ಸೃಜನಾ ರಂಗಮಂದಿರದಲ್ಲಿ ಜರುಗುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಡಾಽಽ ಸಿದ್ದಲಿಂಗಯ್ಯ ಪ್ರಶಸ್ತಿಯ ಗರಿ
ಸೃಜನಾ ರಂಗಮಂದಿರದಲ್ಲಿ ಜರುಗುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಡಾಽಽ ಸಿದ್ದಲಿಂಗಯ್ಯ ಪ್ರಶಸ್ತಿಯ ಗರಿ
ಮುದ್ದೇಬಿಹಾಳ 22 : ಇಲ್ಲಿನ ಪಟ್ಟಣದ ದಲಿತ ಸಾಹಿತಗಳಾದ ಶಿವಪುತ್ರ ಅಜಮನಿ ಇವರಿಗೆ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು (ರ)ಬೆಂಗಳೂರು. ಕನ್ನಡ ರಾಜ್ಯೋತ್ಸವ ನುಡಿ ಸಂಭ್ರಮ 2024 ರಾಜ್ಯ ಮಟ್ಟದ ಕವೀಪೀಠ ಮಹಾಸಮ್ಮೇಳನದ ವೇದಿಕೆಯಲ್ಲಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿದ್ದು ಶಿವಪುತ್ರ ಅಜಮನಿ ಇವರು ಬರೆದ ಅವರ ಆತ್ಮಕಥೆ “ಹೊಲಗೇರಿಯಿಂದ ಹೊರದೇಶಕ್ಕ” ಕೃತಿಗೆ ನಾಡಿನ ಹೆಸರಾಂತ ಬಂಡಾಯ ಸಾಹಿತಿಗಳಾದ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ಪ್ರಕಟಿಸಿದ್ದು ಇದೇ ರವಿವಾರ ದಿನಾಂಕ: 24-11-2024 ರಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಜರುಗುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ.
ಶಿವಪುತ್ರ ಅಜಮನಿಯವರು ಹಲವು ಕವನ ಸಂಕಲನ, ಹನಿಗವನ ಸಂಕಲನ, ಕಥಾ ಸಂಕಲನ, ತಮ್ಮ ಆತ್ಮಕಥೇಯನ್ನು ಬರೆದು ಸಾಹಿತ್ಯದ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡವರು. ಹಲವು ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿ ಅಭಿಯನಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ ಅಜಮನಿ ಹಲವು ಭಜನಾ ಧ್ವನಿಸುರುಳೀಗಳಿಗೆ ಸಾಹಿತ್ಯ ಒದಗಿಸಿ ಭಜನಾ ಕಲಾವಿದರೊಂದಿಗೆ ಗುರುತಿಸಿಕೊಂಡವರು. ಸಾಗರದಾಚೆ ವಿದೇಶದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕನ್ನಡದ ಕಂಪನ್ನು ಪಸರಿಸಿ ಬಂದವರು. ಅವರ ಸಾಧನೆಗೆ ಅಖಿಲಭಾರತ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ ನ್ಯಾಶನಲ್ ಫೆಲೋಶಿಪ್ ಅವಾರ್ಡ್, ದಿ.ಬುದ್ಧಿಷ್ಟ ಸೋಸಾಯಿಟಿ ಆಫ್ ಇಂಡಿಯಾ ಇವರಿಂದ ರಾಜ್ಯ ಮಟ್ಟದ ಅಂಬೇಡ್ಕರ್ ರತ್ನ ಪ್ರಶಸ್ತಿ, 2021ರಲ್ಲಿ ವಿಜಯಪುರ ಜಿಲ್ಲಾ ಆಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅನೇಕ ಸಂಘಸಂಸ್ಥೆಗಳಿಂದ ಹಲವು ಪ್ರಶಸ್ತಿಗಳೀಗೆ ಭಾಜನರಾದ ಶಿವಪುತ್ರ ಅಜಮನಿ ಇವರಿಗೆ ಡಾ. ಸಿದ್ಧಲಿಂಗಯ್ಯ ಪ್ರಶಶ್ತಿ ಲಭಿಸಿರುವದಕ್ಕೆ ಮುದ್ದೇಬಿಹಾಳದ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು, ಜನ ಪ್ರತಿನಿಧಿಗಳು, ಹರ್ಷವ್ಯಕ್ತಪಡಿಸಿದ್ದಾರೆ.