ಸಾಮಾನ್ಯರ ಬಗೆಗಿದ್ದ ಡಾ.ಟಿ.ಬಿ. ಸೊಲಬಕ್ಕನವರ ಕಳಕಳಿ ನಮಗೆ ಪ್ರೇರಣೆ
ಲೋಕದರ್ಶನ ವರದಿ
ಶಿಗ್ಗಾವಿ 20: ಬಹುಸಂಖ್ಯಾತ ಶ್ರಮಿಕ ವರ್ಗವನ್ನು ಪ್ರತಿನಿಧಿಸಿ ಹಳ್ಳಿಗರ ಮತ್ತು ಸಾಮಾನ್ಯರ ಜನರ ಬಗೆಗಿದ್ದ ಡಾ.ಟಿ.ಬಿ. ಸೊಲಬಕ್ಕನವರ ಕಳಕಳಿ ನಮಗೆ ಪ್ರೇರಣೆ ಎಂದು ಹುಬ್ಬಳ್ಳಿಯ ರಾಮಕೃಷ್ಣಾಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಗೊಟಗೋಡಿಯ ಶಿಲ್ಪ ಕಲಾ ಕುಟೀರದಲ್ಲಿ ಜರುಗಿದ ಡಾ.ಟಿ.ಬಿ. ಸೊಲಬಕ್ಕನವರ ತೃತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಲೆ ಮಾರಿ ಶ್ರೀಮಂತ ಆಗುವುದನ್ನು ಒಪ್ಪದ ಸೊಲಬಕ್ಕನವರ ತಮ್ಮ ಕಲೆ ಜನರ ಮನಸ್ಸನ್ನು ಕಟ್ಡಿಕೊಡಬೇಕು ಎಂದು ನಂಬಿದ್ದರು. ಜೊತೆಗೆ ತಮ್ಮ ನಂಬುಗೆಯಂತೆ ಬದುಕು ಸಾಗಿಸಿದರು. ಅವರ ಕನಸುಗಳನ್ನು ಮುನ್ನಡೆಸುವ ಹೊಣೆಗಾರಿಕೆ ನಮ್ಮ ನಿಮ್ಮ ಮೇಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮಾತನಾಡಿ, ನಾಲ್ಕು ದಶಕಗಳ ಕಾಲ ಸೊಲಬಕ್ಕನವರ ಒಡನಾಟದಲ್ಲಿದ್ದೆ. ದೊಡ್ಡಾಟ ಬಗ್ಗೆ ಅವರಿಗಿದ್ದ ಉತ್ಸುಕತೆ, ಲಲಿತ ಕಲೆಗಳ ಮೇಲಿದ್ದ ಪ್ರತಿಭೆ, ಅಂದುಕೊಂಡಿದ್ದನ್ನು ಸಾಧಿಸುವ ಬದ್ಧತೆ ಮತ್ತು ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಯುವಜನತೆಗೆ ಹುಮ್ಮಸ್ಸು ನೀಡಬಲ್ಲದು ಎಂದರು.
ಕಲಾಯಾನ ಉದ್ಘಾಟಿಸಿದ ಹಿರಿಯ ಕಲಾವಿದ ಮಹಾಲಿಂಗಪ್ಪ ಎ ಮಾತನಾಡಿ, ತಮ್ಮ ಕಲಾ ಸಾಧನೆ ಮೂಲಕ ಜನಮಾನಸದಲ್ಲಿರುವ ಡಾ.ಟಿ.ಬಿ.ಸೊಲಬಕ್ಕನವರ ಜೀವನಗಾಥೆ ಪರಿಚಯಿಸುವ ಗ್ರಂಥ ಪ್ರಕಟವಾಗಬೇಕು ಎಂದರು.
ರಂಗಕರ್ಮಿ ಬಸವರಾಜ ಬೆಂಗೇರಿ ಮಾತನಾಡಿ, ಇದಕ್ಕೂ ಮುನ್ನ ಡಾ.ಟಿ.ಬಿ. ಸೊಲಬಕ್ಕನವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಲಾಯಿತು. ಹಿರಿಯ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಫಕ್ಕೀರೇಶ ಕೊಂಡಾಯಿ ಹಾಗೂ ಬಸವರಾಜ ಶಿಗ್ಗಾಂವ ಸಂಗಡಿಗರಿಂದ ದೊಡ್ಡಾಟ ಕಲಾ ಪ್ರದರ್ಶನ ಜರುಗಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮತ್ತು ನಾಡಿನ ವಿವಿಧ ಕಲಾವಿದರನ್ನು ಹಾಗೂ ಶಿಲ್ಪ ಕಲಾಕುಟೀರದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಮಕೃಷ್ಣಾಶ್ರಮದ ಬುದ್ಧಿ ಯೋಗಾನಂದಜೀ ಮಹಾರಾಜ್, ಗುರುದೇವಚರಣಾನಂದಜೀ, ಸಾವಿತ್ರೆಮ್ಮ ಸೊಲಬಕ್ಕನವರ, ಕೊಟ್ರೇಶ ಮಾಸ್ತರ ಬೆಳಗಲಿ, ಬಸಮ್ಮ ನಿಂಗಪ್ಪನವರ, ಬಾಬುರಾವ್ ನಡೋಣಿ, ರಾಜಹರ್ಷ ಸೊಲಬಕ್ಕನವರ, ಜಯಶ್ರೀ ಸೊಲಬಕ್ಕನವರ, ಆಶಾರಾಣಿ ನಡೋಣಿ, ಶಂಕರ ಅರ್ಕಸಾಲಿ, ಶರೀಫ ಮಾಕಪ್ಪನವರ, ಮುಂಜುನಾಥ ಮಣ್ಣಣ್ಣವರ ಸೇರಿದಂತೆ ಶಿಲ್ಪ ಕಲಾ ಕುಟೀರದ ಕಲಾವಿದರು ವಿವಿಧ ಹುಲಸೋಗಿ, ಮುಗಳಿ, ಕಬನೂರ ಗ್ರಾಮಸ್ಥರು ಉಪಸ್ಥಿತರಿದ್ದರು. ಸಾಹಿತಿ ಗೂಳಪ್ಪ ಅರಳೀಕಟ್ಟಿ ಸ್ವಾಗತಿಸಿದರು, ಪ್ರೋ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು