ಸಿರುಗುಪ್ಪ

ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಆಯ್ಕೆ

ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಆಯ್ಕೆ

ಸಿರುಗುಪ್ಪ 19: ನಗರದ ಅಭಿನವ ಹೋಟೆಲ್ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ತಾಲೂಕು ವೈದ್ಯರ ಸಭೆ ಜರುಗಿತು. ನೂತನ ಅಧ್ಯಕ್ಷರನ್ನಾಗಿ ಡಾ ಅಬ್ದುಲ್ ಜಲೀಲ್ ಕಾರ್ಯದರ್ಶಿಯಾಗಿ ಡಾ ಸುಜಾತ ಸೂಗೂರು ಆಯ್ಕೆಯಾಗಿದ್ದಾರೆ. ಹಿರಿಯ ವೈದ್ಯ ಡಾ ಬಿ ನಾರಾಯಣಪ್ಪ, ಡಾ ಬಿ ಜಯರಾಮ ರೆಡ್ಡಿ, ಡಾ ಎಂ ಜಿ ಹಳ್ಳೂರು ಇವರನ್ನು ಗೌರವಿಸಿ ಸನ್ಮಾನಿಸಿದರು. ನಿಕಟ ಪೂರ್ವ ಅಧ್ಯಕ್ಷೆ ಡಾ ಗಂಗಮ್ಮ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ, ಡಾ ಮಧುಸೂದನ್ ಕಾರಿಗನೂರು, ಜನಾಭಿಪ್ರಾಯ ಮುಖಂಡ ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಸೇರಿದಂತೆ ಮತ್ತಿತರ ವೈದ್ಯರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ಸುದ್ದಿ ಓದಿ