ಶಿಗ್ಗಾವ್

ಬಡವರಿಗೋಸ್ಕರ ಬೊಮ್ಮಾಯಿ ಒಂದಾದ್ರು ಕಾರ್ಯಕ್ರಮ ಮಾಡಿದ್ದಾರಾ..? ಡಿಕೆಶಿ

ಬಡವರಿಗೋಸ್ಕರ ಬೊಮ್ಮಾಯಿ ಒಂದಾದ್ರು ಕಾರ್ಯಕ್ರಮ ಮಾಡಿದ್ದಾರಾ..? ಡಿಕೆಶಿ

ಬಡವರಿಗೋಸ್ಕರ ಬೊಮ್ಮಾಯಿ ಒಂದಾದ್ರು ಕಾರ್ಯಕ್ರಮ ಮಾಡಿದ್ದಾರಾ..? ಡಿಕೆಶಿ

ಶಿಗ್ಗಾವಿ 07: ನನ್ನ ಮುಖಂಡತ್ವದಲ್ಲಿ, ಸಿದ್ದರಾಮಯ್ಯ ನೇತೃತ್ವದಲ್ಲಿ 136 ಸೀಟು ಬಂತು 

ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸೀಟು 66 ಕ್ಕೆ ಕುಸಿಯಿತು ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗವಾಡಿದರು.  

    ಪಟ್ಟಣದಲ್ಲಿ  ಯಾಸಿರ್ ಖಾನ್ ಪಠಾಣ್ ಪರ ಪ್ರಚಾರ  ಚನ್ನಮ್ಮ ವೃತ್ತದಿಂದ ಆರಂಭಗೊಂಡ ರೋಡ್ ಶೋ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು ಸಿಎಂ ಆಗಿದ್ದವರ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಲೀಡ್ ಬಂತು, ಬಡವರಿಗೋಸ್ಕರ ಬೊಮ್ಮಾಯಿ ಒಂದಾದ್ರು ಕಾರ್ಯಕ್ರಮ ಮಾಡಿದ್ದಾರಾ..? ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆ. ಮಗನಿಗೆ ಹೆಣ್ಣು ನೋಡೋಕೆ ಹೋಗಿ ತಾವೇ ಮದುವೆ ಅದ್ರಂತೆ ಹಾಗಿದೆ ಬಸವರಾಜ್ ಬೊಮ್ಮಾಯಿ ವರ್ತನೆ, ಮಹದಾಯಿ ಯೋಜನೆ ಆಗೋಯ್ತು ಅಂತ ಬೊಮ್ಮಾಯಿ ಹೇಳಿದ್ರು ಆದ್ರೆ ಇದುವರೆಗೂ ಯೋಜನೆ ಮೇಲೆದ್ದಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುತ್ತೇವೆ ಯಾಸಿರ್‌ಖಾನ ಪಠಾಣ್‌ರನ್ನು ಗೆಲ್ಲಿಸಿ ಎಂದರು. ಭಾಕ್ಸ ಸುದ್ದಿ : ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ಧಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಆದ್ದರಿಂದ ಬೊಮ್ಮಾಯಿಯವರ 17 ವರ್ಷದ ರಾಜಕಾರಣ  ಕೊನೆಯಾಗಬೇಕಿದೆ. 

     ಡಿ.ಕೆ.ಶಿವಕುಮಾರ ಉಪಮುಖ್ಯಮಂತ್ರಿ

ಭೋವಿ ಸಮಾಜದ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಪೂಜಾರರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡರು. ಸಚಿವ ಈಶ್ವರ ಖಂಡ್ರೆ, ಶಿವಾನಂದ್ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ನಯನಾ ಮೋಟಮ್ಮ, ಯೂಥ ಅಧ್ಯಕ್ಷ ಮಹ್ಮದ ನಲಪಾಡ, ಹೆಚ್‌.ಎಂ.ರೇವಣ್ಣಾ, ಸಾಧು ಕೋಕಿಲ, ಅಜ್ಜಂಪೀರ್ ಖಾದ್ರಿ, ಸೋಮಣ್ಣಾ ಬೇವಿನಮರದ, ಸಂಜೀವಕುಮಾರ ನೀರಲಗಿ, ಪ್ರೇಮಾ ಪಾಟೀಲ, ರಾಜು ಕುನ್ನೂರ, ನೂರಹ್ಮದ ಮಾಳಗಿ, ಮಂಜುನಾಥ ಮಣ್ಣಣ್ಣವರ, ಶಂಭುಲಿಂಗಪ್ಪ ಆಜೂರ, ಗೌಸಖಾನ ಮುನಶಿ, ಮಹಾಂತೇಶ ಸಾಲಿ, ಗುಡ್ಡಪ್ಪ ಜಲದಿ, ಅಬ್ದುಲಕರೀಂ ಮೊಗಲಲ್ಲಿ, ಮುನ್ನಾ ಲಕ್ಷ್ಮೇಶ್ವರ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