ಪಿಡಿಒ ಸಂಘದ ತಾಲೂಕಾ ಘಟಕದ ರಚನೆ
Formation of Taluka Unit of PDO Association
ತಾಳಿಕೋಟಿ 01: ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಬಸವನಗೌಡ ಚೌದ್ರಿ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ (ಬಿ-ಗ್ರೇಡ್ ) ಉನ್ನತೀಕರಣ ಸಂಘ(ರಿ) ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಳಿಕೋಟಿ ತಾಲೂಕ ಘಟಕವನ್ನು ಇತ್ತೀಚೆಗೆ ರಚನೆ ಮಾಡಲಾಯಿತು.ಈ ಸಭೆಯಲ್ಲಿ ತಾಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ದಳವಾಯಿ,ಪ್ರಭು ಚನ್ನೂರ್, ಈರಣ್ಣ ಬಡಿಗೇರ್, ಧೂಳಪ್ಪ ಅಂಜುಟಗಿ, ಅನಿಲ್ ಬಿರಾದಾರ, ಸುಜಾತಾ ಯಡ್ರಾಮಿ, ಸಾವಿತ್ರಿ ಬಿರಾದಾರ, ರಾಜಶ್ರೀ ದೇವೂರ, ಶ್ರೀದೇವಿ ಗುಂಡಾಪುರ, ಕಾರ್ಯದರ್ಶಿಗಳು, ಸಂಘದ ಅಧ್ಯಕ್ಷರಾದ ಪಟೇಲ ಬಿರಾದಾರ, ಹಣಮಂತ್ರಾಯ ಜಿ ಚೌದ್ರಿ, ಪರಶುರಾಮ ಕರಾಟೆ, ಶಿವಸಂಗಪ್ಪ ಬಿರಾದಾರ ಹಾಗೂ ತಾಲೂಕ ಪಂಚಾಯತಿಯ ಸಿಬ್ಬಂದಿಯವರು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಭು ಚನ್ನೂರ ಅವರನ್ನು ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಹುದ್ದೆ(ಬಿ-ಗ್ರೇಡ್) ಉನ್ನತೀಕರಣ ಸಂಘ(ರಿ)ದ ತಾಳಿಕೋಟಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಈರಣ್ಣ ಬಡಿಗೇರ ಅವರನ್ನು, ತಾಲೂಕಿನ ಸಂಘಟನಾ ಕಾರ್ಯದರ್ಶಿಗಳಾಗಿ ಅನಿಲ್ ಬಿರಾದಾರ ಹಾಗೂ ಧೂಳಪ್ಪ ಅಂಜುಟಗಿ ಮತ್ತು ಮಹಿಳಾ ಸಂಘಟನಾ ಕಾರ್ಯದರ್ಶಿಗಳಾಗಿ ಸಾವಿತ್ರಿ ಬಿರಾದಾರ, ಶ್ರೀದೇವಿ ಗುಂಡಾಪುರ ಹಾಗೂ ಕಾನೂನು ಸಲಹೆಗಾರರಾಗಿ ಸುಜಾತಾ ಯಡ್ರಾಮಿ ಅವರನ್ನು ಆಯ್ಕೆಮಾಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 