ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಡಾ. ಅಂಬೇಡ್ಕರ್ ಆಚರಣೆ
ರಾಣಿಬೆನ್ನೂರ 15: ಜಾತಿ ವಿನಾಶಕ್ಕಾಗಿ ಹೋರಾಟ ನಡೆಸಿದಾಗ ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾದರೂ ಧೃತಿಗೆಡದೆ ನಿರಂತರ ಹೋರಾಟ ನಡೆಸಿ ದೇಶದ ಪ್ರತಿಯೊಬ್ಬರಿಗೂ ಘನತೆಯ ಬದುಕನ್ನು ನೀಡಿ ಶೋಷಣೆ ಮುಕ್ತ ಸಮಾಜಕ್ಕೆ ದಾರಿ ತೋರಿಸಿದವರು ಡಾ. ಬಿ.ಆರ್. ಅಂಬೇಡ್ಕರ್‌ವರು ಎಂದು ಕಸಾಪ ಗ್ರಾಮ ಘಟಕ ಅಧ್ಯಕ್ಷ ಮಾರುತಿ ತಳವಾರ ಹೇಳಿದರು.
ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಸ್‌ಗ್ರಾಮ ಘಟಕದ ವತಿಯಿಂದ ಏರಿ್ಡಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ಮಂದ ಬೆಳಕಿನಲ್ಲಿದ್ದ ಅಸಂಖ್ಯಾತ ನೊಂದ ಜನರಿಗೆ ಸಮಾನತೆಯ ಬೆಳಕು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ನಿಡಿದ ಕೊಡುಗೆ ಅಪಾರವಾದದ್ದು. ಅವರ ತತ್ವ ಆದರ್ಶಗಳನ್ನ ನೆನೆದು ಸ್ವತಃ ಪಾಲಿಸಿ ನಿಜವಾದ ಗೌರವ ಸಲ್ಲಸಿಸೋಣ ಎಂದರು.
ಮುಖಂಡ ಗುಡ್ಡಪ್ಪ ಮಡಿವಾಳರ ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಸಾಂವಿಧಾನಿಕವಾಗಿ ಸಿಗಬೇಕಾದ ಹಕ್ಕು ಮತ್ತು ಸವಲತ್ತುಗಳನ್ನ ಸಮಾಜದ ಕಟ್ಟ ಕಡೆಯ ಜನರಿಗೂ ದಕ್ಕಿಸುವಲ್ಲಿ ಅಂಬೇಡ್ಕರ್ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು. ಅವರ ರಾಜಿ ರಹಿತ ಹೋರಾಟ ಮೌಲ್ಯಯುತ ಬದುಕನ್ನ ನಾವೆಲ್ಲ ಸದಾ ಸ್ಮರಿಸಿಬೇಕು, ಇಷ್ಟೆಲ್ಲ ಅನುಕೂಲಗಳನ್ನ ರಚನಾತ್ಮಕವಾಗಿ ಸಾಂವಿದಾನಿಕ ನೆಲೆಗಟ್ಟಿನಲ್ಲಿ ಪ್ರತಿಷ್ಠಾಪಿಸಿದವರು ಎಂದರು.
ನಾಗರಾಜ್ ನಾಯ್ಕರ. ಅಮೀತ ಭಾರ್ಕಿ. ಅನೀಲ ಪೂಜಾರ. ಲಕ್ಷ್ಮಣ್ ತಳವಾರ. ಪ್ರದೀಪ್ ಕೋಟಿಮಠ. ರೋಹಿತ್ ನಾಯ್ಕರ. ಕೀರಣ ಬೋವಿ. ಪ್ರಜ್ವಲ್ ತಳವಾರ ಮುನ್ನಾ ನಧಾಪ್. ಬಸವರಾಜ ನಾಯ್ಕರ ಮತ್ತು ವಿಧ್ಯಾರ್ಥಿಗಳು ಇದ್ದರು.