ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ
ಉಗರಗೋಳ: ಸವದತ್ತಿ ತಾಲೂಕಿನ ಚುಳಕಿ ಗ್ರಾಮದ, ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಜರುಗಿದ, ಎರಡನೇಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಲ್ಲವ್ವ ಮಾರುತಿ ಉಪ್ಪಾರ ಹಾಗೂ ಉಪಾಧ್ಯಕ್ಷರಾಗಿ ಬಸನಗೌಡ ಮಹಾದೇವಗೌಡ ಮುದೇನಕೊಪ್ಪ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಯಶವಂತಕುಮಾರ ಘೋಷಿಸಿದರು.
ಸುರೇಶ ಬಡಗಿಗೌಡ್ರ, ಎನ್ ಬಿ ಸಂಗನಗೌಡ್ರ, ಮಾಂತೇಶ ಸಂಗ್ರೇಶ, ಪುಂಡಲೀಕ ಸಂಗ್ರೇಸ, ಮಲ್ಲಪ್ಪ ಬಡಿಗೇರ, ಗಂಗಪಗಪ ಶಿರಸಂಗಿ, ಪಂಚಲಿಂಗಪ್ಪ ತೋರಗಲ್ಲ್, ಗಿರೀಶ್ ತಿಮ್ಮರಡ್ಡಿ, ಯಂಕಪ್ಪ ಚಿಕ್ಕುಂಬಿ, ನ್ಯಾಮದೇವ ಹರ್ಲಾಪೂರ, ಬಾಳಪ್ಪ ಗೊವಣ್ಣವರ, ರಂಗಪ್ಪ ಸಂಗ್ರೇಶಿ, ರುದ್ರಗೌಡ ಸುಳ್ಳದ, ಉಮೇಶಗೌಡ ಜಮಾದಾರ ಹಾಗೂ ಚುಳಕಿ, ಚಿಕ್ಕುಂಬಿ ಗ್ರಾಮಸ್ಥರು ಅಧಿಕಾರಿಗಳು ಸಿಬ್ಬಂದಿ ಇದ್ದರು.