ಕಥೆ ಮತ್ತು ವಿಶೇಷ ಲೇಖನಗಳು

ಕಳ್ಳತನ ಬೇಡ ಪ್ರಾಮಾಣಿಕತೆ ಬಿಡಬೇಡ

ಕಳ್ಳತನ ಬೇಡ ಪ್ರಾಮಾಣಿಕತೆ ಬಿಡಬೇಡ

-ಡಾ. ಹೇಮಾವತಿ ಸೊನ್ನೊಳ್ಳಿ , ಬೆಳಗಾವಿ 

 ದಾಸಪ್ಪನವರ ಗಂಡು ಮಕ್ಕಳಿಬ್ಬರೂ ವಿದೇಶದಲ್ಲಿದ್ದರು. ಹೆಂಡತಿಗೆ ಮೇಲಿಂದ ಮೇಲೆ ಅನಾರೋಗ್ಯದಿಂದ ಆರಾಮವಿರುತ್ತಿರಲಿಲ್ಲ ಆದ್ದರಿಂದ ಮನೆಯಲ್ಲಿ ಅಡುಗೆ ಹಾಗೂ ಇನ್ನುಳಿದ ಕೆಲಸ ಮಾಡಲಿಕ್ಕೆ ಸುಶೀಲಾ ಎಂಬ ಮಹಿಳೆಯನ್ನು ಹಾಗೂ ಅಡುಗೆಯನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದಳು. ಹೀಗಾಗಿ ದಾಸಪ್ಪನವರು ಹಾಗೂ ಅವರ ಹೆಂಡತಿ ಅವಳನ್ನು ತುಂಬಾ ಪ್ರೀತಿ ಹಾಗೂ ವಿಶ್ವಾಸದಿಂದ ಕಾಣುತ್ತಿದ್ದರು. ಒಂದು ದಿನ ದಾಸಪ್ಪನವರು ಐದು ಸಾವಿರ ರೂಪಾಯಿಗಳನ್ನು ಬ್ಯಾಂಕಿನಿಂದ ತಂದು ತಮ್ಮ ಪ್ಯಾಂಟಿನ ಜೇಬಿನಲ್ಲಿ ಇಟ್ಟಿದ್ದರು ಯಾವೂದೋ ಸಾಮಾನು ತರಲು ಹಣ ಬೇಕಾದ್ದರಿಂದ ಜೇಬಿಗೆ ಕೈ ಹಾಕುತ್ತಾರೆ  ಅಲ್ಲಿ ಅವರು ತಂದ ಹಣವೇ ಇರಲಿಲ್ಲ ಅವರಿಗೆ ಗಾಬರಿಯಾಯಿತು ಜೇಬಿನಲ್ಲೇ ಹಣ ಇಟ್ಟ ಬಗ್ಗೆ ಅವರ ಮನಕ್ಕೆ ದೃಢವಿದ್ದರೂ ಕೂಡಾ ಮನೆಯಲ್ಲಿ ಬೇರೆ ಬೇರೆ ಕಡೆ ಹುಡುಕಾಡಿದರು.  ಹಣ ಸಿಗಲೇ ಇಲ್ಲಾ. ಸುಶೀಲಾಳೆ ರೂಮಿನ ಕಸ ಗುಡಿಸುವಾಗ ಐದು ಸಾವಿರ ರೂಪಾಯಿಗಳನ್ನು ಕದ್ದು ಬಚ್ಚಿಟ್ಟುಕೊಂಡಿದ್ದಳು. ದಾಸಪ್ಪನವರು ಸುಶೀಲಾಳನ್ನು ಇಲ್ಲಿಯ ಹಣ ಸಿಗವಲ್ಲದು ಸ್ವಲ್ಪ ನೋಡಮ್ಮಾ ಎಂದಿದ್ದಕ್ಕೆ ಸಿಟ್ಟಿನಿಂದ ನಾ ತಗೊಂಡೇನ  ಸಿಗವಲ್ಲಿದು ಸ್ವಲ್ಪ ನೋಡಮ್ಮಾ ಎಂದಿದ್ದಕ್ಕೆ ಸಿಟ್ಟಿನಿಂದ ನಾ ತಗೊಂಡೇನ ಎನ್ರಿ ನಾ ಎನ ಕಳ್ಳಿ ಎನ್ನರೀ ಅಂತ ಒದರಾಡಿ ನಾ ಎನ ಕೆಲಸಕ್ಕ ಬರುದಿಲ್ಲ ನೋಡ್ರಿ ಅಂತಾ ಹೋಗೆ ಬಿಟ್ಟಳೂ ದಾಸಪ್ಪನವರು ಸಮಾಧಾನ ವ್ಯಕ್ತಿ. ಹೋದದ್ದು ಹೋಯ್ತು ಅಂತಾ ಸುಮ್ಮನಾದರು ಕೆಲಸದವರು ಒಮೊಮ್ಮೆ ಮಾಲಿಕರ ಮನೆಯಲ್ಲಿಯ ಬಂಗಾರದ ಆಭರಣಗಳನ್ನು ಕದ್ದುಕೊಂಡು ಹೋಗಿ ಬಿಡುತ್ತಾರೆ. 

