ಸೌಂದತ್ತಿ

ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿಗೆ ಮಾದರಿ: ಎಸ್ಪಿಬಿ ಮಹೇಶ

ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿಗೆ ಮಾದರಿ: ಎಸ್ಪಿಬಿ ಮಹೇಶ

ಲೋಕದರ್ಶನ ವರದಿ

ಉಗರಗೋಳ 15:  ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಒದಗಿಸುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ. ಅದರ ಆಶಯಗಳನ್ನು ಎಲ್ಲರೂ ಪಾಲಿಸಬೇಕು ಎಂದು ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಹೇಳಿದರು.

ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದರು.  

ದೇಶದ ಪ್ರತಿಯೋಬ್ಬ ನಾಗರಿಕರಿಗೆ ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆ, ರಾಜಕೀಯ ಸಮಾನತೆ ದೊರಕಲಿ ಎಂಬುದಕ್ಕೆ ಸಂವಿದಾನ ಜಾರಿಗೆ ತಂದರು ಎಂದರು.

ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಾಯ್ ವಾಯ್ ಕಾಳಪ್ಪನವರ, ರತ್ನಾ ಹೂಲಿ, ರಾಜೇಶ್ವರಿ ಚಂದರಗಿ, ಅಭಿಯಂತರ ಎ ವ್ಹಿ ಮೂಳ್ಳೂರ, ಎಸ್ ಎಲ್ ಯಲಿಗಾರ, ಆರ್ ಎಚ್ ಸವದತ್ತಿ, ಎಮ್ ಪಿ ದ್ಯಾಮನಗೌಡ್ರ, ವ್ಹಿ ಪಿ ಸೊನ್ನದ, ಸದಾನಂದ ಈಟಿ, ಎಎಸ್ಆಯ್ ಎಸ್ ಆರ್ ಗಿರಿಯಾಲ, ಪಿ ಎಫ್ ಗೋವನಕೊಪ್ಪ, ಜೆ ಎಮ್ ರೇವಣ್ಣವರ, ಎಸ್ ಎ ಪಂಪನವರ, ವ್ಹಿ ಎಮ್ ಮೋಖಾಶಿ, ಮಂಜು ಪವಾರ, ಎಸ್ ಎಸ್ ನೇಸರಗಿ, ಗನಪತಿಗೌಡ ಚನ್ನಪ್ಪಗೌಡ್ರ, ಭಿಮಣ್ಣಾ ಭಾರ್ಕಿ , ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು 

ಸುದ್ದಿ ಓದಿ