ಹಮಾಲರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ : ಧರಣಿ ಸತ್ಯಾಗ್ರಹ
ತಾಳಿಕೋಟೆ25: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರಿಗೆ ನಿವೇಶನ ಹಾಗೂ ಮನೆಗಳ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿ ಬಸವೇಶ್ವರ ಹಮಾಲರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರದ ಹೋರಾಟದಲ್ಲಿ ತಾಲೂಕಿನ ಕೊಣ್ಣೂರ ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೋಂಡು ಬೆಂಬಲ ವ್ಯಕ್ತಪಡಿಸಿದರು.
ಎಪಿಎಂಸಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಧರಣಿ ನಿರತ ಹಮಾಲರ ಬೇಡಿಕೆಗಳ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಸಿ.ಬಿ.ಅಸ್ಕಿ, ಹಮಾಲರು ಕೇಳುತ್ತಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಮನೆಗಳ ನಿರ್ಮಾಣ ಮಾಡಿ ಕೊಡಿ ಇಲ್ಲ, ಕಾಯ್ದಿರಿಸಿದ ನಿವೇಶನವನ್ನು ಹಮಾಲರ ಸಂಘಕ್ಕೆ ನೊಂದಾಯಿಸಿ ಕೊಡಬೇಕು. 30 ವರ್ಷಗಳಿಂದ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹಿತ ಯಾವ ಅಧಿಕಾರಿಗಳು ಬೇಟಿ ನೀಡಿಲ್ಲ. ಇದು ತಾಲೂಕಾಡಳಿತ ಇದೆಯೋ ಇಲ್ಲವಾ ಅನ್ನುವ ಪ್ರಶ್ನೆ ಮೂಡುತ್ತದೆ. ಹಮಾಲರು ಎಪಿಎಂಸಿ ಅಂಗವಾಗಿದ್ದಾರೆ. ಹಮಾಲರ ಬೇಡಿಕೆಗಳನ್ನು ಈಡೇರಿಸಬೇಕು. ಹಮಾಲರ ಜೊತೆ ಅಸ್ಕಿ ಪೌಂಡೇಶನ್ ಸದಾ ನಿಲ್ಲುತ್ತದೆ. ಕರ್ನಾಟಕ ಬ್ಯಾಂಕದಲ್ಲಿ ಅಪಘಾತ ವಿಮೆ ಇದ್ದು, ಅದನ್ನು ಹಮಾಲರಿಗೆ ಒದಗಿಸಿಕೊಡಲು ಅಸ್ಕಿ ಪೌಂಡೇಶನ್ ಮಾಡಲಿದೆ. ಇದಕ್ಕೆ ಎಲ್ಲ ಹಮಾಲರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಯುವ ಹೋರಾಟಗಾರ ಶಿವರಾಜ ಗುಂಡಕನಾಳ ಮಾತನಾಡಿ, ಹಮಾಲರು ಸಮಾಜದ ಅಂಗವಾಗಿದ್ದಾರೆ. ಅವರಿಗೆ ಒದಗಿಸಿದ ನಿವೇಶನದಲ್ಲಿ ಮನೆ ನಿರ್ಮಿಸಿಕೊಡಬೇಕು. ಸ್ಲಂ ಬೋರ್ಡ ಮೂಲಕ ನಿಮಾಣ ಬೇಡ, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿಮರ್ಾಣ ಮಾಡಬೇಕು. ನಿಮ್ಮ ಹೋರಾಟಕ್ಕೆ ನಾವು ಸದಾ ಬೆಂಬಲವಾಗುತ್ತೇವೆ. ಹೋರಾಟಗಾರ ಮಧ್ಯೆ ಒಡಕು ಬೇಡ, ಒಮ್ಮತ ಇರಲಿ ಎಂದರು.
ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ನದೀ ಕಡು, ಇಬ್ರಾಹಿಂ ಮನ್ಸೂರ, ಬಸಣ್ಣ ನಾಯ್ಕೋಡಿ, ಹಮಾಲರ ಸಂಘದ ಅಧ್ಯಕ್ಷ ಸೋಪಿಸಾಬ ಪತ್ತೇಖಾನ, ಯಮನಪ್ಪ ಬರದೇನಾಳ, ಭೀಮಣ್ಣ ತಳವಾರ, ಶರಣಪ್ಪ ಹಿರೇಕುರುಬರ, ಸಂಜೀವಪ್ಪ ಬರದೇನಾಳ, ರಜಾಕಸಾಬ ಕಲಕೇರಿ, ಕಾಶಿನಾಥ ವಾಲಿಕಾರ, ಶೇಕಪ್ಪ ನಂದ್ಯಾಳ, ಶಿವರಾಜ ಮುತ್ತುಗೋಡ, ಈರಪ್ಪ ನಾಡೋಡಿ, ಶಂಕರ ಮುಶ್ಯಾಳ, ಮಲ್ಲಪ್ಪ ತಳವಾರ, ಮಲ್ಲಿಕಾರ್ಜುನ ಪದಗೋಳ, ಹಣಮಂತ ಪೂಜಾರಿ, ಗೋವಿಂದ ಬಿಳೇಭಾವಿ, ಭೀಮಾಶಂಕರ ಅಂಬಿಗೇರ, ಕಾಶಿನಾಥ ಹಿಪ್ಪರಗಿ, ನಿಂಗಪ್ಪ ಪೂಜಾರಿ, ರಾಮನಗೌಡ ಪಾಟೀಲ, ದೇವಪ್ಪ ಅಲ್ಲಾಪುರ, ಹಸನ ಕಲಕೇರಿ, ರವಿ ಬೆಂಗೇರಿ, ಮೈಹಿಬೂಬ ಸಿಂಧಗಲ, ಲಕ್ಷಣ ತಳವಾರ, ಶಿವಣ್ಣ ಪೂಜಾರಿ, ಬೀರಪ್ಪ ಪೂಜಾರಿ, ಮುದಕು ದೇವದುರ್ಗ, ಬಸವರಾಜ ಹಗರಟಗಿ, ರೈತ ಸಂಘದ ಅಧ್ಯಕ್ಷ ನಿಂಗನಗೌಡ ದೇಸಾಯಿ, ಮೊದಲಾದವರು ಇದ್ದರು.