ಲಯನ್ಸ್ ಸೇವಾ ಸಂಸ್ಥೆಯಿಂದ ನಾಳೆ ಕಣ್ಣಿನ ತಪಾಸಣಾ ಶಿಬಿರ
ರಾಣೆಬೆನ್ನೂರು, : ಮೇಡ್ಲೆರಿ ರಸ್ತೆಯ ಲಯನ್ಸ್ ಶಾಲಾ ಸಭಾಭವನದಲ್ಲಿ ಡಿ. 10ರಂದು ಶನಿವಾರ ಮುಂಜಾನೆ 9:00 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಸಾರ್ವಜನಿಕವಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವು ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ್ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಮತ್ತು ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ನೇತ್ರ ಸಂಚಾರಿ ಘಟಕ ಹಾವೇರಿ ಇವರ ಸಹಯೋಗದಲ್ಲಿ ಶಿಭಿರ ನಡೆಯಲಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಮತ್ತು ನೇತ್ರ ತಪಾಸಣೆಗೆ ಬರುವಾಗ ಆಧಾರ್ ಕಾರ್ಡ್ ಝೆರಾಕ್ಸ್ ಎರಡು ಪ್ರತಿ,ಎರಡು ಪಾಸ್ ಪೋಟರ್್ ಸೈಜ್ ಫೋಟೋ ಜೊತೆಯಲ್ಲಿ ತರಬೇಕು