ಮಾಜಿ ಶಾಸಕ ಖಾದ್ರಿ ಉಚ್ಛಾಟನಾ ಆದೇಶ ಹಿಂದಕ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 07: ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಅವರ ಉಚ್ಚಾಟನೆಯನ್ನು ಜುಲೈ 4 ರ ಮಂಗಳವಾರದಂದು ನಡೆದ ಕಾಂಗ್ರೆಸ್ ಶಿಸ್ತು ಸಮೀತಿ ಸಭೆಯಲ್ಲಿಯ ನಿರ್ಣಯದಂತೆ ಉಚ್ಚಾಟನಾ ಆದೇಶವನ್ನ ಹಿಂಪಡೆಯಲಾಗಿದೆ.
2023 ಮೇ 12 ರಂದು ಪಕ್ಷವಿರೋಧಿ ಚಟುವಟಿಕೆ ಆರೋಪಕ್ಕೆ ಸಂಭಂದಿಸಿದಂತೆ ಖಾದ್ರಿಯವರನ್ನ 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು, ಇದೀಗ ಹಿಂಪಡೆಯಲಾದ ಉಚ್ಚಾಟನಾ ಆದೇಶ ಪ್ರತಿಯನ್ನು ಶಿಸ್ತು ಸಮೀತಿ ಚೇರಮನ್ ಕೆ. ರೆಹಮನ್ ಖಾನ್ ಅವರು ಬ್ಲಾಕ್ ಕಾಂಗ್ರೇಸ್ ಜಿಲ್ಲಾದ್ಯಕ್ಷ ಎಂ ಎಂ ಹಿರೇಮಠ ಅವರಿಗೆ ಈಗಾಗಲೇ ರವಾನಿಸಿದ್ದಾರೆ