ರಾಷ್ಟ್ರೀಯ

ಪ್ರವಾಹ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ 20 ಗ್ರಾಮ ಜಲಾವೃತ

ಪ್ರವಾಹ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ 20 ಗ್ರಾಮ ಜಲಾವೃತ

ಲಖನೌ, ಆಗುಸ್ಟ್ 7:  ಉತ್ತರ ಪ್ರದೇಶದಹಲವು ಕಡೆಗಳಲ್ಲಿ ಮಳೆ ಸುರಿಯುತ್ತಿದ್ದು, ನದಿ ಕೊಳ್ಳಗಳು ತುಂಬಿವೆ. ರಾಜ್ಯದ ಬಸ್ತಿ ಜಿಲ್ಲೆಯಲ್ಲಿ 45 ಗ್ರಾಮಗಳು ಸರಯು ನದಿಯ ಪ್ರವಾಹಕ್ಕೆ ಒಳಗಾಗಿದ್ದು, 20 ಗ್ರಾಮಗಳು ಜಲಾವೃತವಾಗಿವೆ.

ಜಿಲ್ಲೆಯ ಹರೈಯಾ ಮತ್ತು ಬಸ್ತಿ ತಹಸಿಲ್‌ಗಳ 45 ಗ್ರಾಮಗಳು ಸರಯು ನದಿಯ ಪ್ರವಾಹದಿಂದ ಪ್ರಭಾವಿತವಾಗಿವೆ ಎಂದು ಹಣಕಾಸು ಮತ್ತು ಕಂದಾಯ ಇಲಾಖೆ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಚಂದ್ರ ತಿವಾರಿ ಹೇಳಿದ್ದಾರೆ.

ಈ ಗ್ರಾಮಗಳಲ್ಲಿ 15,000 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಪ್ರವಾಹ ಭೀತಿ ಎದುರಿಸುತ್ತಿದೆ. ಸಂತ್ರಸ್ತರಿಗೆ ಸಹಾಯಕ್ಕಾಗಿ 72 ದೋಣಿಗಳನ್ನು ಜಿಲ್ಲಾಡಳಿತ ನಿಯೋಜಿಸಿದೆ. 

ಸರಯು ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 92.7 ಅಪಾಯದ ಮಟ್ಟ ಮೀರಿದ್ದು, 93.00 0 ಕ್ಕೆ ತುಂಬಿ ಹರಿಯುತ್ತಿದೆ.

ಸುದ್ದಿ ಓದಿ