ಬಳ್ಳಾರಿ

ನಿವೃತ್ತ ಬ್ಲಡ್ ದೇವಣ್ಣರವರಿಗೆ ಗೌರವ ಬಿಳ್ಕೊಡುಗೆ

ನಿವೃತ್ತ ಬ್ಲಡ್ ದೇವಣ್ಣರವರಿಗೆ ಗೌರವ ಬಿಳ್ಕೊಡುಗೆ

ಬಳ್ಳಾರಿ : ಸುಮಾರು 108 ರಕ್ತದಾನ ಮಾಡಿ ಬ್ಲಡ್ ದೇವಣ್ಣ ಎಂದೇ ಹೆಸರಾದ ದೇವಣ್ಣ ನಮ್ಮ ಬ್ಯಾಂಕ್ನಲ್ಲಿ ಕೆಲಸ ಮಾಡಿರುವುದು ನಮ್ಮ ಬ್ಯಾಂಕ್ಗೆ ಹೆಮ್ಮೆಯ ವಿಷಯ, ಇವರ ಸೇವಾ ಕಾಲದಲ್ಲಿ ಯಾವೊಂದು ಕಪ್ಪು ಚುಕ್ಕೆಯಿಲ್ಲದೆ ಕಾರ್ಯನಿರ್ವಹಿಸಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ. ಇವರನ್ನು ಇಂದು ಬಿಳ್ಕೊಡಲು ನಮಗೆ ಮನಸ್ಸಾಗುತ್ತಿಲ್ಲ ಎಂದು ಬ್ಯಾಂಕ್ನ ಸಹಾಯಕ ಪ್ರಬಂಧಕ ವ್ಯವಸ್ಥಾಪಕರಾದ ಚಂದ್ರಶೆಖರ ರೆಡ್ಡಿ  ಬ್ಲಡ್ ದೇವಣ್ಣ ಅವರ ಸೇವೆಯನ್ನು ಶ್ಲಾಘಿಸಿದರು. 

ನಗರದ ಭಾರತೀಯ ಸ್ಟೇಟ್ ಬ್ಯಾಂಕ್ಬ್ಯಾಂಕ್ನ ಬುಸಿನೆಸ್ ಶಾಖೆಯಲ್ಲಿ ಸತತ 37 ವರ್ಷಗಳಿಂದ ಕಾರ್ಯನಿರ್ವಹಿಸಿ 30.06.2023ರಂದು ನಿವೃತ್ತರಾದ ಬ್ಲಡ್ ದೇವಣ್ಣ ಇವರ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರೆಡ್ಡಿ ಮಾತನಾಡಿದರು. 

ಸನ್ಮಾನ ಸವೀಕರಿಸಿ ಮಾತನಾಡಿದ ಈ ಸಂದರ್ಭದಲ್ಲಿ ತಮ್ಮ ಸುಧೀರ್ಘ ಸೇವೆಯನ್ನು ಮೆಲುಕು ಹಾಕಿ ಮಾತನಾಡಿದ ಬ್ಲಡ್ ದೇವಣ್ಣ, ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕಳೆದ 37 ವರ್ಷಗಳಿಂದ ಮೆಸೆಂಜರ್ ಆಗಿ ಸಹಾಯಕರಾಗಿ, ಹಿರಿಯ ಸಹಾಕರಾಗಿ, ವಿಶೆಷ ಸಹಾಯಕರಾಗಿ ಮತ್ತು ವಿಶೇಷ ಸಹಾಯಕರಾಗಿ, ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ಬ್ರಾಂಚ್, ಬಳ್ಳಾರಿ ಸ್ಟೇಷನ್ ರೋಡ್ ಬ್ರಾಂಚ್, ತುಮಕೂರು ಜಿಲ್ಲೆಯ ವದನಕಲ್ಲು ಬ್ರಾಂಚ್, ಸಿರುಗುಪ್ಪ ತಾಲೂಕಿನ ಸಿರಿಗೇರಿ ಬ್ರಾಂಚ್, ಬಳ್ಳಾರಿ ಮುಖ್ಯ ಶಾಖೆ ಮತ್ತು ಗೌರ್ನಮೆಂಟ್ ಬಿಸಿನೇಸ್ ಬ್ರಾಂಚ್, ನನ್ನ ಸಹಪಾಟಿಗಳು ಮತ್ತು ಮೇಲಾಧಿಕಾರಿಗಳು ನನಗೆ ನೀಡಿದ ಸಹಕಾರಿಂದ ಇಷ್ಟು ವರ್ಷಗಳ ಕಾಲ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಸಾಧ್ಯವಾಯಿತು, ಈ ಸಂದರ್ಭದಲ್ಲಿ ಅವರೆಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತಿದ್ದೇನೆಂದರು. ಈ ಸಂದರ್ಭದಲ್ಲಿ ಚೀಫ್ ಮ್ಯಾನೇಜರ್ ವರಕುಮಾರ್, ಜಿ.ಬಿ.ಬ್ರಾಂಚ್ ಮ್ಯಾನೇಜರ್ ರವಿಕಾಂತ್ ಗೌರವ್, ಡಿ.ಜಿ.ಎಸ್ ರಾಮಕೃಷ್ಣ ದೇವರ್, ಧಮರ್ೇಂದರ್, ಹುಲುಗಪ್ಪ, ತಾಯಪ್ಪ, ಮಾಜಿ ಎಂಫ್ಲಾಯ್ ಬಿ ರಾಮುಡು, ಕೆ ಜಗಧೀಶ್, ಎಲ್.ಐ.ಸಿ ರಾಮು, ಎಲ್.ಐ.ಸಿ ಗೋಪಾಲ್ ಸೇರಿದಂತೆ ಜಿ.ಬಿ ಬ್ರಾಂಚ್ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಕೊನೆಯಲ್ಲಿ ಬ್ಲಡ್ ದೇವಣ್ಣ ದಂಪತಿಗಳನ್ನು ಸನ್ಮಾನಿಸಿ ಗೌರಿಸಲಾಯಿತು 

ಸುದ್ದಿ ಓದಿ