ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೊಸಪೇಟೆ 16: ದಿನಾಂಕ 15.12.2024 ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಂಜುಮನ್ ಆಸ್ಪತ್ರೆಯಲ್ಲಿ ಅಂಜುಮನ್ ಖಿದ್ಮತೆ ಈ ಇಸ್ಲಾಂ ಹೊಸಪೇಟೆ ಇವರ ನೇತೃತ್ವ ಹಾಗೂ ಸಹಕಾರದೊಂದಿಗೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು, ಇತರೆ ಹಲವಾರು ಕಾಯಿಲೆಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಒಂದು ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರ ಸಭೆಯ ಉಪಾಧ್ಯಕ್ಷರಾದ ರಮೇಶ್ ಗುಪ್ತ ರವರು ರವರು ಮಾತನಾಡಿ ಈ ರೀತಿ ಒಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವ ಅಂಜುಮನ್ ಕಮಿಟಿ ಅಧ್ಯಕ್ಷರಿಗೂ ಹಾಗೂ ಎಲ್ಲಾ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ಕಾರಣ ಈ ರೀತಿ ಒಂದು ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವುದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಯಾವುದೇ ಜಾತಿ ಮತ ಪಂಥ ವಿಲ್ಲದೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬಹುದು ಹಾಗೂ ಪರಸ್ಪರ ಸಹಕಾರ, ಹೊಂದಾಣಿಕೆ, ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದರು.
ನಂತರ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಹೆಚ್. ಏನ್ ಮಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಇಂದಿನ ಅತ್ಯಾಧುನಿಕ ಯುಗದಲ್ಲಿ ಕಡು ಬಡತನದಲ್ಲಿರುವ ದಿನಗೂಲಿ ಕಾರ್ಮಿಕರಿಗೂ, ಹಾಗೂ ಹಣದ ಸಂಪಾದನೆಯ ಹಿಂದೆ ಬಿದ್ದಿರುವ ಬಡವರಿಂದ ಹಿಡಿದು ಶ್ರೀಮಂತರ ವರೆಗೂ ಆರೋಗ್ಯದ ಬಗ್ಗೆ ಸ್ವತಹ ಕಾಳಜಿ ವಹಿಸುತ್ತಿರುವುದಿಲ್ಲ. ಆರೋಗ್ಯದ ಮಹತ್ವವನ್ನು ಅರಿಯದೆ ದಿವ್ಯ ನಿರ್ಲಕ್ಷವನ್ನು ಮಾಡುತ್ತಿರುತ್ತಾರೆ. ನಂತರ ಆರೋಗ್ಯ ವನ್ನು ಮರಳಿ ಪಡೆಯಲು ಹಣವನ್ನು ವಿಪರೀತವಾಗಿ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯವೇ ಮಹಾಭಾಗ್ಯ ಎನ್ನುವ ನಾಣ್ಣುಡಿಯಂತೆ ಈ ಭಾಗದ ಜನರು ಯಾವುದೇ ತಾರತಮ್ಯ ಭೇದ ಭಾವನೆ ಇಲ್ಲದೆ ಎಲ್ಲರೂ ಸದುಪಯೋಗಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಸಂಜೆಯ ವೇಳೆಗೆ 328 ಜನ ತಪಾಸಣೆ ಯನ್ನು ಮಾಡಿಸಿಕೊಂಡರು
ಈ ಒಂದು ಉಚಿತ ತಪಾಸಣೆ ಶಿಬಿರದಲ್ಲಿ ನಗರ ಸಭೆಯ ಸದಸ್ಯರಾದ ಜಂಬಯ್ಯ ನಾಯ್ಕ್ ಹಾಗೂ ಹೃದಯ ರೋಗ ತಜ್ಞರು, ಮೂತ್ರಪಿಂಡ ರೋಗ ತಜ್ಞರು, ನರರೋಗ ತಜ್ಞರು, ಮೂಳೆ ರೋಗ ತಜ್ಞರು, ಕ್ಯಾನ್ಸರ್ ರೋಗ ತಜ್ಞರು, ಹಾಗೂ ಅಂಜುಮನ್ ಕಮಿಟಿ ಉಪಾಧ್ಯಕ್ಷರಾದ ಎಮ್.ಎಮ್. ಫೈರೋಜ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಖಜಾಂಚಿಯಾದ ಅನ್ಸರ್ ಭಾಷ, ಜಂಟಿಕಾರ್ಯದರ್ಶಿಯಾದ ಡಾಽಽ ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಹಾಗೂ ಸಮಾಜದ ಹಿರಿಯ ಮುಖಂಡರು ಹಾಗೂ ಹಾಗೂ ಅಂಜುಮನ್ ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.