ಮನರಂಜನೆ

ಪ್ರಮುಖ ಚಲನ ಚಿತ್ರ ನಿರ್ದೇಶಕ ಪಿ.ಸಿ. ರೆಡ್ಡಿ ವಿಧಿವಶ

ಪ್ರಮುಖ ಚಲನ ಚಿತ್ರ ನಿರ್ದೇಶಕ ಪಿ.ಸಿ. ರೆಡ್ಡಿ ವಿಧಿವಶ

ಚೆನ್ನೈ, ಜ 3  ಪ್ರಮುಖ ಚಲನ ಚಿತ್ರ ನಿರ್ದೇಶಕ ಪಿ. ಚಂದ್ರಶೇಖರ್ ರೆಡ್ಡಿ ಇಂದು ಬೆಳಗ್ಗೆ 8.30ಕ್ಕೆ ಚೆನ್ನೈನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಸುಮಾರು 80 ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ತೆಲುಗು ಚಿತ್ರ ರಂಗದ ಮೇರು ನಟರುಗಳಾದ ಡಾ. ಎನ್.‌ ಟಿ. ರಾಮರಾವ್‌, ಡಾ. ಅಕ್ಕಿನೇನಿ ನಾಗೃಶ್ವರರಾವ್‌, ಕೃಷ್ಣ, ಶೋಭನ್ ಬಾಬು, ಕೃಷ್ಣಂ ರಾಜು ರಂತಹ ಅಂದಿನ ಸುಪ್ರಿಸಿದ್ದ ನಾಯಕರೆಲ್ಲರ ಚಿತ್ರಗಳನ್ನು ನಿರ್ದೇಶಿಸಿದ್ದರು. ಸೂಪರ್ ಸ್ಟಾರ್ ಕೃಷ್ಣ ಅವರ ಬಹುತೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಪಿ.ಸಿ ರೆಡ್ಡಿ ಅವರ ನಿಧನಕ್ಕೆ ಟಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಸುದ್ದಿ ಓದಿ