ಗಾಂಧಿ ಸ್ತಬ್ಧಚಿತ್ರ ರಥಯಾತ್ರೆಗೆ ಬಳ್ಳಾರಿಯಲ್ಲಿ ಅದ್ಧೂರಿ ಸ್ವಾಗತ
ಬಳ್ಳಾರಿ 13: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಬಳ್ಳಾರಿಗೆ ಶನಿವಾರ ಪ್ರವೇಶಿಸಿತು.
ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ನಗರಕ್ಕೆ ಪ್ರವೇಶಿಸುತ್ತಲೇ ಅದ್ಧೂರಿಯಾದ ಸ್ವಾಗತ ದೊರಕಿತು.
ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾತ್ಮರ ಪ್ರತಿಮೆಗೆ ಹೂಮಾಲೆ ಹಾಕುವುದರ ಮೂಲಕ ನಮಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿ ಪರ ಜೈ ಘೋಷಗಳನ್ನು ಕೂಗುವುದರ ಮೂಲಕ ನೆರೆದ ವಿದ್ಯಾಥರ್ಿಗಳನ್ನು ಹುರಿದುಂಬಿಸಿದರು.
ಸ್ತಬ್ಧಚಿತ್ರದ ಎದುರುಗಡೆ ಮಹಾತ್ಮಾ ಗಾಂಧೀಜಿ ಅವರು ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಪ್ರತಿಮೆ, ಗಾಂಧೀಜಿ ಅವರು ದಂಡಿಸತ್ಯಾಗ್ರಹ ನಡೆಸಿರುವುದು ಮತ್ತು ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಹೆಜ್ಜೆ ಹಾಕಿರುವುದು,ಗಾಂಧೀಜಿ ಅವರ ಬಾಲ್ಯ ಜೀವನದಿಂದ ಹಿಡಿದು ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪಿತವಾಗುವವೆಗಿನ ರೇಖಾ ಚಿತ್ರಗಳು ಹಾಗೂ ವೈವಿಧ್ಯಮಯ ಚಿತ್ರಗಳು ಸ್ತಬ್ಧಚಿತ್ರ ರಥಯಾತ್ರೆಯಲ್ಲಿವೆ. ಇದರ ಜೊತೆಗೆ ರಥಯಾತ್ರೆಯಲ್ಲಿ ಅಳವಡಿಸಲಾಗಿರುವ ಎಲ್ಇಡಿಯಲ್ಲಿ ಮಹಾತ್ಮರ ಸಂದೇಶಗಳು ಭಿತ್ತರವಾಗುತ್ತಿರುವುದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ರಥದಲ್ಲಿನ ಪ್ರಿಯವಾದ ಭಜನೆಗಳ ಸಂಗೀತವನ್ನು ನೆರೆದವರು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿ ರಾಮ್ ಪ್ರಸಾತ್ ಅವರು, ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವಷರ್ಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶಗಳನ್ನು ಇಡೀ ನಾಡಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎರಡು ಮಾರ್ಗಗಳಲ್ಲಿ ಈ ರಥಯಾತ್ರೆಗಳು ರಾಜ್ಯಾದ್ಯಂತ ಸಂಚರಿಸುತ್ತಿವೆ. ಶಾಂತಿ ಮಾರ್ಗ ಎನ್ನುವ ಸ್ತಬ್ಧಚಿತ್ರ ರಥಯಾತ್ರೆಯು ಬಳ್ಳಾರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸಂಚರಿಸಿ ಬಳ್ಳಾರಿಗೆ ಇಂದು ಬಂದಿರುವುದು ಖುಷಿಯ ಸಂಗತಿ ಎಂದರು.
ಶಾಲಾ-ಕಾಲೇಜು ವಿದ್ಯಾಥರ್ಿಗಳು ಮಹಾತ್ಮರ ವಿಚಾರಧಾರೆಗಳು ಮತ್ತು ಅವರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದ ಡಿಸಿ ರಾಮ್ ಪ್ರಸಾತ್ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ರಥಯಾತ್ರೆಯನ್ನು ವೀಕ್ಷಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ತಹಸೀಲ್ದಾರ್ರಾದ ನಾಗರಾಜ, ವಿಶ್ವಜೀತ್ ಮೆಹತಾ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಿ.ನಾಗರಾಜ, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಪದವಿ ಪೂರ್ವ ಬಾಲಕೀಯರ ಕಾಲೇಜು ಪ್ರಾಂಶುಪಾಲ ಮಹಾಲಿಂಗ ಗೌಡ ಸೇರಿದಂತೆ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾಥರ್ಿಗಳು ಇದ್ದರು.