ರಾಷ್ಟ್ರೀಯ

ತಂದೆ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿರವಾಗಿದೆ: ಅಭಿಜಿತ್ ಮುಖರ್ಜಿ

ತಂದೆ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿರವಾಗಿದೆ: ಅಭಿಜಿತ್ ಮುಖರ್ಜಿ

ನವದೆಹಲಿ  ಆಗಸ್ಟ್‌ 13: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೇಹಸ್ಥಿತಿಯ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ಅವ ರ ಪುತ್ರ ಅಭಿಜಿತ್ ಮುಖರ್ಜಿ ತೆರೆ ಎಳೆದಿದ್ದು,”ತಂದೆಯ ಆರೋಗ್ಯ ಸ್ಥಿರವಾಗಿದೆ” ಎಂದು ಹೇಳಿದ್ದಾರೆ. ಹಾಗೂ ತಲೆಬುಡವಿಲ್ಲದ ಸುದ್ದಿಗಳಿಗಾಗಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.  '' ನನ್ನ ತಂದೆ ಪ್ರಣಬ್ ಮುಖರ್ಜಿ ಇನ್ನೂ ಜೀವಂತವಾಗಿದ್ದಾರೆ ಮತ್ತು ಹೆಮೋಡೈನಮಿಕ್ ಆಗಿ ಸ್ಥಿರರಾಗಿದ್ದಾರೆ! ಸೋಷಿಯಲ್ ಮೀಡಿಯಾದಲ್ಲಿ ಹೆಸರಾಂತ ಪತ್ರಕರ್ತರು ಪ್ರಸಾರ ಮಾಡುತ್ತಿರುವ ಊಹಾಪೋಹವಾಗಿದೆ.  ದೇಶದಲ್ಲಿ ಮಾಧ್ಯಮವು ನಕಲಿ ಸುದ್ದಿಗಳ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ” ಎಂದು ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಕಂಟೋನ್ಮೆಂಟ್‌ನ ಸೇನೆಯ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆ ಗುರುವಾರ ಬೆಳಿಗ್ಗೆ ಪ್ರಣಬ್ ಮುಖರ್ಜಿ ಅವರ ಸ್ಥಿತಿಯಲ್ಲಿ ಯಾವುದೇ ಬದಲಾಗವಣೆಯಾಗಿಲ್ಲ ಎಂದು ಹೇಳಿಕೆ ನೀಡಿದೆ.

ಪ್ರಣಬ್ ಮುಖರ್ಜಿ ಅವರ ಸ್ಥಿತಿ ಇಂದು ಬೆಳಿಗ್ಗೆ ಬದಲಾಗದೆ ಉಳಿದಿದೆ. ಅವರು ಆಳವಾದ ಕೋಮಾಟೋಸ್ ಹೊಂದಿದ್ದು, ವೆಂಟಿಲೇಟರ್ ವ್ಯವಸ್ಥೆ ಮುಂದುವರಿದಿದೆ'' ಎಂದು ಆಸ್ಪತ್ರೆ ತಿಳಿಸಿದೆ.

ಮಾಜಿ ರಾಷ್ಟ್ರಪತಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ಕೂಡ ತನ್ನ ತಂದೆಯ ಆರೋಗ್ಯದ ಬಗ್ಗೆ ವದಂತಿ ಹರಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಸೋಮವಾರ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಪ್ಪುಗಟ್ಟುವಿಕೆ ಪತ್ತೆಯಾದ ನಂತರ ಸೋಮವಾರ ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಸುದ್ದಿ ಓದಿ