನು ಹೊಡೆದೆನೆಂದರು. ತರುವಾಯ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಕಾರಣವಾದ ಬಿ.ಜೆ.ಪಿ ಸರ್ಕಾರವನ್ನು ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ತಿರಸ್ಕರಿಸಿದ್ದಾರೆ. ಇದರಿಂದ ಬಿ.ಜೆ.ಪಿ ಪಕ್ಷವು ಮುಂದಿನ ದಿನಗಳಲ್ಲಿ ಈ ರೀತಿಯ ಒಡೆದು ಆಳುವುದರಿಂದ ಆಗುವ ನಷ್ಟದ ಬಗ್ಗೆ ಗುಣಪಾಠವನ್ನು ಕಲಿಯಬೇಕಿದೆ ಎಂದು ಅಕ್ರೋಶವನ್ನು ವ್ಯಕ್ತಿಪಡಿಸದರು.ಗೋಪಾಲರೆಡ್ಡಿ, ಪಿ.ವಿ ಗಿರಿ, ಬಾಲಾಜಿ, ವಿರೂಪಾಕ್ಷಿಗೌಡ, ಕುಂಟನಾಳ್ ವೀರಭದ್ರಗೌಡ ಸೇರಿದಂತೆ ಶ್ರೀನರಗದ ಕಾಂಗ್ರೆಸ್ ಕಾರ್ಯಕರ್ತರು ಸದಸ್ಯರು ಯುವಕರು ಭಾಗವಹಿಸಿದ್ದರು