ನಂದೀಶ ಹಳ್ಳಿಯಲ್ಲಿ ಸಣ್ಣ ಬೀಡಾ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದ. ಸನ್ನ ಮನೆಯೊಂದಿತ್ತು.   ಮಡದಿ ಮತ್ತು  ಇಬ್ಬರು ಮಕ್ಕಳೊಂದಿಗೆ ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದ. ವಾರಕ್ಕೊಮ್ಮೆ ಶಹರಕ್ಕೆ ಹೋಗಿ ಮಾಲ ಖರೀದಿ ಮಾಡಿ ಬರುತ್ತಿದ್ದ ಹೀಗೆ ಒಂದು ವಾರ ಖರೀದಿಗೊಂದು ಹತ್ತು ಸಾವಿರ ರೂಪಾಯಿನಲ್ಲಿ ಕಿಸೆಯಲ್ಲಿ ಜೋಪಾನವಾಗಿಟ್ಟುಕೊಂಡು ಸಿಟಿ ಬಸ್ನಲ್ಲಿ ಜನದಟ್ಟನೆ ಬಹಳ ಇದ್ದುದರಿಂದ ನಿಂತುಕೊಂಡೇ ಹೊರಟಿದ್ದ ಆ ಸಂದರ್ಭದಲ್ಲಿ ಕಳ್ಳರು ಅವನ ಕಿಸೆಯಲ್ಲಿದ್ದ ಹತ್ತು ಸಾವಿರ ರೂಪಾಯಿಗಳನ್ನು ತಮ್ಮ ಕೈಚಳಕದಿಂದ ಕದ್ದು ಪರಾರಿಯಾಗಿದ್ದರು ಆ ಮೇಲೆ ನಂದೀಶನ ಅರಿವಿಗೆ ಬಂದಾಗ ಕಂಡಕ್ಟರ್ಗೆ ಹಣ ಹೋದ ಬಗ್ಗೆ ತಿಳಿಸಿದ. ಕಂಡಕ್ಟರ್ ಯಾರಾದರೂ ತೆಗೆದುಕೊಂಡಿದ್ದರೆ ಕೊಡಿ ಕೊಡಿ ಎಂದು ಹೇಳಿದರು. ಅದೇನೂ ಉಪಯೋಗವಾಗಲಿಲ್ಲ ಕೇಸು ಗೀಸು ಎಲ್ಲಿಯ ಉಸಾಬರಿ ಎಂದು ಖಾಲಿ ಮನೆಗೆ ಮರಳಿದ ಹಣ ಹೋದ ಬಗ್ಗೆ ಹೆಂಡತಿಗೆ ಹೇಳಿದ ಇಬ್ಬರೂ ಕಣ್ಣೀರ ಸುರಿಸಿ ಹಳಹಳ ಮಾಡಿಕೊಂಡರು ಹೀಗೆ ಏಷ್ಟೋ ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳು ಹಣ ಹಾಗೂ ಒಡವೆಗಳನ್ನು ಕಳೆದುಕೊಂಡು ಮರಮರನೆ ಮರುಗುತ್ತಾರೆ.

