ಶ್ರಮ ಮತ್ತು ಶ್ರದ್ಧೆ ಯಶಸ್ಸಿನ ನಾಲ್ಕು ಸ್ಥಂಭಗಳು :ಕಾಳಪ್ಪಪತ್ತಾರ

ಶ್ರಮ ಮತ್ತು ಶ್ರದ್ಧೆ ಯಶಸ್ಸಿನ ನಾಲ್ಕು ಸ್ಥಂಭಗಳು :ಕಾಳಪ್ಪಪತ್ತಾರ

ಬಳ್ಳಾರಿ 07: ಜಗತ್ತಿನಲ್ಲಿ ಜನಿಸುವಾಗಲೇ ತಾವು ಜಾಣರು ಅಥವಾ ದಡ್ಡರೆಂಬ ಹಣೆಪಟ್ಟಿಯನ್ನುಧರಿಸಿ ಜನಿಸುವುದಿಲ್ಲ. ಅವರು ಬೆಳೆದು ಸಮಯ ಪ್ರಙ್ಞೆ ಸೌಲಭ್ಯಗಳ ಸದುಪಯೋಗ ಶ್ರೆದ್ಧೆಯಿಂದ ಶ್ರಮವಹಿಸಿ ಅಧ್ಯಯನ ಸಾಧನೆ ಮಾಡಿದರೆ ಖಂಡಿತ ಯಶಸ್ಸು ಅವರದಾಗುತ್ತದೆ ಎಂದು ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆ 17 ನೇ ತಂಡದ ವಿದ್ಯಾಥರ್ಿಗಳಿಗೆ ಪುಸ್ತಕ ಹಾಗು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವ್ರಾಂತ ಮುಖ್ಯೋಪಾದ್ಯಾಯ, ಕಲ್ಪತರು ಜ್ಞಾನಯೋಗಕೇಂದ್ರದ ಸಂಚಾಲಕರಾರ ಕಾಳಪ್ಪಪತ್ತಾರ ಮುಂದುವರಿದು ಸಕಲಾಂಗ ದಿವ್ಯಚೇತನರಿಗೆ ಪ್ರಕೃತಿಯು ವಿಶೇಷವಾದ ಸಾಮಥ್ರ್ಯವನ್ನು ನೀಡಿರುತ್ತದೆ. ಅದನ್ನು ದುಡಿಸಿಕೊಳ್ಳುವ ಮತ್ತು ಬೆಳಸಿಕೊಲ್ಲುವ ಕೆಲಸನಿಮ್ಮದು. ಅದಕ್ಕೆ ಪೂರಕವಾದ ಪ್ರೇರಣೆ ಮತ್ತು ತರಬೇತಿಯನ್ನು ಸಮರ್ಥನಂ ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿದೆಎಂದು 

ಈ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಜಯಕುಮಾರ.ಎನ್.ಎಮ್ ಯು.ಎಸ್.ಎ ಹಾಗು ವೈಷ್ಣವ್ ಬಳ್ಳಾರಿ ಇವರಿಂದ ಉಚಿತವಾಗಿ ಐವತ್ತು ವಿದ್ಯಾಥರ್ಿಗಳಿಗೆ ನೋಟ್ ಪುಸ್ತಕ ಹಾಗು ಕಲಿಕಾಸಾಮಗ್ರಿಗಳನ್ನು ದೇಣಿಗೆ ನೀಡಿದ್ದರು.ಅಧ್ಯಕ್ಷತೆಯನ್ನು ವಹಿಸಿದ್ದ ಸಮರ್ಥನಂ ಮುಖ್ಯಸ್ಥರಾದ ಮೌನೇಶ್ ರವರು ಮಾತನಾಡಿ ನಮ್ಮ ಸಂಸ್ಥೆಯು ನಗರದಲ್ಲಿ ನಾಲ್ಕು ವರ್ಷಗಳಿಂದ ಅಂಗವಿಕಲ ರಂಥ ಮಕ್ಕಳಿಗೆ ಉದ್ಯೋಗ ಕೌಶಲ ಕಂಪ್ಯೋಟರ ತರಬೇತಿ ಹಾಗು ಆಂಗ್ಲಭಾಷೆಕಲಿಕೆಯನ್ನು ಉಚಿತ ಊಟ ವಸತಿಯೊಂದಿಗೆ ತರಬೇತಿಯನ್ನು ನೀಡುತ್ತಬಂದಿದೆ. ನಮ್ಮ ಸಂಸ್ಥೆಗೆ ಸಕಲವಿಧದ ಸಹಾಯ ಹಸ್ತ ನೀಡುತ್ತಿರುವ ದಾನಿಗಳಾದ ಶ್ರೀ ಕುಮಾರಸ್ವಾಮಿ  ಸಾಯಿಬಾಬಾ ಮಂದಿರದ ಟ್ರಸ್ಟ್ ಅಧ್ಯಕ್ಷರು, ರಾಜೇಂದ್ರ ಪ್ರಸಾದ , ರಘರಾಂ, ಪ್ರಭುಕುಮಾರು ಕನ್ನಡ ಚೈತನ್ಯವೇದಿಕೆ ಅಧ್ಯಕ್ಷರು,  ಚಿದಂಬರಂ ವ್ಯಾಪಾರಿಗಳು ಮುಂತಾದವರ ಸೇವೆಯನ್ನು ಸಂಸ್ಥೆಮರೆಯಲಾರದು ಎಂದು ಅವರನ್ನು ಸ್ಮರಿಸುತ್ತ 

