ಶಿಗ್ಗಾವ್

ಭವಿಷ್ಯದ ಏಳ್ಗೆಗಾಗಿ ಶಿಕ್ಷಣ ಮುಖ್ಯ: ಜಗದೀಶ ಕುರಂದವಾಡ

ಭವಿಷ್ಯದ ಏಳ್ಗೆಗಾಗಿ ಶಿಕ್ಷಣ ಮುಖ್ಯ: ಜಗದೀಶ ಕುರಂದವಾಡ

ಲೋಕದರ್ಶನ ವರದಿ

ಶಿಗ್ಗಾವಿ 20: ವಿದ್ಯಾರ್ಥಿಗಳ ಭವಿಷ್ಯದ ಏಳ್ಗೆಗಾಗಿ ಶಿಕ್ಷಣ ಪಡೆಯುವದು ಬಹುಮುಖ್ಯವಾಗಿದೆ. ಹೀಗಾಗಿ ಸರ್ಕಾರ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದು, ಹೆಚ್ಚಿನ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಕೀರ್ತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಜಗದೀಶ ಕುರಂದವಾಡ ಹೇಳಿದರು.

  ತಾಲ್ಲೂಕಿನ ಬಂಕಾಪುರ ಪಟ್ಟಣದ ಕರ್ನಾಟಕ ಕೀರ್ತಿ  ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳ ಬಿಳ್ಕೋಡುಗೆ, ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ ಸಮಗ್ರಜ್ಞಾನ ವಿಕಾಸಕ್ಕಾಗಿ ವಿದ್ಯಾರ್ಜನೆ ಮುಖ್ಯವಾಗಿದೆ. ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೂಡುಗೆ ನೀಡುವಂತಾಗಬೇಕು. ಉತ್ತಮ ಬದುಕು ಕಟ್ಟಿಕೊಳ್ಳುವ ಜತೆಗೆ ಉತ್ತಮ ಸಮಾಜ ನಿಮರ್ಾಣಕ್ಕೆ ಕೈಜೋಡಿಸಬೇಕು. ಸಮಾಜಮುಖ್ಯ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಸಮರ್ಥ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಲು ಸಾಧ್ಯವಿದೆ. ಉತ್ತಮ ಗುರಿ ಉದ್ದೇಶದ ಜತೆಗೆ ಸತತ ಪ್ರಯತ್ನ ನಮ್ಮದಾಗಬೇಕು. ಅದರಿಂದ ಮಾಡುವ ಕಾರ್ಯಗಳಲ್ಲಿ ಯಶಸ್ವಿ ಪಡೆಯಲು ಸಾಧ್ಯವಿದೆ ಎಂದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಿವಿಧ ಸ್ಪರ್ಧೆಯಲ್ಲಿ, ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿ ಗಳನ್ನು ಸನ್ಮಾನಿಸಿ, ಬಹುಮಾನಗಳನ್ನು ವಿತರಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯ ಎಸ್.ಆರ್.ಕಾರಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಬಿ.ಉಂಕಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಿ.ಎಸ್.ದುಂಡಪ್ಪನವರ, ಉಪನ್ಯಾಸಕರಾದ ಎಸ್.ಬಿ.ಕುರಬರ, ಜಗದೀಶ ಪುರದ, ಸುರೇಖಾ ಕುರಂದವಾಡ, ಗೀರೀಶ ಕುರಂದವಾಡ, ಎಂ.ವಿ.ಗಾಡದ, ಎಂ.ಆರ್.ಅಶೋಕ, ಚಂದ್ರು ವಾಲ್ಮೀಕಿ, ಎಂ.ಎನ್.ಚಿನಿವಾರ, ಸುರೇಶ ಮುರಿಗೆಣ್ಣವರ, ವಿದ್ಯಾಥರ್ಿ ಪ್ರತಿನಿಧಿ ಸುಧೀಪ್ ಆಲದಕಟ್ಟಿ, ರಾಜೇಶ್ವರಿ ಮಂಗಳಾರತಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು.

ಸುದ್ದಿ ಓದಿ