ಲೋಕಸಭಾ ಮಾಜಿ ಸದಸ್ಯ ಕೋಳೂರು ಬಸವನಗೌಡ ನಿಧನ ಗಣ್ಯರಿಂದ ಸಂತಾಪ
ಸಿರುಗುಪ್ಪ27: ಸೋನಿಯಾ ಗಾಂಧಿ ರಾಜೀನಾಮೆಯಿಂದ ಬಳ್ಳಾರಿ ಲೋಕಸಭಾ ಚುನಾವಣೆ ಸ್ಪರ್ಧಿಸಿ ಆಯ್ಕೆಗೊಂಡ ಕೋಳೂರು ಬಸವನಗೌಡ 88 ನಿಧನ ಇವರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿ ಇದ್ದಾರೆ. ಅಪಾರ ಬಂಧುಗಳು ಬಳಗದವರು ಇದ್ದಾರೆ 2000 ರಲ್ಲಿ ನಡೆದ 13ನೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ 4 ವರ್ಷ ಸಂಸದರಾಗಿದ್ದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು ಇವರು ಲಿಂಗಾಯತ ಸಮುದಾಯದ ಮುಖಂಡರು ಆಗಿದ್ದರು ಮೃತರಿಗೆ ಗಣ್ಯ ಶಾಸಕ ಸೋಮಲಿಂಗಪ್ಪ ,ಮಾಜಿ ಶಾಸಕ ಬಿ ಎಂ ನಾಗರಾಜ ,ಟಿ ಎಂ ಚಂದ್ರಶೇಖರಯ್ಯ, ಜನಾಭಿಪ್ರಾಯ ಮುಖಂಡರು ಸಮಾಜಿಕ ಸುಧಾರಕ ಎ ಅಬ್ದುಲ್ ನಬಿ, ಕಾಂಗ್ರೆಸ್ ಮುಖಂಡರಾದ ಹಾಜಿ ಹಂಡಿ ಹುಸೇನ್ ಭಾಷಾ, ಹಂಡಿ ಹಾಶಿಮ್, ಮುಲ್ಲಾ ಬಾಬು, ಅಮೀರ್ ಭಾಷಾ, ಬಿ ಅಬ್ಜಲ್ ಹುಸೈನ್, ಮುಲ್ಲಾ ಅಬ್ದುಲ್ ರೋಫ್, ಹಾಜಿ ಮೊಹಮ್ಮದ್ ಇಬ್ರಾಹಿಂ ,ಮಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಹಾಜಿ ಬಿ ಮೆಹೆಮ್ಮುದ್ , ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಬಿ.ಕೆ ಅಲ್ಲಭಕ್ಷಿ, ಖಾಲಿ ಚೀಲ ಹಾಜಿ ಹೆಚ್ ಹುಸೇನ್ ಸಾಬ್, ಹಾಜಿ ಅಬ್ದುಲ್ ಹಮೀದ್ ಫಾರೂಕಿ ,ಡಾ.ಮಹಮ್ಮದ್ ಅಲಿ, ಮೊಹಮ್ಮದ್ ಖಲೀಲ್, ಖತೀಬ್ ಜಹೀದ್ದರ್ಿನ್ ಬಾಬು, ಹಂಡಿ ಹುಸೇನ್ ಸಾಬ್ ಮೊದಲಾದ ಗಣ್ಯರು ಶೋಕ ಸಂತಾಪ ಸೂಚಿಸಿದರು.