ಬಳ್ಳಾರಿ

ವಿಜಯನಗರ ಸಾಮ್ರಾಜ್ಯದ 687 ನೇ ಸಂಸ್ಥಾಪನಾ ದಿನಾಚರಣೆ

ವಿಜಯನಗರ ಸಾಮ್ರಾಜ್ಯದ  687 ನೇ ಸಂಸ್ಥಾಪನಾ  ದಿನಾಚರಣೆ

ಲೋಕದರ್ಶನ ವರದಿ

ಬಳ್ಳಾರಿ 19: ನಗರದ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷ  ಬಿ.ಎಂ. ಪಾಟೀಲ್  "ಹಕ್ಕಬುಕ್ಕರ" ಭಾವಚಿತ್ರಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಿ ಆಚರಿಸಿದರು.  

    ನಂತರ ಹಾಲುಮತ ಸಹೋದರ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ, ಇಂದಿಗೆ 687 ವರ್ಷವಾಗಿದೆ. ಸಂಗಮ ವಂಶದ ಕುಲಸಂಜಾತರಾದ ಹಕ್ಕಬುಕ್ಕರು ಕಾಳಮುಖ ಪಂಥದ ಕ್ರಿಯಾಶಕ್ತಿ ಯತಿಗಳನ್ನು ಗುರುಗಳಾಗಿ ಸ್ವೀಕರಿಸಿ, ಹಂಪಿ ವಿರೂಪಾಕ್ಷನನ್ನು ಆರಾಧ್ಯ ದೇವರನ್ನಾಗಿ ಪೂಜಿಸಿ, ಮಹಮ್ಮದೀಯರ ದಬ್ಬಾಳಿಕೆಯಿಂದ ನಗಲುಗಿದ್ದ ರಾಜ್ಯವನ್ನು ರಕ್ಷಿಸಿ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ದಿನ ಇದಾಗಿದೆ. ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳನ್ನೊಳಗೊಂಡ ಅಖಂಡ ದಕ್ಷಿಣ ಭಾರತದ ದ್ರಾವಿಡ ಶೈವ ಸಂಸ್ಕೃತಿಯನ್ನು ರಕ್ಷಿಸಿದ ಧೀರ ಸಹೋದರರು ಹಕ್ಕಬುಕ್ಕರು ಶೃಂಗೇರಿ ಮಠಕ್ಕೆ ದಾನ-ದತ್ತಿ ನೀಡಿ 1336 ಎಪ್ರಿಲ್ 18 ರಂದು ಸ್ವತಂತ್ರ ರಾಜ್ಯವೆಂದು ಪೋಷಿಸಿಕೊಂಡರು. 

    ಶ್ರೀ ಕೃಷ್ಣದೇವರಾಯ ಹಲವಾರು ರಾಜರುಗಳು ವಿಶ್ವವಿಖ್ಯಾತ ಸಾಮ್ರಾಜ್ಯವನ್ನಾಗಿ ಮಾಡಿದರು. ಇಂದು ವಿಜಯನಗರ ಸಾಮ್ರಾಜ್ಯ ಹಂಪಿ ದೇಶದಲ್ಲೆ ಪುರಾತನ ಮತ್ತು ಸಂಪತ್ತು ಹೇರಳವಾಗಿ ರೂಪಗೊಂಡ ಸಾಮ್ರಾಜ್ಯವಾಗಿ ಹೊರಹೊಮ್ಮಿತ್ತು, ಇಂದಿಗೂ ಅದರ ಅನೇಕ ಕುರುಹುಗಳನ್ನು ಕಾಣಬಹುದು ಎಂದು ಹೇಳಿದರು.

 ತಾಲೂಕು ಪ್ರಧಾನ ಕಾರ್ಯದರ್ಶಿ ಕೆ ಜಿ ಮಂಜುನಾಥ್, ಸಂಗನಕಲ್ ಲಿಂಗರಾಜ್, ಹಲಕುಂದಿ ಜಡೆಶ, ಹಲಕುಂದಿ ಉಮಾಪತಿ, ಗಾಧಿಲಿಂಗ, ಶ್ರೀನಿವಾಸ್, ಯಾಲ್ಪಿ ಪಾಲಕ್ಷಿ, ಶ್ರೀಧರಗಡ್ಡೆ ಸಚಿನ್, ಅರ್ಜುನ್, ಸುಂಕಣ್ಣ, ಬೆಣಕಲ್ ಡೊಳ್ ಮಾರೆಣ್ಣ, ಮುಂತಾದ ಪದಾಧಿಕಾರಿಗಳು ಸಂಘದ ಸದಸ್ಯರು ಇತರರು  ಉಪಸ್ಥಿತರಿದ್ದರು 

ಸುದ್ದಿ ಓದಿ