ಹಸಿರು ಸೇನಾ ಕರ್ನಾಟಕ ರೈತ ಸಂಘದ ಜಿಲ್ಲಾದ್ಯಕ್ಷ: ವರುಣಗೌಡ ಪಾಟೀಲ
ಹಸಿರು ಸೇನಾ ಕರ್ನಾಟಕ ರೈತ ಸಂಘದ ಜಿಲ್ಲಾದ್ಯಕ್ಷ: ವರುಣಗೌಡ ಪಾಟೀಲ
ಶಿಗ್ಗಾವಿ : ಬಸವರಾಜ ಬೊಮ್ಮಾಯಿ ಸಿಎಂ ಆದಕೂಡಲೆ ರೈತ ವಿದ್ಯಾ ನಿಧಿ ಯೋಜನೆ ಘೋಷಣೆ ಮಾಡಿದರು ಅದು ಅವರ ದಕ್ಷತೆ ಎಂದು ಹಸಿರು ಸೇನಾ ಕರ್ನಾಟಕ ರೈತ ಸಂಘದ ಜಿಲ್ಲಾದ್ಯಕ್ಷ ವರುಣಗೌಡ ಪಾಟೀಲ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 15 ವರ್ಷದಲ್ಲಿ ರಾಜ್ಯದ ಯಾವುದಾದರೂ ಮಾದರಿ ಕ್ಷೇತ್ರವಿದ್ದರೆ ಅದು ಶಿಗ್ಗಾವಿ-ಸವಣೂರ ಕ್ಷೇತ್ರವೆಂದು ಹೇಳುತ್ತೇನೆ, ರೈತರಪರವಾಗಿ ಕೇಂದ್ರದಲ್ಲಿದ್ದ ಕಿಸಾನ ಸನ್ಮಾನ ಯೋಜನೆಯಿಂದ 6 ಸಾವಿರ ರೂಗಳು ಕೊಡಮಾಡಿದ್ದು ಅದಕ್ಕೆ ಆಗಿನ ಸಿ.ಎಂ. ಬಿ.ಎಸ್.ಯಡಿಯೂರ್ಪ ಅವರು ನಾಲ್ಕು ಸಾವಿರ ರೂಗಳನ್ನು ಜೋಡನೆ ಮಾಡಿ 10 ಸಾವಿರ ರೂಗಳನ್ನು ಯೋಜನೆಯನ್ನು ಮಾಡಿದರು, ರೈತರ ಮಕ್ಕಳು ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವ ಉದ್ದೇಶದಿಂದ ಯೋಜನೆಯನ್ನು ಮಾಡಿದ್ದನ್ನು ಇಗಿರುವ ಸರಕಾರ ರೈತ ವಿರೋಧಿ ಸರಕಾರವಾಗಿದ್ದು ಎರಡು ಯೋಜನೆಗಳನ್ನು ವಾಪಾಸ ತೆಗೆದುಕೊಂಡರು, ಇಗಿರುವ ಸರಕಾರಕ್ಕೆ ಕೇವಲ ಅಧಿಕಾರದ ಅವಶ್ಯಕತೆ ಇದೆ ಅಲ್ಲದೇ ತಾಲೂಕಿನ ಎಲ್ಲ ರೈತರು ಸಂಪೂರ್ಣವಾದ ಬೆಂಬಲವನ್ನು ಭರತ ಬೊಮ್ಮಾಯಿಯವರಿಗೆ ನೀಡುತ್ತಾರೆ ಅವರ ಆಯ್ಕೆ ಖಚಿತವೆಂದು ಹೇಳಿದರು.
ಈ ಸಂದರ್ಭದಲ್ಲಿ ವಿನಯ ಹೊಣ್ಣನವರ, ನಾಗರಾಜ ಕ್ಯಾಬಳ್ಳಿ, ರೈತ ಮಹಿಳಾ ಮುಖಂಡೆ ನಿರ್ಮಲಾ, ಸೇರಿದಂತೆ ರೈತರು ಇದ್ದರು.