ಜಲಾಶಾಯಕ್ಕೆ ಮುಂಗಾರು ಮಳೆಯ ನೀರು ಆರಂಭ ರೈತರಲ್ಲಿ ಸಂತಸ
ಬಳ್ಳಾರಿ 11: ಹಿಂದಿನ ವರ್ಷ ಮಲೇನಾಡಿನ ಪಶ್ಚಿಮ ಘಟ್ಟಗಳಲ್ಲಿ ಬಾರಿ ಮಳೆ ಬಂದು ಜಲಾಶಯದಲ್ಲಿ ಈ ದಿನಕ್ಕೆ 88 ಟಿ.ಎಂ.ಸಿ. ನೀರು ಶೇಖರಣೆ ಆಗಿತ್ತು, ಆದರೆ ಈ ವರ್ಷ ಇಲ್ಲಿಯವರೆಗೂ ಮಳೆ ಬಾರದೆ ಜಲಾಶಯದಲ್ಲಿ ಕೇವಲ 3.5 ಟಿ.ಎಂ.ಸಿ. ನೀರು ಮಾತ್ರ ಶೇಕರಣೆ ಆಗಿದ್ದು, ರೈತರೆಲ್ಲಾ ಆತಂಕಕ್ಕೆ ಒಳಗಾಗಿದ್ದರು.ಆದರೆ ಇತ್ತೀಚೆಗೆ ಮಲೇನಾಡು ಪ್ರಾಂತಗಳಲ್ಲಿ ಬರುತ್ತಿರುವ ಮುಂಗಾರು ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯವು ತುಂಬಿರುವುದರಿಂದ, ಜಲಾಶಯದ ನೀರನ್ನು ಹೊರ ಬಿಟ್ಟಿರುತ್ತಾರೆ. ಆ ನೀರು ಈ ದಿನ ತುಂಗಾಭದ್ರ ಜಲಾಶಯಕ್ಕೆ ಬರಲು ಆರಂಭವಾಗಿದೆ. ಈ ದಿನ 9,892 ಕ್ವಿಸೇಸ್ ನೀರು ಬಂದಿರುತ್ತದೆ. ಹಾಗೂ ಇನ್ನೂ ಹೆಚ್ಚುವರಿ ನೀರು ಸಹ ಬರುತ್ತಿವೆ.ಇದರಿಂದಾಗಿ ರೈತರು ಸಂತೋಷಗೊಂಡು ಭತ್ತದ ಸಸಿ ಮಡಿಗಳನ್ನು ಹಾಕುವ ಮತ್ತು ಮೆಣಸಿನ ಸಸಿ ಮಡಿಗಳನ್ನು ಹಾಕುವ ಮತ್ತು ಇತರೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಈ ದಿನದಿಂದ ಪ್ರಾರಂಭಿಸಿರುತ್ತಾರೆ. ಮಲೇನಾಡು ಮತ್ತು ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿಯೂ ಸಹ ಮಳೆಯು ಹೆಚ್ಚಾಗಿ ಬರಲೆಂದು ರೈತರು ಕಾಯುತ್ತಿದ್ದೇವೆ. ಒಂದು ವೇಳೆ ಈ ಭಾಗದಲ್ಲಿ ಮಳೆ ಬಾರದಿದ್ದರೆ ಸರ್ಕಾರವು ಮೋಡ ಬಿತ್ತನೆಯ ಕ್ರಮ ತೆಗೆದುಕೊಳ್ಳಬೇಕೆಂದು ತುಂಗಾಭದ್ರ ರೈತ ಸಂಘದಲ್ಲಿ ಸಕರ್ಾರಕ್ಕೆ ತಿಳಿಸಲು ಇಚ್ಚಿಸಿರುತ್ತೇವೆ, ಎಂದು ತುಂಗಾಭದ್ರ ರೈತ ಸಂಘದ ಅಧ್ಯಕ್ಷರು ಜಿ. ಪುರುಷೋತ್ತಮ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು