ತಾಳಿಕೋಟಿ

ಪರಿಸರ ರಕ್ಷಣೆ ನಮ್ಮ ಜವಾಬ್ದಾರಿ

ಪರಿಸರ ರಕ್ಷಣೆ ನಮ್ಮ ಜವಾಬ್ದಾರಿ

ತಾಳಿಕೋಟೆ: ಪರಿಸರ ಸಂರಕ್ಷಣೆ ಬರೀ ಕರ್ತವ್ಯವಲ್ಲ, ಅದು ನಮ್ಮ ದೊಡ್ಡ ಜವಾಬ್ದಾರಿಯೂ ಹೌದು. ಅದರ ರಕ್ಷಣೆಯಾಗದಿದ್ದರೆ ಭೂಮಿಯ ಮೇಲೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ )ಎಚ್ಚರಿಸಿದರು.

ಅವರು ಪಟ್ಟಣದ ಆಶ್ರಯ ಬಡಾವಣೆಯ ಉದ್ಯಾನದಲ್ಲಿ ಹಸಿರು ಸಂಪದ ಬಳಗ, ಪುರಸಭೆ, ತಾಲೂಕು ಅರಣ್ಯ ಇಲಾಖೆಗಳಾದ ಸಾಮಾಜಿಕ- ಪ್ರಾದೇಶಿಕ ಹಾಗೂ ಆಲಮಟ್ಟಿ ಕೆಬೆಜೆನ್ನೆಲ್ ಅರಣ್ಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ   ವಿಶ್ವ ಪರಿಸರ ದಿನಾಚರಣೆ,  ಹಸಿರು ಸಂಪದ ಬಳಗದ ಆರನೇ ವಾಷರ್ೀಕೋತ್ಸವ ಹಾಗೂ ಪರಿಸರ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಗಿಡ ನಾಟಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ಎಂದರೆ ಅದು ದೇವರ ಕೆಲಸ, ಮರಗಳಿಲ್ಲದಿದ್ದಲ್ಲಿ ನಮ್ಮ ಬದುಕು ನಿಲ್ಲದು, ಪ್ರತಿಯೊಬ್ಬರೂ ಗಿಡಗಳ ಸಂರಕ್ಷಣೆ ಮಾಡಬೇಕು, ಉಳಿಸಿ ಬೆಳೆಸಬೇಕು. ಕಡಿಯುವ ಅನಿವಾರ್ಯತೆ ಬಂದಲ್ಲಿ ಇನ್ನೊಂದು ಕಡೆ ಇನ್ನೆರಡು ಗಿಡ ನೆಟ್ಟು ಬೆಳೆಸಿ ಎಂದು ಸಲಹೆ ನೀಡಿದರು. ಪಟ್ಟಣದ ಹಸಿರು ಸಂಪದ ಬಳಗದ ಆರು ವರ್ಷಗಳ ಸಾಧನೆ ಗಮನಾರ್ಹವಾಗಿದ್ದು ಸರ್ವ ಸದಸ್ಯರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಬಳಗದ ಅಧ್ಯಕ್ಷ ಡಾ.ವಿ.ಎಸ್.ಕಾಚರ್ಿಹಾಗೂ ಸನ್ಮಾನಿತರಾದ  ಸಾಮಾಜಿಕ ಕಾರ್ಯಕರ್ತ ಶಫೀಕ್ ಇನಾಮದಾರ ಮಾತನಾಡಿದರು.

ತಾಲೂಕು ಅರಣ್ಯ ಇಲಾಖೆ ಆರ್.ಎಫ್.ಓಗಳಾದ ಆಲಮಟ್ಟಿ ಕೆಬೆಜೆನ್ನೆಲ್ನ ಯಶ್ವಂತ ರಾಠೋಡ, ಎಸ್.ಜಿ.ಸಂಗಳಿಕ(ಸಾಮಾಜಿಕ ವಲಯ) ಬಸನಗೌಡ ಬಿರಾದಾರ (ಪ್ರಾದೇಶಿಕ ವಲಯ)  ಹಾಗೂ ಪುರಸಭೆ ಸದಸ್ಯರುಗಳು, ಪ್ರಮುಖರು,  ಸ್ಥಳೀಯ ಹಾಗೂ ಮೂಕಿಹಾಳ-ಶಿವಪುರ ಗ್ರಾಮದ ಹಸಿರು ಸಂಪದ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ :- ನೂತನವಾಗಿ ಆಯ್ಕೆಯಾದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರನ್ನು ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ನ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಶಫೀಕ್ ಇನಾಮದಾರ, ಅರಣ್ಯ ಕಾವಲುಗಾರ ಬಸು ಚೌಧರಿ, ಪ್ರಗತಿಪರ ವೇದಿಕೆ ತುಂಬಗಿ ಹಾಗೂ ನಮ್ಮ ಹೆಮ್ಮೆ ನಮ್ಮ ಸಾಲವಾಡಗಿಯ ಪರಿಸರ ಸಂಘಟನೆಗಳನ್ನು  ಬಳಗದ ವತಿಯಿಂದ ಇದೇ ಸಂದರ್ಭದಲ್ಲಿ  ಗೌರವಿಸಲಾಯಿತು. ಬಳಗದ ಸಂಚಾಲಕ ಶರಣು ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ ಸಕರ್ಾರದ ಶಿಪ್ಪಿಂಗ್ ಕಾಪರ್ೋರೇಶನ್ ಆಪ್ ಇಂಡಿಯಾದ ನಿದರ್ೇಶಕ ಶ್ರೀಕಾಂತ ಪತ್ತಾರ ಸ್ವಾಗತಿಸಿದರು. ಹೆಗ್ಗಣದೊಡ್ಡಿ ಸಕರ್ಾರಿ ಪ್ರೌಢಶಾಲೆಯ ಶಿಕ್ಷಕ ಸಾಹೇಬಗೌಡ ಬಿರಾದಾರ ನಿರ್ವಹಿಸಿದರು




ಸುದ್ದಿ ಓದಿ