ಕಾವೇರಿ ಹಾಗೂ ಸುಮಾ ಮುಂಜಾನೆ ವಾಕಿಂಗಗೆ ಹೋದಾಗ ಬೈಕ್ ಮೇಲಿಂದ ಬಂದ ಇಬ್ಬರು ಕಾವೇರಿಯ ಕೊರಳಿನಲ್ಲಿಯ ಮೂರು ತೊಲೆಯ ತಾಳಿಯನ್ನು ಕಿತ್ತುಕೊಂಡು ಹೋದರು ಹೆಣ್ಣು ಮಕ್ಕಳ ಕೊರಳಿನಲ್ಲಿಯ ಬಂಗಾರದ ಆಭರಣಗಳನ್ನು ಎಲ್ಲೆಂದರಲ್ಲಿ ಕದಿಯುತ್ತಲೇ ಇರುತ್ತಾರೆ. ಸೋಮೇಶ ಹಾಗೂ ಅವನ ಪತ್ನಿ ಮನೆಗೆ ಬೀಗ ಹಾಕಿ ಎರಡು ದಿನ ಕಾರ್ಯನಿಮಿತ್ತ ಪರ ಊರಿಗೆ ಹೋಗಿದ್ದರು. ಈ ಸಂದರ್ಭವನ್ನೇ ಬಳಿಸಿದ ಕಳ್ಳರು ರಾತ್ರಿ ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರ, ಬೆಳ್ಳಿ, ಹಣ ಎಲ್ಲವನ್ನೂ ಕದ್ದುಕೊಂಡು ಹೋಗಿದ್ದರು. ಬಂದ ಮೇಲೆ ನೋಡ್ತಾರೆ ಮನೆಯಲ್ಲಾ ಬಳಿದುಕೊಂಡು ಹೋಗಿದ್ದಾರೆ ಸೋಮೇಶನ ಹೆಂಡತಿಯ ಶೋಕ ಹೇಳತೀರದಾಗಿತ್ತು. ಸೋಮೇಶ ಮನದಲ್ಲೇ ನೊಂದುಕೊಳ್ಳುತ್ತಿದ್ದ ಹೋದ ಬೆಲೆಯುಳ್ಳ ವಸ್ತುಗಳು ಮರಳಿ ಸಿಗಲೇ ಇಲ್ಲಾ. ಬ್ಯಾಂಕಿನಲ್ಲಿ ಹಣ ತುಂಬಲು ಅಥವಾ ಬ್ಯಾಂಕಿಗೆ ಹಣ ತೆಗೆದುಕೊಂಡು ಬಂದ ಬ್ಯಾಗ್ನಲ್ಲಿದ್ದ ಹಣವನ್ನೂ ಕೂಡಾ ಕಳ್ಳರು ಅತೀ ಚಾಕಚಕ್ಯತೆಯಿಂದ ಎಗರಿಸಿ ಬಿಡುತ್ತಾರೆ. ಬೈಕ್, ಕಾರ್, ಟ್ರಕ್ ಹೀಗೆ ವಾಹನಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹೊಡೆದುಕೊಂಡು ಹೆದರಿಸಿ ಬೆದರಿಸಿ ಕೊಂಡು ಇದ್ದದ್ದನ್ನೇಲ್ಲಾ ದೊಚಿಕೊಂಡು ಮಾಯವಾಗುತ್ತಾರೆ. ವಸ್ತುಗಳನ್ನು ಕಳೆದುಕೊಂಡವರ ರೋದನೆ ಅರಣ್ಯರೋದನವಾಗುತ್ತದೆ. ಜಾತ್ರೆ, ಸಂತೆ ಸಮಾವೇಶ ಹೀಗೆ ಜನದಟ್ಟನೆಯಿದ್ದ ಯಾವುದೇ ಸ್ಥಳಗಳಲ್ಲಿ ಕಳ್ಳರು ಕಳ್ಳತನ ಮಾಡುತ್ತಲೇ ಇರುತ್ತಾರೆ ಬಸ್ ನಿಲ್ದಾಣಗಳಲ್ಲಿಂತೂ ಕಳ್ಳತನ ನಿರಂತರ ನಡೆದೇ ಇರುತ್ತದೆ. ಎಷ್ಟೇ ಜಾಗರೂಕತೆಯ ಕ್ರಮಗಳನ್ನು ಕೈಕೊಂಡರೂ ಕೂಡಾ ಕಳ್ಳರ ಬೆಲೆಬಾಳುವ ವಸ್ತುಗಳನ್ನು ಎಗರಿಸುತ್ತಿರುತ್ತಾರೆ. ಮೊಬೈಲ್ಗಳ ಕಳ್ಳತನವಂತೂ ಸವರ್ೇ ಸಾಮಾನ್ಯವಾಗಿದೆ.

