ಚಿಕ್ಕೋಡಿ

ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆಗೆ ಒತ್ತಾಯ

ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆಗೆ ಒತ್ತಾಯ

ಲೋಕದರ್ಶನ ವರದಿ

ಮಾಂಜರಿ 14: ಜುಲೈ 11 ರಿಂದ ಸರಕಾರ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರವಾಸ ಬಸ್ ಪ್ರಾರಂಭಮಾಡಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಮಾಡುತ್ತಿರುವುದರಿಂದ ಗಡಿಯಲ್ಲಿನ ವಿದ್ಯಾರ್ಥಿಗಳು ಜೋತು ಬಿದ್ದು ನಿತ್ಯ ಪ್ರಯಾಣ ಮಾಡುವ ಪ್ರಸಂಗ ಬಂದೊದಗಿದ್ದು, ವಿದ್ಯಾರ್ಥಿಗಳ ಜೀವಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಪಾಲಕರ ಹಾಗೂ ಸಾರ್ವಜನಿಕರದ್ದಾಗಿದೆ. 

  ಗಡಿ ಗ್ರಾಮಗಳಲ್ಲಿ ದಿನನಿತ್ಯ ವಿದ್ಯಾರ್ಥಿಗಳು ಬಸ್ನಲ್ಲಿ ಹತ್ತಲು ಸರ್ಕಸ್ ಮಾಡಬೇಕಾಗುವ ಪ್ರಸಂಗ ಎದುರಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ನೂರಾರು ವಿದ್ಯಾರ್ಥಿಗಳು ದಿನನಿತ್ಯ ತಮ್ಮ ವಿದ್ಯಾರ್ಜನೆಗಾಗಿ ಚಿಕ್ಕೋಡಿ, ನಿಪ್ಪಾಣಿ ಸೇರಿದಂತೆ ವಿವಿಧ ಗ್ರಾಮಗಳಿಗೆ ದಿನನಿತ್ಯ ನೂರಾರು ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಆದರೆ ಬಸ್ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಮಾಡುತ್ತಿರುವುದರಿಂದ ಸ್ಥಳಾವಕಾಶದ ಕೊರತೆಯಿಂದಾಗಿ ಜೋತು ಬಿದ್ದು ವಿದ್ಯಾರ್ಥಿಗಳು ನಿತ್ಯ ಪ್ರಯಾಣ ಮಾಡುಬೇಕಾಗಿದೆ. ವಿದ್ಯಾರ್ಥಿಗಳ ಜೀವಕ್ಕೆ ಹೊಣೆ ಯಾರು ?. ಎಂಬ ಪ್ರಶ್ನೆ ಸಾರ್ವಜನಿಕರನ್ನು ಮತ್ತು ಪಾಲಕರನ್ನು ಕಾಡುತ್ತಿದೆ.

ಸಾಮಾನ್ಯವಾಗಿ ಸರಕಾರ ಮತ್ತು ಇಲಾಖೆಗಳು ಜನಸಂಖ್ಯೆ ಅನುಗುಣವಾಗಿ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕಾಗಿದೆ. ಬಸ್ನಲ್ಲಿ ಪ್ರವಾಸಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಬಸ್ಗಳ ಸಂಖ್ಯೆಯೂ ಸಹ ಹೆಚ್ಚಾಗಬೇಕಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಚಿಕ್ಕೋಡಿ, ಮಾಂಜರಿ ಯéಡೂರ ಚಂದುರ ಸದಲಗಾ, ನಿಪ್ಪಾಣಿ, ಮಜಲಟ್ಟಿ, ಬೇಡಕಿಹಾಳ, ಬೋರಗಾಂವ ಪಟ್ಟಣಗಳು ಶೈಕ್ಷಣಿಕ ಕೇಂದ್ರಗಳಾಗಿದ್ದು,  ಇಲ್ಲಿ ತಾಲೂಕಿನಲ್ಲಿಯೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೆಜುಗಳಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳನ್ನು ಬಿಡುವುದು ಅವಶ್ಯಕವಾಗಿದೆ. 

ದಿನನಿತ್ಯ ಮುಂಜಾನೆ 9 ರಿಂದ 11ರವರೆಗೆ ಮತ್ತು ಸಾಯಂಕಾಲ 5ರಿಂದ 6ರವರೆಗೆ ಬಸ್ಗಳು ತುಂಬಿರುತ್ತವೆ ಇದರಿಂದ ವಿದ್ಯಾರ್ಥಿಗಳ ಜೊತೆಗೆ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ. ಚಿಕ್ಕೋಡಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಸುಮಾರು 15000 ವಿದ್ಯಾರ್ಥಿಗಳು ಒದುತ್ತಾರೆ. ವಿದ್ಯಾರ್ಥಿಗಳು ಬೇರೂರಿಗೆ ಮತ್ತು ಬೇರೂರಿಂದ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ.

ಪ್ರತಿಯೊಂದು ಬಸ್ಗಳು ಮಹಿಳೆಯರಿಂದ ಮತ್ತು ಪ್ರಯಾಣಿಕರಿಂದ ತುಂಬಿಕೊಂಡು ಬರುತ್ತಿರುವುದರಿಂದ ವಿದ್ಯಾರ್ಥಿಗಳು ಬಸ್ ಹತ್ತಲು ಪರದಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯ ಅನುಗುಣವಾಗಿ ಬಸ್ಗಳ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಘಟಕದ ವ್ಯವಸ್ಥಾಪಕರಿಗೆವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರಲ್ಲದೆ, ಶಿಕ್ಷಣ ಸಂಸ್ಥೆಯ ಆಡಳಿ ಮಂಡಳಿಯವರು ಸಹ ಮಕ್ಕಳ ಪರಿಸ್ಥಿತಿ ನೋಡಿಯಾದರೂ ಸಾರಿಗೆ ಅಧಿಕಾರಿಗೆ ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನೂಕೂಲತೆಯ ಬಗ್ಗೆ ಮನವರಿಕೆ ಮಾಡಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಒತ್ತಾಯಿಸಬೇಕು ಎಂದು ಪಾಲಕರ ಒತ್ತಾಯವಾಗಿದೆ.

ಸುದ್ದಿ ಓದಿ