ರಾಣೆಬೆನ್ನೂರ

ಲಿಂಗದಹಳ್ಳಿ ಹಿರೇಮಠದಲ್ಲಿ ಸ್ಪಟಿಕ ಈಶ್ವರ ಲಿಂಗ ಕಳ್ಳತನ: ಪತ್ತೆಗೆ ಭಕ್ತರ ಒತ್ತಾಯ

ಲಿಂಗದಹಳ್ಳಿ ಹಿರೇಮಠದಲ್ಲಿ ಸ್ಪಟಿಕ ಈಶ್ವರ ಲಿಂಗ ಕಳ್ಳತನ: ಪತ್ತೆಗೆ ಭಕ್ತರ ಒತ್ತಾಯ

ಲೋಕದರ್ಶನ ವರದಿ

ರಾಣೇಬೆನ್ನೂರು 09ರಂಭಾಪುರಿ ಶಾಖಾ ಪೀಠ ಲಿಂಗದಹಳ್ಳಿಯ ಹಿರೇಮಠದಲ್ಲಿ ನಿನ್ನೆ ತಡರಾತ್ರಿ ಕಳ್ಳರು 2 ಗೇಟುಗಳ ಬೀಗ ಮುರಿದು ಬಹುಬೆಲೆ ಬಾಳುವ ದೊಡ್ಡಗಾತ್ರದ ಸ್ಪಟಿಕ ಈಶ್ವರ ಲಿಂಗುವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದು ಭಕ್ತರಲ್ಲಿ ಆತಂಕವನ್ನುಂಟುಮಾಡಿದೆ ಎಂದು ಮಠದ ಭಕ್ತ, ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದ್ದಾರೆ.

     ಬಹು ಬಲೆ ಬಾಳುವ ಸ್ಪಟಿಕ ಈಶ್ವರ ಲಿಂಗುವನ್ನು ಮಠದ ಶ್ರೀಗಳಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾಕಷ್ಟು ಪರಿಶ್ರಮ ವಹಿಸಿ ಮಠದಲ್ಲಿ ಸ್ಥಾಪಿಸಿ ಶ್ರೀಮಠಕ್ಕೆ ಕಳಶಪ್ರಾಯವಾಗಿದ್ದರು. ಹೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತ ತಮ್ಮ ಇಡೀ ದುಡಿಮೆಯನ್ನೇಲ್ಲ ಮಠದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶ್ರೀಗಳು ನಿಜವಾದ ಕಾಯಕಯೋಗಿಗಳಾಗಿದ್ದಾರೆ. ದಶಕಗಳಿಂದ ಶ್ರೀಗಳು ಮಠದಲ್ಲಿ ಉಚಿತ ಸಾಮೂಹಿಕ ವಿವಾಹ, ವಿವಿಧ ಆಧ್ಯಾತ್ಮಿಕ, ಧಾಮರ್ಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಠದ ಕೀತರ್ಿಯನ್ನು ರಾಜ್ಯಾದ್ಯಂತ ಪಸರಿಸಲು ಕಾರಣಿಕರ್ತರಾಗಿದ್ದಾರಲ್ಲದೆ ತಮ್ಮ ಇಡೀ ಜೀವನವನ್ನು ಗಂಧದ ಕೊರಡಿನಂತೆ ಸವೆಸುತ್ತ ಸಮಾಜ ಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

     ಮೌನ ಅನುಷ್ಠಾನ, ಕಠೋರ  ತಪಸ್ಸು, ಧಾಮರ್ಿಕ ವಿಧಿವಿಧಾನ, ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಈ ನಾಡು ಕಂಡ ಕೆಲವೆ ಕೆಲವು ಶ್ರೇಷ್ಠ ಸ್ವಾಮೀಜಿಗಳಲ್ಲಿ ಅತ್ಯಂತ ಮೃದು, ಸೌಮ್ಯ ಸ್ವಭಾವದ ಶ್ರೀಗಳು ಇವರಾಗಿದ್ದಾರೆ. ಇವರ ಮನಸ್ಸಿಗೆ ಘಾಸಿಯಾಗುವಂತಹ ಯಾವುದೇ ಘಟನೆಗಳು ಘಟಿಸಿದರೂ ನಾವೆಲ್ಲ ಭಕ್ತರು ಸುಮ್ಮನೆ ಕೂಡಲು ಸಾಧ್ಯವಿಲ್ಲವೆಂದು ರವೀಂದ್ರಗೌಡ ಎಫ್. ಪಾಟೀಲರು ತಮ್ಮ ಅಂತರಾಳದ ಮಾತುಗಳನ್ನಾಡಿದರು.

