ಕುಷ್ಟಗಿ

ಪ್ರತಿಯೊಬ್ಬ ಮಹಿಳೆಯ ಅಭಿವೃದ್ಧಿಗಾಗಿ ಕುಟುಂಬಸ್ಥರ ಸಹಕಾರ ಅತ್ಯವಶ್ಯಕ: ಪಿಎಸೈ ವೈಶಾಲಿ

ಪ್ರತಿಯೊಬ್ಬ ಮಹಿಳೆಯ ಅಭಿವೃದ್ಧಿಗಾಗಿ ಕುಟುಂಬಸ್ಥರ ಸಹಕಾರ ಅತ್ಯವಶ್ಯಕ: ಪಿಎಸೈ ವೈಶಾಲಿ

ಲೋಕದರ್ಶನ ವರದಿ

ಕುಷ್ಟಗಿ 21: ಪ್ರತಿಯೊಬ್ಬ ಮಹಿಳೆಯು ಶೈಕ್ಷಣಿಕ ರಂಗವು ಸೇರಿದಂತೆ ವಿವಿಧ ರಂಗದಲ್ಲಿ ಮುಂದುವರೆಯಲು ಕುಟುಂಬಸ್ಥರ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನವು ಅತಿ ಮುಖ್ಯವಾಗಿದೆ ಎಂದು ತಾವರಗೇರಾ ಪಿಎಸ್ಐ ವೈಶಾಲಿ ಝಳಕಿ ಅವರು ಅಭಿಪ್ರಾಯಪಟ್ಟರು. 

ತಾಲೂಕಿನ ಕೇಸೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ದಯಾನಂದಪುರಿ ಸಂಘದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಂಬತ್ತು ಜನ ಮಹಿಳೆಯರಿಗೆ ರಾಜ್ಯಮಟ್ಟದ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ, ಚೊಚ್ಚಲ ಗಭರ್ಿಣಿಯ ಹತ್ತು ಜನ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.  

ಒಬ್ಬ ಮಹಿಳೆಗೆ ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬ ಹಂಬಲ ಇರುತ್ತದೆಯೋ ಆ ಕ್ಷೇತ್ರದತ್ತ ಅವರನ್ನು ಬೆಳೆಸಲು ಸಹಕರಿಸಿದರೆ ಎಲ್ಲ ಮಹಿಳೆಯರು ಅಭಿವೃಧ್ದಿ ಹೊಂದಲು ಸಾಧ್ಯವಾಗುತ್ತದೆ ಯಾವುದೆ ಕಾರಣಕ್ಕೂ ಬೇಗನೆ ಮದುವೆಯನ್ನು ಮಾಡಬೇಕು ಎಂಬುದನ್ನು ತಲೆಯಿಂದ ಕಿತ್ತಾಕಿ  ಅವರ ಶೈಕ್ಷಣಿಕ ಜೀವನವನ್ನು ಮುಗಿಯುವ ತನಕ ತಂದೆ ತಾಯಿಗಳು ಹಾಗೂ ಅಣ್ಣತಮ್ಮಂದಿರು ರಕ್ಷಣೆಯನ್ನು ಒದಗಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಮಹಿಳಾ ಸಬಲೀಕರಣಕ್ಕೆ ಕಾರಣವಂತರಾಗಬೇಕು ಎಂದರು. 

ಯುವ ಸಾಹಿತಿಯಾದ ರಜಿಯಾ ಬಾವಿಕಟ್ಟಿ ಮಾತನಾಡಿ ಕೇವಲ ಒಬ್ಬ ಮಹಿಳೆ ಮಾತ್ರ ಮುಂದುವರಿಯಲು ಸಾಧ್ಯವಿಲ್ಲ ಅವರ ಬೆನ್ನೆಲುಬಾಗಿ ತಂದೆ ಅಥವಾ ಅಣ್ಣತಮ್ಮ, ಗಂಡ ಇವರ ಸಹಕಾರ ಇದ್ದಾಗ ಮಾತ್ರ ಒಬ್ಬ ಹೆಣ್ಣು ಶೈಕ್ಷಣಿಕವಾಗಿ ರಾಜಕೀಯವಾಗಿ ಬೆಳೆಯಲು ಸಾಧ್ಯವಿದೆ ಆದ ಕಾರಣ ಎಲ್ಲಾ ಮಹಿಳೆಯಾರಿಗೂ ಶಿಕ್ಷನವನ್ನು ಕಡ್ಡಾಯವಾಗಿ ಕೊಡಿಸಿ ಅಭಿವೃದ್ಧಿಯತ್ತ ಸಾಗಲು ಸಹಕರಿಸಿ ಎಂದು ಹೇಳಿದರು. 

ಆಯುಷ್ ವೈದ್ಯಾಧೀಕಾರಿ ಡಾ.ನೇತ್ರಾವತಿ ಅವರು ಮಾತನಾಡಿ ಗಭರ್ಿಣಿಯರು ತರಕಾರಿ, ಹಣ್ಣು ಮತ್ತಿತರೆ ಪೌಷ್ಟಿಕ ಆಹಾರ ಸೇವಿಸಬೇಕು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿಯೆ ತಯಾರಿಸಿ ಸೇವಿಸಬೇಕು ಆರೋಗ್ಯ  ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. 

ಸಾಧಕಿಯರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ. ನೇತ್ರಾವತಿ ಬಿ.ಕೆ, ಅನ್ನಪೂರ್ಣ ಪಾಟೀಲ, ಬೇಬಿಜಾನ ನದಾಫ್, ದೇವಮ್ಮ ಗೌಡ್ರ, ರಜಿಯಾ ಬಾವಿಕಟ್ಟಿ, ಸಂಗಮ್ಮ ಟೆಂಗುಂಟಿ, ಸಲಿಮಾಬೇಗಂ ಅರಗಿದ್ದಿ, ಶರಣಮ್ಮ ಕೆಂಗಾಪುರ, ಪುಷ್ಪಾವತಿ ಕುಲಕರ್ಣಿ, ಇವರಿಗೆ ರಾಜ್ಯಮಟ್ಟದ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ಪಿಡಿಓ ಅಮಿನಸಾಬ ಅಲಂದರ, ಗ್ರಾಪಂ ಉಪಾಧ್ಯಕ್ಷ ಈರಮ್ಮ ಟೆಂಗುಂಟಿ, ಸಂಘದ ಕಾರ್ಯದಶರ್ಿ ಶ್ರೀನಿವಾಸ ಕಂಟ್ಲಿ, ಗ್ರಾಪಂ ಸದಸ್ಯರಾದ ಶಾರದಾ ಜಲಕಮಲದಿನ್ನಿ, ಹೇಮಾವತಿ ಗೋಪಾಲನಾಯಕ, ಶುಖಮುನಿ ಇಳಿಗೇರ, ಉಮೇಶ ಮಡಿವಾಳರ, ಗುರನಗೌಡ ಪಾಟೀಲ, ರಮೇಶ ಗಡಾದ, ಯಂಕಪ್ಪ ದಾಸರ, ಗ್ರಾಮಸ್ಥರಾದ ಮಂಜೂರಅಲಿ ಬನ್ನು, ಪ್ರಕಾಶ ಅಂಗಡಿ, ಸೇರಿದಂತೆ ಇತರರು ಹಾಜರಿದ್ದರು 

ಸುದ್ದಿ ಓದಿ