ಜಮಖಂಡಿ

ರಸ್ತೆ ಬದಿಯ ವ್ಯಾಪಾರಸ್ಥರಿಗೆ ಉಚಿತವಾಗಿ ಛತ್ರಿ ವಿತರಣೆ

ರಸ್ತೆ ಬದಿಯ ವ್ಯಾಪಾರಸ್ಥರಿಗೆ ಉಚಿತವಾಗಿ ಛತ್ರಿ ವಿತರಣೆ

ಲೋಕದರ್ಶನ ವರದಿ,

ಜಮಖಂಡಿ 31: ನಗರದ ಸುಡುಬಿಸಿಲಿನಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಕಾಂಗ್ರೆಸ್ ಕಾರ್ಯಕರ್ತರ ಮೂಲಕ 100ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ಉಚಿತವಾಗಿ ಛತ್ರಿಗಳನ್ನು ವಿತರಿಸಿದರು.

ನಗರದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಮಾಜಿ ಶಾಸಕ ಆನಂದ ನ್ಯಾಮಗೌಡ ಪರವಾಗಿ ನಗರಸಭೆ ಮಾಜಿ ಅಧ್ಯಕ್ಷ,ಸದಸ್ಯ ಸಿದ್ದು ಮೀಸಿ ವ್ಯಾಪಾರಸ್ಥರಿಗೆ ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರದರು. ನಗರದ ಜೋಳದ ಬಜಾರ, ಸರಕಾರಿ ಆಸ್ಪತ್ರೆ ಹತ್ತಿರ, ಬಜಾರ ರಸ್ತೆ, ಬಸ್ ಸ್ಟಾಂಡ್ ರಸ್ತೆಗಳಲ್ಲಿ ವ್ಯಾಪಾರ ತೊಡಗಿದ್ದ 100ಕ್ಕೂ ಹೆಚ್ಚಿನ ವ್ಯಾಪಾರಸ್ಥರಿಗೆ ಛತ್ರಿಗಳನ್ನು ವಿತರಿಸಿದರು.

 ಮೀರಾ ಒಂಟಮೋರಿ, ಶಶಾಂಕ ವಳವಾಡೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.



ಸುದ್ದಿ ಓದಿ