     ಈ ಕಳ್ಳತನ ಪ್ರಕರಣ ಹಲಗೇರಿ ಠಾಣೆಯಲ್ಲಿ ದಾಖಲಾಗಿದ್ದು ಈಗಾಗಲೇ ಪೊಲೀಸ್ ಇಲಾಖೆ, ಶ್ವಾನದಳ, ಫಿಂಗರ್ ಪ್ರಿಂಟ್ ತಜ್ಞರನ್ನು ಮಠಕ್ಕೆ ಕರೆಯಿಸಿ ತನಿಖೆ ಮಾಡುತ್ತಿದೆ. 

     ಪೊಲೀಸರ ಮೇಲೆ ವಿಶ್ವಾಸ: ಕುರಿಕಳ್ಳರು, ದರೋಡೆಕೋರರು, ಬೈಕ್ ಕಳ್ಳರು, ಕೊಲೆಗಾರರನ್ನು ಬೇಧಿಸಿ ಅತ್ಯಂತ ಚಾಣಾಕ್ಷತನದಿಂದ ಕಳ್ಳರನ್ನು, ಕೊಲೆಗಾರರನ್ನು ಪತ್ತೆಹಚ್ಚಿದ ಕೀತರ್ಿ ನಮ್ಮ ಹಾವೇರಿ ಜಿಲ್ಲೆಯ ಪೊಲೀಸ್ ಇಲಾಖೆಯವರದ್ದಾಗಿದೆ. ಪೊಲೀಸ್ ಇಲಾಖೆ ಮನಸ್ಸು ಮಾಡಿದರೆ ಈ ಸ್ಪಟಿಕ ಲಿಂಗದ ಪತ್ತೆ ದೊಡ್ಡ ಮಾತೇನ್ನಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನಮಂತರಾಯರವರು ಆದಷ್ಟು ಬೇಗನೆ ಈ ಕಳ್ಳರನ್ನು ಪತ್ತೆಹಚ್ಚಿ ಸ್ಪಟಿಕ ಈಶ್ವರ ಲಿಂಗವನ್ನು ಮತ್ತೆ ಮಠದಲ್ಲಿ ಸ್ಥಾಪಿತವಾಗುವಂತೆ ಮಾಡಿ ನಾಡಿನಾದ್ಯಂತ ಆತಂಕಕ್ಕೋಳಗಾಗಿರುವ ಮತ್ತು ಮನಸ್ಸಿಗೆ ನೋವನ್ನುಂಟು ಮಾಡಿಕೊಂಡಿವ ಲಕ್ಷಾಂತರ ಭಕ್ತರ ಹೃದಯವನ್ನು ಪೊಲೀಸ್ ಇಲಾಖೆ ಗೆಲ್ಲಬೇಕು. ಶ್ರೀಗಳನ್ನು ಮತ್ತೆ ಹಸನ್ ಮುಖಿಗಳನ್ನಾಗಿ ಮಾಡಬೇಕೆಂದು ರೈತ ಮುಖಂಡ  ಮತ್ತು ಮಠದ ಭಕ್ತರಾದ ರವೀಂದ್ರಗೌಡ  ಪಾಟೀಲ, ಜಯಣ್ಣ ಮಾಗನೂರು, ದುರುಗಪ್ಪ ಮಾಗನೂರು, ಗುರುನಗೌಡ ಪಾಟೀಲ, ರುದ್ರಗೌಡ ಪಾಟೀಲ, ಬಸವನಗೌಡ ದೊಡ್ಡಗೌಡ್ರ, ಈರಣ್ಣ ಮಠದ, ವಾಸಣ್ಣ ಬಲ್ಲೂರು, ರಾಜಣ್ಣ ಎಚ್. ಹೂಲಿಹಳ್ಳಿ, ಹಾಲಪ್ಪ ಕೋಳೆರ, ಮಂಜಣ್ಣ ಬಾಕರ್ಿ, ಈರಣ್ಣ ಎಡಚಿ, ಹಾಲಪ್ಪ ಕೂಲಿ ಮುಂತಾದವರು ಎಸ್.ಪಿ.ಯವರಲ್ಲಿ ಒತ್ತಾಯಿಸಿದ್ದಾರೆ 

ಸುದ್ದಿ ಓದಿ