ಇದೇಕೆ ಹೀಗೆ ಅಂತಾ? ಕಳ್ಳತನ ಮಾಡುವುದು ಕೆಟ್ಟ ಕೃತ್ಯ ಈ ಕೃತ್ಯ ಅತ್ಯಂತ ಹೀನವಾದುದು ಹಾಗೂ ಅಕ್ಷಮ್ಯವಾದುದು. ಕಳ್ಳತನ ಮಾಡುವುದು ಅಪರಾಧ ಇದು ಕಾಯ್ದೆಯ ವಿರುದ್ಧ ಪರರ ವಸ್ತುಗಳನ್ನು ಯಾವುದೇ  ಇರಲಿ ಅವುಗಳ ಮೇಲೆ ನಮ್ಮ ಹಕ್ಕು ಇರುವುದಿಲ್ಲ ಎಂಬುದನ್ನು ನಾವು ಅರಿಯಬೇಕು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಯಾರೂ ಪರರ ಯಾವ ವಸ್ತುಗಳ ಮುಟ್ಟಬಾರದು. ಇದು ಮಾನವೀಯತೆ ಇದು ನೀತಿ ಪರರ ವಸ್ತುಗಳನ್ನು ಮೇಲೆ ಕಣ್ಣ್ಣು ಹಾಕುವುದು ಮಹಾಪಾಪದ ಕೆಲಸ ನಾವೆಲ್ಲರೂ ಪರಿಶ್ರಮದಿಂದ ದುಡಿದು ನಮ್ಮ ಕೈಲಿ ಎಷ್ಟಾಗುತ್ತೋ ಅಷ್ಟನ್ನುಗಳಿಸಿ ಆ ಗಳಿಕೆಯಲ್ಲಿಯೇ ಜೀವನವನ್ನು ಸಾಗಿಸುವುದು ಮೌಲ್ಯಯತವಾದ್ದು. ವಸ್ತುಗಳನ್ನು ಕೊಂಡವರ ದುಃಖ, ಅಲಾಪ, ಮರುಗವಿಕೆ, ಹಳಹಳಿಯಂಥ ಶಾಪ  ಕದ್ದವರಿಗೆ ತಟ್ಟದೇ ಇರುವುದಿಲ್ಲ. ಹಾಲಿನದು ಹಾಲಿಗೆ ನೀರಿನದು ನೀರಿಗೆ ಎಂಬಂತೆ ನಮ್ಮ ಕಷ್ಟದ ಗಳಿಕೆಯ ಫಲವಷ್ಟೇ ನಮಗೆ ದಕ್ಕುತ್ತದೆ ಕಳಬೇಡ ಎಂಬುದು ಶರಣರ ಸೂಳ್ನೂಡಿ ಇದಕ್ಕೆ ನಾವು ತಲೆಬಾಗಲೇಬೇಕು ಅತ್ಯಂತ ಪ್ರಾಮಾಣಿಕತೆಯಿಂದ ಬಾಳುವೆ ಮಾಡಿ. ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಕಳೆದುಕೊಂಡವರ ವಸ್ತುಗಳನ್ನು ಸಿಕ್ಕರೆ ನಿಷ್ಠೆಯಿಂದ  ಮರಳಿಸಿ ಕೃತಾರ್ಥರಾಗಿ ಕಳ್ಳತನ ಬೇಡ ಪ್ರಾಮಾಣಿಕತೆ ಬಿಡಬೇಡ ಎಂಬುದೇ ನನ್ನ ಮನದಾಶೆ.


ಸುದ್ದಿ ಓದಿ