ಸೌಂದತ್ತಿ

ದೇವಾಂಗ ಸಮಾಜದಿಂದ ಶಾಸಕ ವೈದ್ಯಗೆ ಸನ್ಮಾನ

ದೇವಾಂಗ ಸಮಾಜದಿಂದ ಶಾಸಕ ವೈದ್ಯಗೆ ಸನ್ಮಾನ

ಲೋಕದರ್ಶನ ವರದಿ

ಸವದತ್ತಿ 26: ಕಷ್ಟಕರವಾದಂತ ಜೀವನವನ್ನು ಸಾಗಿಸುತ್ತಿರುವ ನೇಕಾರ ಸಮಾಜವು ಎಲ್ಲ ಸಮಾಜಗಳಿಗೆ ಕೊಂಡಿಯಾಗಿ ತಮ್ಮ ಕಾಯಕವನ್ನು ನಿರ್ವಹಿಸುತ್ತಿದ್ದು, ಈ ಸಮುದಾಯಕ್ಕೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾನು ಸಂಪೂರ್ಣ ಸಹಕಾರ ನೀಡುವದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಗುರ್ಲಹೊಸೂರಿನ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದವರು ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ದೇವಾಂಗ ಸಮಾಜಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮ ಸಮುದಾಯ ಭವನವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ ಅವರು, ಸಮಾಜದ ಜನರಿಗೆ ಸರಕಾರದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ಆರ್.ಐ.ಶಿದ್ದಲಿಂಗಣ್ಣವರ ಮಾತನಾಡಿ, ಇಲ್ಲಿಯವರೆಗೆ ದೇವಾಂಗ ಸಮಾಜಕ್ಕೆ ಯಾವುದೆ ಸೌಲಭ್ಯತೆಗಳು ಇಲ್ಲದಾಗಿದ್ದು, ಶಾಸಕರು ನಮ್ಮ ಸಮಾಜಕ್ಕೆ ಒಂದು ಉತ್ತಮ ಸಮುದಾಯಭವನವನ್ನು ನಿರ್ಮಿಸಿಕೊಟ್ಟಲ್ಲಿ ನೇಕಾರ ಸಮಾಜದ ಜನರು ತಮ್ಮ ವಯಕ್ತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.

ಅನಂತ ಜವಳಿ ಮಾತನಾಡಿ, ಬೇರೆ ಬೇರೆ ತಾಲೂಕಿನಲ್ಲಿ ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನಗಳು ಉತ್ತಮ ಅಭಿವೃದ್ದಿಯಾಗಿದ್ದು, ಈ ಭಾಗದಲ್ಲಿ ಬನಶಂಕರಿ ದೇವಸ್ಥಾನದ ಅಭಿವೃದ್ದಿ ಇಲ್ಲದಾಗಿರುವುದು ವಿಷಾದನೀಯ ಎಂದರು. ನೂತನ ಶಾಸಕರು ನಮ್ಮ ಬೇಡಿಕೆಗಳನ್ನು ಈಡೇರಿಸಿ ಸಮಾಜಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಭುವನೇಶ್ವರ ಸಿದ್ದಲಿಂಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಭು ಪ್ರಭುನವರ, ರಾಜಶೇಖರ ಕಾರದಗಿ, ಗಂಗಾ ಪಟ್ಟಣಶೆಟ್ಟಿ, ಯಂಕಣ್ಣ ಯಕ್ಕುಂಡಿ, ಶಿವಾನಂದ ಪಟ್ಟಣಶೆಟ್ಟಿ, ಈರಪ್ಪ ಅಮಾಸಿ, ಮಹಾರಾಜಗೌಡ ಪಾಟೀಲ, ಮಲ್ಲಪ್ಪ ಕಡೇಮನೆ, ಗೋಪಾಲ ಪಡಿ, ಫಕ್ಕೀರಪ್ಪ ಸಿದ್ದಲಿಂಗಣ್ಣವರ, ಸಂಕಪ್ಪ ಬೋಪಳಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