2ಬಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ
ಸಿಂದಗಿ 12: ಜಾತಿ ಗಣತಿ ವರದಿ, ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಹಾಗೂ 2ಬಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ತಾಲ್ಲೂಕು ಘಟಕದ ವತಿಯಿಂದ ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಮೊಹಮ್ಮದ ಜಾಫರ್ ಇನಾಮದಾರ ಮಾತನಾಡಿ, ಬೆಳಗಾವಿ ಸುವರ್ಣ ಸೌಧದಲ್ಲಿ ಪ್ರಾರಂಭಗೊಂಡಿರುವ ಚಳಿಗಾಲ ಅಧಿವೇಶನದಲ್ಲಿ ಶಾಸಕರು ಈ ಕುರಿತು ಧ್ವನಿ ಎತ್ತಬೇಕು ಎಂದು ಕೇಳಿಕೊಂಡರು.
ಮೊಹಮ್ಮದ ಜಕಾರಿಯಾ, ಸಯ್ಯದ ನಾಗಾವಿ, ಸೈಫನ್ ಮುಲ್ಲಾ, ಮೈನುದ್ದೀನ ಶೇಖ, ಗಾಲಿಬಸಾಬ ತಾಂಬೋಳಿ, ಇರ್ಷಾದ ಮುಲ್ಲಾ, ಮೈನುದ್ದೀನ ಹಾದಿಮನಿ ಇದ್ದರು.