ರಾಣೆಬೆನ್ನೂರ

ಶಿಕ್ಷಣ ಸಾಧನೆ ಜೀವನ ಬದುಕಿಗೆ ಭದ್ರ ಬುನಾದಿ- ಡಾ:ಕೇಲಗಾರ

ಶಿಕ್ಷಣ ಸಾಧನೆ ಜೀವನ ಬದುಕಿಗೆ ಭದ್ರ ಬುನಾದಿ- ಡಾ:ಕೇಲಗಾರ

ರಾಣೇಬೆನ್ನೂರು: ಶಿಕ್ಷಣ ಎನ್ನುವುದು  ಸಾಧಕರ ಸ್ವತ್ತು. ಶಿಕ್ಷಣ ಸಾಧನೆಗೆ ಯಾವುದೇ ಜಾತಿ ಮತ, ಬಡವ, ಶ್ರೀಮಂತ ಎನ್ನುವ ಭಿನ್ನ ಭೇದ ಭಾವವಿಲ್ಲ ಇರುವುದೊಂದೇ ಅಚಲ ವಿಶ್ವಾಸ, ನಿರಂತರ ಅಧ್ಯಯನ ಎಂದು ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಚೇರ್ಮನ್, ರೋ, ಡಾ:ಬಸವರಾಜ್ ಎಸ್. ಕೇಲಗಾರ ಹೇಳಿದರು.   

    ಅವರು ನಗರ ಹೊರ ವಲಯದ ರೋಟರಿ ಶಾಲಾ ಸಭಾಭವನದಲ್ಲಿ, ನಡೆದ2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ  ವಾರ್ಷಿಕ ಪರೀಕ್ಷೆಯಲ್ಲಿ  ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮೆರೆದ  ವಿದ್ಯಾರ್ಥಿಗಳ ಅಭಿನಂದನಾ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಶಿಕ್ಷಣ ನೀಡುವುದೇ ತಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಸಮಾಜದಲ್ಲಿ ಸಮಾನತೆ ಹೊಂದಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದ ಅವರು, ಇಂದಿನ ವಿದ್ಯಾರ್ಥಿಗಳು  ಜೀವನದಲ್ಲಿ ಭದ್ರತೆಯ ಭವಿಷ್ಯ ಕಾಣಬೇಕಾದರೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ  ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಪ್ರತಿಮಾ ಸಾಧಕ ವಿದ್ಯಾರ್ಥಿಗಳಾ ದ, ನಯನಾ ವ್ಯೆ.ಗುತ್ತಲ್, ದ್ವಿತೀಯ ಸ್ಥಾನ ಗಳಿಸಿದ, ವೈಷ್ಣವಿ ಬಿ ಉಮ್ಮನಗೌಡರ, ಹಾಗೂ ತೃತೀಯ ಸ್ಥಾನದ  ವೈಷ್ಣವಿ ಜಿ ಅಂಗಡಿ. ಮತ್ತು ಅವರ ಪಾಲಕರಿಗೆ ಅಭಿನಂದಿಸಿ, ಪ್ರಶಸ್ತಿ ಪತ್ರ, ನಗದು ಮೊತ್ತ ಪಾರಿ ತೋಷಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.         

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೆ ವಿ ಶ್ರೀನಿವಾಸ್, ಮುಖ್ಯೋಪಾಧ್ಯಾಯ ಪ್ರಕಾಶ ಚೌಟಗಿ, ಆಡಳಿತ ಮಂಡಳಿಯ ಸದಸ್ಯರಾದ,ವೀರೇಶ್ ಮೋಟಗಿ. ಎಂ ಆರ್ ಪಾಟೀಲ್, ರೋಟರಿ  ಅಧ್ಯಕ್ಷ ಡಾ. ಎಂ. ಎಂ.ಅನಂತರೆಡ್ಡಿ, ಕಾರ್ಯದರ್ಶಿ ಜಿ.ಎಸ್.ರಾಮಚಂದ್ರ ಸೇರಿದಂತೆ ಮತ್ತಿತರ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು

ಸುದ್ದಿ ಓದಿ