ರಾಣೆಬೆನ್ನೂರ

ದೇವಿಕಾ ಪ್ರೌಢ ಶಾಲೆ: ಶೇ.96ರಷ್ಟು ಫಲಿತಾಂಶ

ದೇವಿಕಾ ಪ್ರೌಢ  ಶಾಲೆ: ಶೇ.96ರಷ್ಟು ಫಲಿತಾಂಶ

ರಾಣೇಬೆನ್ನೂರು: ಮೇ 10 ಇಲ್ಲಿನ ಗಣೇಶ್ ನಗರದ, ವೆಂಕಟೇಶ್ವರ ವಿದ್ಯಾಸಂಸ್ಥೆಯ  ದೇವಿಕಾ ಫ್ರೌಢ ಶಾಲೆಯ ಎಸ್. ಎಸ್. ಎಲ್. ಸಿ.ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು,ಶೇ.96 ರಾಷ್ಟ್ರಾಗಿದೆ. ಪರೀಕ್ಷೆಗೆ ಒಟ್ಟು  170 ವಿದ್ಯಾರ್ಥಿಗಳು  ಹಾಜರಾಗಿದ್ದರು. ಅದರಲ್ಲಿ 58 ಡಿಸ್ಟಿಂಕ್ಷನಲ್ಲಿ ಹಾಗೂ 96 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ. ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾನಿಯಾ ಕೌಸರ್ ದೊಡ್ಡಮನಿ (608)  ಅಂಕಗಳಿಸಿ,ಪ್ರಥಮ ಸ್ಥಾನದಲ್ಲಿದ್ದಾಳೆ. ಸಂಜನಾ ಬಸವನಗ್ರೌಡ (605)   ಹಾಗೂ ಫರಿಯಾನಾಜ್ ಅತ್ತಾರ. (605)  ದಿತೀಯಾ ಸ್ಥಾನ ಮತ್ತು ರಜನಿ ವೆಂ. ಮಡಿವಾಳರ (601) ತೃತಿಯ ಸ್ಥಾನ ಪಡೆದಿದ್ದಾರೆ. ಎಂದಿನಂತೆ ತನ್ನ ಸಾಧನೆ ಮೆರೆದು ಶಾಲೆಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಚೇರ್ಮನ್ ಸಿ. ಆರ್.ಪಾಟೀಲ್, ಮುಖ್ಯೋಪಾಧ್ಯಾಯ ಮಾರ್ಷಲ್  ಗುಡಗೂರ, ಆಡಳಿತಾಧಿಕಾರಿ ವಿಜಯಾಪಾಟೀಲ್, ಸಿಇಓ ಗಣೇಶ್ ಓದುಗೌಡರ್,ದೇವಿಕಾ ಪಾಟೀಲ್ ಹಾಗೂ  ಶಿಕ್ಷಕರು ಸಿಬ್ಬಂದಿ ಹಾರ್ದಿಕವಾಗಿ ಅಭಿನಂದಿಸಿದ್ದಾರ 

ಸುದ್ದಿ ಓದಿ