ಬೈಲಹೊಂಗಲ

ಶ್ರಾವಣ ಮಾಸದ ಪುರಾಣ ಮಂಗಲ ನಿಮಿತ್ತ ಅನ್ನ ಸಂತರ್ಪಣೆ

ಶ್ರಾವಣ ಮಾಸದ ಪುರಾಣ ಮಂಗಲ ನಿಮಿತ್ತ ಅನ್ನ ಸಂತರ್ಪಣೆ

ಬೈಲಹೊಂಗಲ: ಶುಭ ಶ್ರಾವಣ ಮಾಸದ ನಿಮಿತ್ತ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದೇವತೆ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತರ ಏರ್ಪಡಿಸಲಾಗಿದ್ದ ಕಲಬುರ್ಗಿ  ಶರಣ ಬಸವೇಶ್ವರ ಚರಿತಾಮೃತ ಪುರಾಣ ಮಹಾಮಂಗಲ ಮತ್ತು ಗ್ರಾಮದೇವತೆಯರಿಗೆ ಪ್ರತಿ ನಿತ್ಯ ಬೆಳಗ್ಗೆ ನಡೆಸಲಾಗುತ್ತಿದ್ದ ಕುಂಕುಮಾರ್ಚನೆ, ಪಂಚಾಮೃತಾಭಿಷೇಕ ಹಾಗೂ ದುರ್ಗಾಸಪ್ತಶತಿ ಪಾರಾಯಣ ಕಾರ್ಯಕ್ರಮಗಳು ಸಂಪನ್ನಗೊಂಡ ಪ್ರಯಕ್ತ ಗ್ರಾಮದೇವತೆಯರಿಗೆ ದೈವದ ಉಡಿ ತುಂಬುವ ಕಾರ್ಯ ಮತ್ತು ದೇವಸ್ಥಾನಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಶುಕ್ರವಾರ ಜರುಗಿತು.

ಪುರಾಣ ಪ್ರವಚನಕರ್ತರಾಗಿ ಪಾಲ್ಗೊಂಡಿದ್ದ ನವಲಗುಂದ ಗವಿಮಠದ ಅಭಿನವ ಬಸವಲಿಂಗ ಮಹಾಸ್ವಾಮಿಜಿಯವರು ಬೆಳಗ್ಗೆ ಅಭಿಷೇಕ ಸೇವೆ ಸಂಪನ್ನಗೊಂಡ ಬಳಿಕ ಗ್ರಾಮದ ಗುರುಹಿರಿಯರು, ಮೇಟಿ ಒಕ್ಕಲ ರೈತ ಮನೆತನದ ಸುಮಂಗಲೆಯರು ಮತ್ತು ಸೇವಾ ಸಮಿತಿಯವರ ಉಪಸ್ಥಿತಿಯಲ್ಲಿ ದ್ಯಾಮವ್ವ ದೇವಿ ಹಾಗೂ ದುರ್ಗವ್ವ ದೇವಿಯರಿಗೆ ದೈವದ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.

 ಈ ನಿಮಿತ್ತ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಗ್ರಾಮದೇವತೆ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು. ಊರಿನ ಪ್ರಮುಖರು, ಗ್ರಾಮ ದೇವತಾ ಟ್ರಷ್ಟ್ ಮತ್ತು ಸೇವಾ ಸಮಿತಿಯವರು, ಭಜನಾ ಮಂಡಳಿಯವರು, ಜೋಗತಿಯರು, ಸುಮಂಗಲೆಯರು ಭಾಗವಹಿಸಿದ್ದರು 

ಸುದ್ದಿ ಓದಿ