ಶಿಗ್ಗಾವ್

ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಶಿಗ್ಗಾವಿ :ನಗರದಲ್ಲಿ ಒಂಬತ್ತು ದಿನಗಳ ಕಾಲ ವೈಶಿಷ್ಟ್ಯಪೂರ್ಣವಾಗಿ ನೆರವೇರಲಿರುವ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ- 2023 ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು.

ಪಟ್ಟಣದ ಪಾದಗಟ್ಟಿಯಲ್ಲಿ ನಡೆದ ಗ್ರಾಮದೇವತೆ ಜಾತ್ರಾ ಮಹೋತ್ಸವ ಧರ್ಮ ಸಭೆ ಕಾರ್ಯಕ್ರಮದಲ್ಲಿ ಗಂಜೀಗಟ್ಟಿಯ ವೈಜನಾಥ ಶಿವಲಿಂಗ ಶಿವಾಚಾರ್ಯರು, ಸ್ಥಳೀಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹಾಗೂ ಸವಣೂರ ಕಲ್ಮಠದ ಮಹಾಂತ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವ ಉದ್ಘಾಟನೆ ಪಾವನ ಸಾನಿಧ್ಯವಹಿಸಿದ್ದರು.

ಮಾಜಿ ಸಂಸದ ಹಾಗೂ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ ಉದ್ಘಾಟನೆ ಅಧ್ಯಕ್ಷತೆವಹಿಸಿ ಮಾತನಾಡಿ ಒಂಬತ್ತು ದಿನಗಳವರೆಗೆ ನಡೆಯುವ ಜಾತ್ರಾ ಮಹೋತ್ಸವ ಉದ್ಘಾಟನೆಗೊಂಡಿದ್ದು ವೈಭವದಿಂದ ಜರುಗಲಿದೆ ಶಕ್ತಿದೇವತೆಎಲ್ಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ನೀಡಿ ಒಳಿತನ್ನುಂಟು ಮಾಡಲೆಂದು ತಿಳಿಸಿದರು.

ಜಾನಪದ ಕಲಾವಿದರು ಹಾಗೂ ಸ್ಥಳೀಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಕ್ತಿ ಪ್ರದಾನ ಗೀತೆಗಳು, ದೇವಿ ಶಕ್ತಿಯ ಸಂದೇಶ ಸಾರುವ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನ ರಂಜಿಸಿದರು. 

ಜಾತ್ರಾ ಮಹೋತ್ಸವಕ್ಕೆ ಸಹಾಯ, ಸಹಕಾರ ನೀಡಿದ ದಾನಿಗಳು ಹಾಗೂ ಗಣ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಜಿ ಸಂಸದರು ಹಾಗೂ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಉಪಾಧ್ಯಕ್ಷ ಶೇಖವ್ವ ಶಿಗ್ಗಾವಿ, ನಿವೃತ್ತ ಪ್ರಾಚಾರ್ಯ ಐ.ಜಿ.ಪಾಟೀಲ, ಡಾ.ಅನುರಾಧ ಪಾಟೀಲ, ಪ್ರಾಚಾರ್ಯ ನಾಗರಾಜ ಅಣ್ಣಿಗೇರಿ, ಸಮಿತಿ ಉಪಾಧ್ಯಕ್ಷ ಎಸ್.ಪಿ.ಜೋಶಿ, ಶಿವಪ್ಪ ಚಿನ್ನಪ್ಪನವರ, ಡಾ.ಮೃತ್ಯುಂಜಯ ತಿಲರ್ಾಪೂರ, ನಾಗರಾಜ ಚಿನ್ನಪ್ಪನವರ, ಕಲ್ಲಪ್ಪ ಮಾರಂಬೀಡ, ಸಿದ್ಧಣ್ಣ ಮೊರಬದ, ಜಯಣ್ಣ ಹೆಸರೂರ, ದತ್ತಣ್ಣ ವರ್ಣಿಕರ್, ಎಂ.ಎಲ್.ದೇಶಪಾಂಡೆ, ನಾಗರಾಜ ಕುಲಕರ್ಣಿ , ಸಣ್ಣವೀರಪ್ಪ ಅರಳೇಶ್ವರ, ಶಿವಪ್ಪ ಗಂಜಿಗಟ್ಟಿ, ಚನ್ನವೀರ ನೀರಲಗಿ, ಅಜ್ಜಪ್ಪ ಹಾದಿಮನಿ, ಪ್ರತೀಕಕೋಳೇಕರ, ಸಾಗರ ಮಲ್ಲೂರ, ಡಾ.ನಾಗರಾಜ ದ್ಯಾಮನಕೊಪ್ಪ, ಸುಶಿಲೇಂದ್ರ ಬೆಳಗಲಿ, ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತಶ್ರೀಶೈಲ ಹುದ್ದಾರ, ಪತ್ರಕರ್ತ ಪರಮೇಶ ಲಮಾಣಿ, ಬಸವರಾಜ ಹೊನ್ನಣ್ಣವರ, ಬಸವರಾಜ ಹಡಪದ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು 

ಸುದ್ದಿ ಓದಿ