ಪ್ರತಿಯೊಬ್ಬರ ಹಕ್ಕು ಉತ್ತಮ ಆಡಳಿತಕ್ಕೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಿ
ಸಿರುಗುಪ್ಪ : ಮುಂದಿನ ವರ್ಷದಲ್ಲಿ ಚುನಾವಣೆಗಳು ಆರಂಭವಾಗಲಿದ್ದು ಇದುವರೆಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದ ಮತದಾರರು ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ತಿದ್ದುಪಡಿ ಮಾಡಿಕೊಳ್ಳಬೇಕು. ಎಂದು ಮೌಲಾನಾ ಹಾಜಿ ಎಸ್ ಅಬ್ದುಲ್ ಸಮದ್ ಸಾಹೇಬ್ ಅವರು ಹೇಳಿದರು.ಶುಕ್ರವಾರ ಸೌದಾಗರ್ ಜುಮ್ಮ ಸುನ್ನಿ ಮಸೀದಿಯಲ್ಲಿ ಅವರು ಪ್ರಾರ್ಥನೆ ನಮಾಜ್ ಸಲ್ಲಿಸಿದ ನಂತರ ಅವರು ಮಾತನಾಡುತ್ತಾ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಲು ಅವಕಾಶವಿದೆ 2023ನೇ ಜನವರಿ 1ಕ್ಕೆ 18 ವರ್ಷ ತುಂಬುವ ಎಲ್ಲಾ ಯುವ ಮತದಾರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.ಮತದಾನವು ಪ್ರತಿಯೊಬ್ಬರ ಹಕ್ಕು ಉತ್ತಮ ಆಡಳಿತ ವರ್ಗವನ್ನು ಆಯ್ಕೆ ಮಾಡಿಕೊಳ್ಳುವುದ ಪ್ರತಿಯೊಬ್ಬರ ಹಕ್ಕಾಗಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಸಮುದಾಯದವರಿಗೆ ತಿಳಿಸಿದರು. ಕರ್ನಾಟಕ ವಕ್ಫ್ ಮಂಡಳಿ ಮಾಜಿ ಜಿಲ್ಲಾ ಸದಸ್ಯರು ಸಮಾಜ ಸುಧಾರಕ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಮಸೀದಿಯ ನಿಕಟ ಪೂರ್ವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಭಾಷಾ, ಮಸೀದಿಯ ಅಧ್ಯಕ್ಷ ಮೇಕಂದಾರ್ ಮಹಬೂಬ್ ಬಾಷಾ,ಎ ಮೊಹಮ್ಮದ್ ನೌಶಾದ್ ಅಲಿ,ಡಾ ಮೊಹಮ್ಮದ್ ಅಲಿ,ಖತೀಬ್ ಜಹೀರುದ್ದೀನ್ ಬಾಬು ಹಂಡಿ ಹಾಶಿಮ್,ಹಾಜಿ ಅಬ್ದುಲ್ ಹಮೀದ್ ಫಾರೂಕಿ,ಖಾಲಿ ಚೀಲ ಹಾಜಿ ಹುಸೇನ್ ಸಾಬ್, ಹಂಡಿ ಹುಸೇನ್ ಸಾಬ್ ಸಮಾಜದವರು ಇದ್ದರು.