ಗ್ರಾಮ ಪಂಚಾಯತ್ಗಳಿಗೆ ಕೃಷಿ ಪೌಷ್ಟಿಕ ಕೈತೋಟ ಬೆಳೆಯಲು ಸಸಿ ವಿತರಣೆ
ಸಿರುಗುಪ್ಪ 10: ಅಪೌಷ್ಟಿಕತೆಯುಳ್ಳ ಮಕ್ಕಳು ವಿರುದ್ಧರು ಗಭರ್ಿಣಿಯರಿಗೆ ಸ್ವತಹ ಮನೆಯಲ್ಲಿ ಪೌಷ್ಟಿಕತೆ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಮಹಿಳಾ ಸ್ವಸಹಾಯ ಗುಂಪಿನ ಅರ್ಹ ಫಲಾನುಭವಿಗಳಿಗೆ ಮನೆಯ ಅವರಣದಲ್ಲಿ ಹಣ್ಣು ಇತರೆ ಪೌಷ್ಟಿಕ ಗಿಡಮರಗಳನ್ನು ಬೆಳೆಯಲು ಕೃಷಿ ಪೌಷ್ಟಿಕ ತೋಟ ಬೆಳೆಸಲು ಸಹಾಯಧನ ನೀಡುತ್ತಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ ಹೇಳಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ತಾಲೂಕ ಪಂಚಾಯತ್ ಸಹಭಾಗಿತ್ವದಲ್ಲಿ ಎನ್ ಆರ್ ಎಲ್ ಎಮ್ ಯೋಜನೆಯಡಿ ಕೃಷಿ ಪೌಷ್ಟಿಕ ತೋಟ ಬೆಳೆಯಲು ನರೇಗಾ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ 14 ವಿಧದ ಸಸಿಗಳನ್ನು ವಿತರಿಸಿದರು.
ತಾಲೂಕಿನ 27 ಗ್ರಾಮ ಪಂಚಾಯತಿ ಯಲ್ಲಿನ 2622 ಸದಸ್ಯರಿಗೆ ತಲಾ 14 ಸಸಿಗಳಂತೆ ವಿತರಣೆಯ ಗುರಿಯನ್ನು ಹೊಂದಲಾಗಿದೆ ಈಗಾಗಲೇ 455 ಸದಸ್ಯರಿಗೆ ವಿತರಣೆಯ ಸಾಧನೆಯಾಗಿದೆ ಇನ್ನು 968 ಸದಸ್ಯರಿಗೆ ವಿತರಿಸಲು ತಯಾರಿ ನಡೆಯುತ್ತಿದೆ .ದೇಶನೂರು ತೋಟಗಾರಿಕೆಯಲ್ಲಿ ವಿನಾಯಕ ಸಂಜೀವಿನಿ ಸ್ವಾಸಹಾಯ ಸಂಘದ ಸದಸ್ಯರು ಬೆಳೆಸುತ್ತಿರುವ ನರ್ಸರಿ ತರಬೇತಿ ಕೇಂದ್ರದಿಂದ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದರು ತೋಟಗಾರಿಕೆ ಇಲಾಖೆಯ ಸಹಾಯಕ ಹಿರಿಯ ನಿರ್ದೇಶಕ ಮಹೇಶ್ ಅವರು ಮಾತನಾಡುತ್ತಾ ಮಹಿಳಾ ಸ್ವಾಸಹಾಯ ಗುಂಪಿನ ಸದಸ್ಯರು ತಮ್ಮ ಮನೆಯ ಹಿತ್ತಲಲ್ಲಿ ಅಥವಾ ಹೊಲಗದ್ದೆಗಳಲ್ಲಿ ಪೌಷ್ಟಿಕ ಕೃಷಿ ತೋಟ ಬೆಳೆಯಲು ಸಸಿಗಳನ್ನು ಪೋಷಣೆಗಾಗಿ ಸರ್ಕಾರದಿಂದ 4500 ರೂಪಾಯಿ ನೀಡಲಾಗುತ್ತಿದ್ದು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುವುದೆಂದು ಹೇಳಿದರು ತಾಲೂಕು ಪಂಚಾಯತ್ ಕಚೇರಿ ವ್ಯವಸ್ಥಾಪಕಿ ಸುಜಾತ, ತೋಟಗಾರಿಕೆ ಇಲಾಖೆ ಪಿ ಮಲ್ಲಿಕಾರ್ಜುನ, ಜಿಲ್ಲಾ ಸಾಕ್ಷರತಾ ಸಮಿತಿಯ ಸದಸ್ಯ ಅಬ್ದುಲ್ ನಬಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹನುಮನ ಗೌಡ ,ಕವಿತಾ, ವೀರಯ್ಯ ಸಿಬ್ಬಂದಿ ವರ್ಗದವರಿದ್ದರು