ಶಿಗ್ಗಾವ್

ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರ

ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರ

ಲೋಕದರ್ಶನ ವರದಿ

ಶಿಗ್ಗಾವಿ : ಆಧುನಿಕ ಕಾಲದ ಜೀವನ ಕ್ರಮದಲ್ಲಿ ಅಪೌಷ್ಟಿಕ ಆಹಾರದ ಸೇವನೆಯಿಂದ ದೈಹಿಕ ಶ್ರಮವಿಲ್ಲದ ದುಡಿಮೆಯಲ್ಲಿ ನಿರತವಾದ ಇಂದಿನ ಸಮಾಜದಲ್ಲಿನ ಜನಾಂಗ ಅನೇಕ ರೋಗ ರುಜಿನಗಳಿಗೆ ತುತ್ತಾಗಿ ಅಸ್ವಸ್ಥ ಸಮಾಜದ ನಿರ್ಮಾಣದ ಕಡೆಗೆ ವಾಲುತ್ತಿರುವುದು ಖೇದಕರ ಸಂಗತಿ ಎಂದು ವೈದ್ಯ ಡಾ. ಪಿ ಆರ್ ಪಾಟೀಲ ತೀರ್ವ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಹನುಮಂತಗೌಡ್ರ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬಸವ ಪತಂಜಲಿ ಯೋಗ ಸಮಿತಿ ಕರ್ನಾಟಕ, ಜೆ ಸಿ ಐ ಶಿಗ್ಗಾವಿ, ಅಷ್ಟಾಂಗ ಯೋಗ ಸಂಸ್ಥೆ ಶಿಗ್ಗಾವಿ, ಶರಣ ಸಾಹಿತ್ಯ ಪರಿಷತ್ತು ಶಿಗ್ಗಾವಿ, ಚಂದನ ಯೋಗ ಹಾಗೂ ನೈತಿಕ ಶಿಕ್ಷಣ ಸಂಸ್ಥೆ ಶಿಗ್ಗಾವಿ, ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ಗುರು ವೀರೇಶ ಗುರೂಜಿ ಇವರ ನೇತೃತ್ವದಲ್ಲಿ ಏರ್ಪಡಿಸಿದ್ದ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಯೋಗ ಹಾಗೂ ನೈಸರ್ಗಿಕ ಚಿಕಿತ್ಸಾ ತರಬೇತಿದಾರರಾದ ವೀರೇಶ್ ಗುರೂಜಿ ಮಾತನಾಡಿ, ಮನುಷ್ಯ ಅನಾರೋಗ್ಯ ಪೀಡಿತನಾದಾಗ ಇಂಗ್ಲೀಷ್ ಔಷಧಿಯ ಬದಲಾಗಿ ಉಪವಾಸ ಹಾಗೂ ಮಿತವಾದ ಆಹಾರದ ಕ್ರಮದಿಂದ ರೋಗವನ್ನು  ನಿವಾರಣೆ ಮಾಡಿಕೊಳ್ಳಬಹುದೆಂದು ಕಿವಿ ಮಾತು ಹೇಳಿದರು.

ಕೇದಾರಪ್ಪ ಬಗಾಡೆ, ಮಲ್ಲಪ್ಪ ರಾಮಗಿರಿ, ಸಿದ್ದಾರ್ಥಗೌಡ್ರ ಪಾಟೀಲ, ಜಯಶ್ರೀ ಪಾಟೀಲ್, ಜೆಸಿಐ ಅಧ್ಯಕ್ಷೆ ಅನಿತಾ ಗೊಬ್ಬರಗುಂಪಿ, ಡಿ ಆರ್ ತೋಟಗೇರ್, ಡಾ. ಚಂದ್ರಿಕಾ ಪಾಟೀಲ್, ಸುರೇಶಗೌಡ ಪಾಟೀಲ್. ಭಾರತಿ ಛಬ್ಬಿ ಸೇರಿದಂತೆ ಶಿಭಿರಾರ್ಥಿಗಳು ಭಾಗಿಯಾಗಿದ್ದರು 

ಸುದ್ದಿ ಓದಿ