ಈ ಸಮಯ ಸಾರ್ಥಕವಾಗುಬೇಕಂದರೆ ತಾವುಗಳ ಈ ಕಲಿಕಾ ಅವಧಿಯ ಪೂರ್ಣಸದುಪಯೋಗಪಡೆವುದು ನಿಮ್ಮ ಶ್ರೆದ್ಧೆ ಆಸ್ತಕಿಯ ಮೇಲೆ ಅವಲಂಬಸಿದೆ ಎಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ರಘುರಾಂ ಪತ್ರಕರ್ತರು ಮಾತನಾಡಿ ನಿಮ್ಮಲ್ಲಿ ಯಾರಿಗೂ ಕೀಳರಿಮೆ ಬರಬಾರದು. ನೀವೂ ಸಮರ್ಥರಿದ್ದೀರಿ ಎಂಬುದಕ್ಕೆ ಇಂದು ಬಾರತದಲ್ಲಿ ರಾರದಿ ಸಾಧನೆ ಮಾಡಿರುವ ಸಾವಿರಾರು ಜನ ಅಂಗವಿಕಲರಿದ್ದಾರೆ ಅವರೆಲ್ಲರೂ ನಿಮಗೆ ಸ್ಪೊತರ್ಿಯಾಗು ಎಂದರು ಮತ್ತೂಬ್ಬ ಅತಿಥಿಗಳಾದ ಕಲ್ಪತರು ಜ್ಞಾನಯೋಗ ಕೇದ್ರದ ಸಮಘಟಕರಾದ ಬಿ.ಚಿದಂಬರರಾವ್ ಮಾತನಾಡಿ ಜಗತ್ತಿನಲ್ಲಿ ಕೊಡುಗೆದಾನಿಗಳಿಗೆ ಕೊರತೆಯಲ್ಲಿ. ಆದರೆ ಅದರ ಸದುಪಯೋಗ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ. ಸಂಸ್ಥೆ ಸೇವೆಯನ್ನು ಅಮರ್ಥವಾಗಿ ಉಪಯೊಗಿಸಿ ನಿಮ್ಮ ಬದುಕನ್ನು ಕಟ್ಟಿಕೊಳ್ಳಿ ಎಂದು ಕರೆನೀಡಿದರು. ವಿಶ್ವ ಅಂಗವಿಕಲರ ದಿನಾಚರಣೆ ಡಿಸೆಂಬರ್ 03-2018 ರಂದು ಬಳ್ಳಾರಿ ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ, ಬಳ್ಳಾರಿ ಶಾಖೆಯ ವಿಕಲಚೇತನ ವಿದ್ಯಾಥರ್ಿಗಳು ಜಿಲ್ಲಾಮಟ್ಟದ ವಿಕಲಚೇತನರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಳಿಸಿದ ಪ್ರಥಮ ಬಹುಮಾನವನ್ನು ಸಮ್ಮಾನ್ಯ ಶ್ರೀಯುತ ಉಗ್ರಪ್ಪ, ಲೋಕಸಭಾ ಸದಸ್ಯರು ಮತ್ತು ಶ್ರೀಯುತ. ಸೋಮಶೇಖರ ರೆಡ್ಡಿ, ಮಾನ್ಯ ಶಾಸಕರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ, ಇವರಿಂದ ಸ್ವೀಕರಿಸಿದರು. ಹಾಗೂ ದೈಹಿಕ ವಿಕಲಚೇತನರಾದ ಕು.ಪಾರ್ವತಿ ಮತ್ತು ಮಂಜಪ್ಪ ರವರು ಗುಂಡು ಎಸೆತ ಪಂದ್ಯದಲ್ಲಿ ಗಳಿಸಿದ ದ್ವಿತೀಯ ಬಹುಮಾನವನ್ನು ಶ್ರೀಮತಿ. ಸಿ ಭಾರತಿ ತಿಮ್ಮಾರೆಡ್ಡಿ, ಮಾನ್ಯ ಅಧ್ಯಕ್ಷರು ಜಿಲ್ಲಾಪಂಚಾಯತ್ ಬಳ್ಳಾರಿ ಇವರಿಂದ ಪಡೆದರು. ದೈಹಿಕ ವಿಕಲಚೇತನರಾದ ಕು.ಮಾಲಾ ಇವರು ಹಾಡುಗಾರಿಕೆಯ ಸ್ಪಧರ್ೆಯಲ್ಲಿ ಪಡೆದ ದ್ವಿತೀಯ ಬಹುಮಾನವನ್ನು ಎಚ್.ಎಮ್ ಅಂಕಲಯ್ಯ, ಅಧ್ಯಕ್ಷರು, ವಕೀಲರ ಸಂಘ, ಬಳ್ಳಾರಿ ಇವರಿಂದ ಪಡೆದರು.  


ಸುದ್ದಿ ಓದಿ