ಅತ್ಯಾಧುನಿಕ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಸಾರ್ವಜನಿಕರಿಗೆ ಉಚಿತ ಪ್ರವೇಶ
ಅತ್ಯಾಧುನಿಕ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಸಾರ್ವಜನಿಕರಿಗೆ ಉಚಿತ ಪ್ರವೇಶ
ರಾಣೇಬೆನ್ನೂರು 25 : ಆಧುನಿಕ ಜೀವನ ಶೈಲಿ ಬಯಸುವುದು ಪ್ರತಿಯೊಬ್ಬರ ಆಸೆ ಸಹಜ. ಜ್ಞಾನ ತಂತ್ರಜ್ಞಾನ ಮತ್ತು ವಿಜ್ಞಾನ ಇವುಗಳ ಸಮೀಕರಣದಿಂದ ಅತ್ಯಾಧುನಿಕ ವಸ್ತುಗಳು ಸುಲಭವಾಗಿ ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತಿರುವುದು ನಾಗರಿಕ ಸಮುದಾಯಕ್ಕೆ ಸಿಕ್ಕ ಅವಕಾಶವಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಶುಕ್ರವಾರ ಇಲ್ಲಿನ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಬಿಲ್ಡ್ ಎಕ್ಸ್ಪೋ ಮತ್ತು ಫೋರಮ್ ಆಪ್ ರಾಣೇಬೆನ್ನೂರು ಸಿವಿಲ್ ಇಂಜೀನೀಯರ್ ಸಂಘವು ಆಯೋಜಿಸಿರುವ ಅತ್ಯಾಧುನಿಕ ಕಟ್ಟಡ ಸಾಮಗ್ರಿಗಳ ಸಾರ್ವಜನಿಕ ಉಚಿತ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯಾಧುನಿಕ ವಸ್ತುಗಳು ಸಹ ಸ್ಪರ್ಧಾತ್ಮಕ ದರದಲ್ಲಿ ಸಿಗುತ್ತಿರುವುದರಿಂದ ಅತ್ಯಂತ ಸುಲಭವಾಗಿ ಸಾಮಾನ್ಯ ಜನರು ಸಹ ತಮ್ಮ ಕನಸಿನ ಸುಂದರ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಲ್ಲಿದೆ ಎಂದರು. ಬಿಲ್ಡ್ ಎಕ್ಸ್ಪೋ ಕಳೆದ 15 ವರ್ಷಗಳ ಹಿಂದೆ ಕೇವಲ ಹುಬ್ಬಳ್ಳಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು. ಸ್ಥಳೀಯ ಅಭಿಯಂತರರ ಸಂಘವು ಇಂತಹ ಯೋಜನೆಗಳು ನಗರಕ್ಕೆ ತಂದು ಪ್ರದರ್ಶನದ ವ್ಯವಸ್ಥೆ ಮಾಡುತ್ತಿರುವುದರಿಂದ. ಎಲ್ಲರಿಗೂ ಅನುಕೂಲವಾಗಲಿದೆ ಸಂಘಟನೆಯ ಕಾರ್ಯ ಸ್ಲಾಘನೀಯವಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ವೀರೇಶ್ ಮಕರಿ ಈ ಭಾಗದ ಜನರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ 2018 ರಿಂದ ಬಿಲ್ಡ್ ಎಕ್ಸ್ಪೋ ಆಯೋಜಿಸುತ್ತಾ ಬಂದಿದ್ದೇವೆ. ಇದರಿಂದ ಪ್ರತಿಯೊಬ್ಬರಿಗೂ ತಮ್ಮ ಸುಂದರ ಕನಸಿನ ಮನೆ ಅತ್ಯಂತ ಸುಲಭವಾಗಿ ಸರಳವಾಗಿ ಮತ್ತು ಸುಂದರವಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು. ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ರವಿಕಿರಣ್ ಬಿಲ್ಡ್ ಎಕ್ಸ್ಪೋ ಉಚಿತ ಪ್ರದರ್ಶನ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ಆನಂದ್ ಮೆಂಡಾ ಮಾಜಿ ಅಧ್ಯಕ್ಷ ವ್ಹಿ. ಎಫ್.ಮರಬಸಣ್ಣನವರ ಅಭಿಯಂತರಾದ ಅಶೋಕ್ ಎಸ್ ಯೋಗಿ, ದೇವರಾಜ ಹುಲ್ಮನಿ, ಅಕ್ಷಯ್ ಮರಬಸಣ್ಣನವರ, ಪವನ್ ಕಾಟಿ, ಡಿ.ಕೆ. ಹನುಮಂತಪ್ಪ, ಕೆ ಎನ್ ಷಣ್ಮುಖ, ಮುರುಗೇಶ್ ಇಚ್ಚಂಗಿ, ಜಗನ್ನಾಥ್ ಬಲ್ಲೂರ, ಬಸವರಾಜ ಐರಣಿ,ಸುಭಾಸ್ ಜನ್ನು, ರಾಕೇಶ್ ರೆಡ್ಡೇರ,ನಾಗರಾಜ ಪಾಟೀಲ್, ಪ್ರಭು ಮುಂಡಾಸದ,ವಿನಾಯಕ ಯೋಗಿಮಠ, ಸುರೇಶ ಈಟಿ, ಮಿಥಿನ ಶೇಪುರ್, ವಿಜಯ್ ಚೋಣದ, ಅಜಯ್ ಬಣಗಾರ, ಸೇರಿದಂತೆ ಮತ್ತಿತರ ಗಣ್ಯರು, ಯುವ ಅಭಿಯಂತರರು. ಸಂಘದ ಪದಾಧಿಕಾರಿಗಳು ಕಟ್ಟಡ ನಿರ್ಮಾಣಕಾರರು. ನಾಡಿನ 60ಕ್ಕೂ ಹೆಚ್ಚು ವಿವಿಧ ಕಂಪನಿಗಳ ವ್ಯವಸ್ಥಾಪಕರು, ಉತ್ಪಾದಕರು, ಮಾರಾಟಗಾರರು ಪ್ರದರ್ಶನಕಾರರು ಪಾಲ್ಗೊಂಡಿದ್ದರು. ಇಂದಿನಿಂದ ಆರಂಭವಾಗಿರುವ ಬಿಲ್ಡ್ ಎಕ್ಸ್ಪೋ ಅಕ್ಟೋಬರ್ 27 ರವರೆಗೆ 3 ದಿವಸಗಳ ಕಾಲ ನಡೆಯಲಿದೆ.